ಬೆಂಗಳೂರು: ಜೆಎನ್ ಯು ವಿದ್ಯಾರ್ಥಿಗಳ ಮೇಲೆ ನಡೆದ ದಾಳಿ ಎಬಿವಿಪಿ ಮುಂದಿಟ್ಟುಕೊಂಡು ನಡೆಸಿದ ಸರಕಾರಿ ಪ್ರಾಯೋಜಿತ ಕೃತ್ಯದಂತೆ ಕಂಡು ಬರುತ್ತಿದೆ ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ಸಾಮಾಜಿ ಜಾಲತಾಣ ಟ್ವೀಟ್ ನಲ್ಲಿ ಟ್ವೀಟ್ ಮಾಡಿ ಖಂಡಿಸಿದ್ದಾರೆ.
ಮುಸುಕುದಾರಿ ಗುಂಪು ವಿವಿಯೊಳಗೆ ಹೇಗೆ ಪ್ರವೇಶ ಮಾಡಿದೆ? ಹಾಗೆ ಏಕಾಏಕಿ ಹೊರಗೆ ಹೋಗಿದೆ? ಅವರೆಲ್ಲ ಯಾರು? ಹೇಗೆ ಬಂದರು ? ಹೇಗೆ ಹೊರ ಹೋದರು? ವಿದ್ಯಾರ್ಥಿ ಗಳನ್ನು ಅಮಿತ್ ಷಾ ಭೀತಗೊಳಿಸಲು ಇಚ್ಛಿಸಿದಂತೆ ಕಾಣುತ್ತಿದೆ ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
. #JNUAttack seems State sponsored spearheaded by #ABVP
How can a “masked mob” get into #JNU?
How can this mob disappear all of a sudden?
Who are they?how did hey get in & out?
Looks like @AmitShah wants to induce fear into the students movement.
#SOSJNU— Priyank Kharge / ಪ್ರಿಯಾಂಕ್ ಖರ್ಗೆ (@PriyankKharge) January 5, 2020