ಮಹಿಳೆಯರ ಅರಿವಿನ ಸಬಲೀಕರಣವೇ ಎಲ್ಲಾ ಅಭಿವೃದ್ದಿಗು ಮೂಲ: ಡಾ.ನೀಲಾಂಬಿಕಾ ಪೋಲಿಸ್ ಪಾಟೀಲ

0
351

ಕಲಬುರಗಿ: ಹನ್ನೆರಡನೆಯ ಶತಮಾನ ಶಿವಶರಣರು ಮತ್ತು ಶಿವಶರಣೆಯರು ಎಲ್ಲಾ ಸುಧಾರಣೆಗಳಿಗೆ ವ್ಯಕ್ತಿಯ ಅರಿವಿನ ಸಬಲೀಕರಣವೇ ಮೂಲ ಎಂದಿದ್ದರು. ಪ್ರತಿಯೊಬ್ಬ ಸಾಧಕನು ಏನೆ ಸಾಧನೆ ಮಾಡಬೇಕಾದರೆ ಮೋದಲು ತನ್ನ ಅರಿವನ್ನು ಮೊದಲು ಸ್ಪಷ್ಟಪಡಿಸಿಕೊಳ್ಳಬೇಕು ಅದರಲ್ಲಿಯೂ ಮನೆಯ ಆಧಾರಸ್ಥಂಬವಾಗಿರುವ ಮಹಿಳೆಯರ ಅರಿವಿನ ಸಬಲೀಕರಣವೇ ಸಮಾಜದ ಎಲ್ಲ ರಂಗಗಳ ಅಭಿವೃದ್ಧಿಗೆ ಮೂಲ ಕಾರಣವೆಂದು ಡಾ.ನೀಲಾಂಬಿಕಾ ಪೋಲಿಸ್ ಪಾಟೀಲ ಅವರು ಅಭಿಪ್ರಾಯ ಪಟ್ಟರು.

ಕಲಬುರಗಿ ಬಸವ ಸಮಿತಿಯ ಅನುಭವ ಮಂಟಪದಲ್ಲಿ  ಲಿಂ. ಜಗದೇವಪ್ಪ ರೇವಪ್ಪ ಮೋತಕಪಲ್ಲಿ  ಸ್ಮರಣಾರ್ಥ ಅರಿವಿನ ಮನೆ 621 ನೆಯ ದತ್ತಿ ಕಾರ್ಯಕ್ರಮದಲ್ಲಿ “ಶಿವಶರಣೆಯರು ಮತ್ತು ಅರಿವಿನ ಸಬಲೀಕರಣ” ಎಂಬ ವಿಷಯದ ಮೇಲೆ ಅನುಭಾವ ನೀಡುತ್ತಾ ಮಾತನಾಡಿದ ಮಾತೋಶ್ರೀ ಗೋದುತಾಯಿ ಮಹಿಳಾ ಮಾಹವಿದ್ಯಾಲಯ ಪ್ರಾಂಶುಪಾಲರಾದ ಡಾ. ನೀಲಾಂಬಿಕಾ ಪೋಲಿಸ್ ಪಾಟೀಲ ಅವರು ಮಾತನಾಡುತ್ತ ಶರಣರು ಸಾಮಾಜಿಕ, ಧಾರ್ಮಿಕ ಮತ್ತು ಸಾಂಸ್ಕøತಿಕ ಸುಧಾರಣೆ ಮಾಡಬೇಕಾದರೆ ಮೊದಲು ವ್ಯಕ್ತಿಯ ಅಂತರಂಗದಲ್ಲಿ ಅರಿವಿನ ಬೀಜ ಬಿತ್ತಿದರು. ಅರಿವು ಸದೃಢವಾದಾಗ ಏನೆಲ್ಲಾ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಆದರೆ ಪ್ರಸ್ತುತ ಸಂದರ್ಭದಲ್ಲಿ ದೊಡ್ಡ ಹುದ್ದೆಯಲ್ಲಿದ್ದವರು ಶ್ರೇಷ್ಠರೆನಿಸಿಕೊಂಡವರು ಅರಿವನ್ನು ಮರೆತು ಬ್ರಷ್ಟಚಾರ ಅನೈತಿಕತೆ ಮತ್ತು ಮೋಸಗಾರಿಕೆಯಲ್ಲಿಯೇ ಕಾಲ ಕಳೆಯುತ್ತಿರುವುದರಿಂದ ಎಲ್ಲಯೂ ಶಾಂತಿ ಸಮಾಧಾನ ಮತ್ತು ಸಂತಸದ ವಾತಾವರಣ ಮೂಡುತ್ತಿಲ್ಲವೆಂದು ಅವರು ಅಭಿಪ್ರಾಯ ಪಟ್ಟರು.

