-
ಬಸವರಾಜ ಸಿನ್ನೂರ
ಯಾದಗಿರಿ: ಜಿಲ್ಲೆಯ ಶಹಾಪುರ ತಾಲ್ಲೂಕಿನ ಪ್ರಯಾಣಿಕರ ಗೋಳು ಕೇಳುವರ್ಯಾರು ಎಂಬಂತಾಗಿದೆ
ಅದು ಹೇಳಿ ಕೇಳಿ ಅದು ಶಹಾಪುರ ಬಸ್ ನಿಲ್ದಾಣದಿಂದ ದೇವದುರ್ಗ ಬಸ್ಸು ಹತ್ತಿದರೆ ಸಾಕು ಹರಿದ ಸೀಟು,ಮುರಿದ ಬಾಗಿಲು, ವಾಹನದ ಕರ್ಕಶ ಶಬ್ದ ಎಲ್ಲೆಂದರಲ್ಲಿ ಸೀಟಿನ ಮೇಲೆ ಧೂಳು ಹೀಗೆ ಸಮಸ್ಯೆ ಹೇಳುತ್ತಾ ಹೋದರೆ ಒಂದಲ್ಲ ಎರಡಲ್ಲ ನೂರಾರು ಸಮಸ್ಯೆಗಳು ಇಲ್ಲಿ ಕಾಣಸಿಗುತ್ತವೆ.
ಈ ನೋಟ ಕಂಡು ಬಂದಿದ್ದು ನಿನ್ನೆ ಶಹಾಪುರದಿಂದ ದೇವದುರ್ಗಕ್ಕೆ ಹೋಗುವ ಬಸ್ಸಿನೊಳಗೆ.ಧೂಳು ತಿನ್ನುತ್ತಿದ್ದ ಸೀಟುಗಳು ಪ್ರಯಾಣಿಕರೇ ತಮ್ಮ ಕರಚಿಪ್ಪಿನಿಂದ ಕ್ಲೀನ್ ಮಾಡಿ ಕುಳಿತುಕೊಳ್ಳುವ ಸನ್ನಿವೇಶಗಳು ಕಂಡು ಬರುತ್ತೆವೆ ಪ್ರಯಾಣಿಕರು ಮೇಲಾಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ.
ಯಾಕೋ ಏನೋ ಗೊತ್ತಿಲ್ಲ ಮೇಲಾಧಿಕಾರಿಗಳ ಬೇಜವಾಬ್ದಾರಿಯೂ ಅಥವಾ ರಾಜಕಾರಣಿಗಳ ನಿರಾಸಕ್ತಿಯೋ ಹೈದರಾಬಾದ್ ಕರ್ನಾಟಕದಲ್ಲಿ ಅದು ಯಾದಗಿರಿ ವಿಭಾಗದಿಂದ ಅತಿ ಹೆಚ್ಚು ಸಾರಿಗೆ ಇಲಾಖೆಗೆ ಲಾಭ ತಂದುಕೊಡುವ ಜಿಲ್ಲೆಯಾಗಿದೆ ಯಾರು ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಸರ್ಕಾರಿ ಬಸ್ಸುಗಳೆಲ್ಲ ಬಹಳ ಹಳೆಯದಾಗಿರುತ್ತದೆ ಎಂದು ಹೇಳಲಾಗು ಆದರು ಅಧಿಕಾರಿಗಳು ನಿರ್ಲಕ್ಷ್ಯ ಮಾಡುತ್ತಿರುವುದು ಬಹಳ ನೋವೆನಿಸುತ್ತದೆ ಇಂಥ ಬಸ್ಸಿನೊಳಗೆ ಸಾರಿಗೆ ಇಲಾಖೆಯ ಮೇಲಾಧಿಕಾರಿಗಳು ಒಮ್ಮ ಪ್ರಯಾಣಿಸಿದರೆ ಈ ಪರಿಸ್ಥಿತಿ ಅವರಿಗೆ ಅರ್ಥವಾಗುತ್ತದೆ ಕೇವಲ ಎಸಿ ರೂಮಲ್ಲಿ ಕುಳಿತುಕೊಂಡರೆ ಅವರಿಗೆ ಅರ್ಥವಾಗಲ್ಲ ಎಂದು ಪ್ರಯಾಣಿಕರೊಬ್ಬರು ಖಾರವಾಗಿ ನುಡಿದರು.