Contact Your\'s Advertisement; 9902492681

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸ್ಥಳೀಯ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ಉಪನ್ಯಾಸಕರಾದ ಡಾ. ಸಿದ್ಧರಾಮಯ್ಯ ಮಠ ಅವರು ಮಾತನಾಡುತ್ತ ಪ್ರತಿಯೊಬ್ಬರು ವಚನಗಳನ್ನು ಕೇವಲ ಬಾಯಿಮಾತಿನಲ್ಲಿ ಹೇಳದೆ ಕನಿಷ್ಟ ಒಂದು ವಚನವನ್ನಾದರು ಅನುಷ್ಠಾನದಲ್ಲಿ ತಂದರೆ ಸಮಾಜ ತನ್ನಿಂದ ತಾನೆ ಸುಧಾರಣೆ ಆಗುತ್ತದೆ ಎಂದು ನುಡಿದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ದತ್ತಿ ದಾಸೋಹಿಗಳಾದ ಕಾಶಿನಾಥ ಮೋತಕಪಲ್ಲಿ ನ್ಯಾಯವಾದಿಗಳು ಸ್ವಾಗತ ಕೋರಿ ಪ್ರಾಸ್ತಾವಿಕ ಮಾತನಾಡಿದರು. ಕಲಬುರಗಿ ಬಸವ ಸಮಿತಯ ಪ್ರಧಾನ ಕಾರ್ಯದರ್ಶಿಗಳಾದ ಎಚ್. ಕೆ ಉದ್ದಂಡಯ್ಯನವರು ದತ್ತಿ ಪರಿಚಯ ಮಾಡಿ ಕಾರ್ಯಕ್ರಮ ನಿರೂಪಿಸಿದರು.

ಎಮ್. ವೈ. ಸುರಪುರ ಅವರು ನಡೆಸಿಕೊಟ್ಟ ವಚನಸಂಗೀತ ಎಲ್ಲರ ಗಮನ ಸೆಳೆಯಿತು ವೇದಿಕೆಯ ಮೇಲೆ ಕಲಬುರಗಿ ಬಸವ ಸಮಿತಿಯ ಅಧ್ಯಕ್ಷರಾದ ಡಾ. ವಿಲಾಸವತಿ ಖೂಬಾ, ಉಪಾಧ್ಯಕ್ಷರಾದ ಡಾ. ಜಯಶ್ರೀ ದಂಡೆ, ಡಾ. ಬಿ. ಡಿ. ಜತ್ತಿ ವಚನ ಅಧ್ಯಯನ ಮತ್ತು ಸಂಶೋಧನ ಕೇಂದ್ರದ ನಿದೇರ್ಶಕರಾದ ಡಾ. ವೀರಣ್ಣ ದಂಡೆ ಅವರು ಉಪಸ್ಥಿತರಿದ್ದರು ಕಾರ್ಯಕ್ರಮದಲ್ಲಿ ಮೋತಕಪಲ್ಲಿ ಪರಿವಾರದವರು ಭಾಗವಹಿಸಿದ್ದವರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here