ಬೇಡಿಕೆಗಳ ಈಡೇರಿಸಲು ಜಿಲ್ಲಾಧಿಕಾರಿಗಳಿಗೆ ಶೋಷಿತರ ಸಂಘಟನೆ ಮನವಿ

0
45

ಸುರಪುರ: ತಾಲೂಕಿನ ಅನೇಕ ಬೇಡಿಕೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿದ್ದು ಎಲ್ಲವುಗಳನ್ನು ಈಡೇರಿಸುವಂತೆ ಶೋಷಿತರ ಪರ ಹೋರಾಟದ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಒತ್ತಾಯಿಸಿದರು.

ತಹಸೀಲ್ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಸಂಘಟನೆ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ,ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದೊಡ್ಡ ಮಟ್ಟದಲ್ಲಿದ್ದು ಶೀಘ್ರವೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಅನೇಕ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಆಶ್ರಯ ಮನೆಗಳ ನಿರ್ಮಾಣ ವಿಳಂಭವಾಗುತ್ತಿದೆ ಕ್ರಮ ಕೈಗೊಳ್ಳಬೇಕು. ತಾಲೂಕಿನ ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಸರಿಯಾದ ಆಹಾರ ನೀಡುತ್ತಿಲ್ಲ ಕ್ರಮ ಕೈಗೊಳ್ಳಬೇಕು. ರೈತರಿಗೆ ಸಾಲಮನ್ನಾ ನೆಪದಲ್ಲಿ ಬ್ಯಾಂಕುಗಳು ರೈತರಿಗೆ ಸಾಲ ಸೌಲಭ್ಯ ನೀಡುತ್ತಿಲ್ಲ ರೈತರಿಗೆ ಸಾಲ ಕೊಡಿಸಬೇಕು.ಮುಖ್ಯವಾಗಿ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ಮುಂದೆ ಇರುವ ಸುಮಾರು ಐವತ್ತು ಎಕರೆ ಕೆರೆಯನ್ನು ಸ್ವಚ್ಛಗೊಳಿಸಿ ಏತ ನೀರಾವರಿಗೆ ಅಳವಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.

Contact Your\'s Advertisement; 9902492681

ನಂತರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ನಿಮ್ಮ ಬೇಡಿಕೆಗಳ ಈಡೇರಿಸಲು ಕ್ರಮವಹಿಸುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ಉಸ್ತಾದ ವಜಾಹತ್ ಹುಸೇನ್,ಗೋಪಾಲ ಬಾಗಲಕೋಟೆ, ಚಳಿಗೆಪ್ಪಗೌಡ ಪೊಲೀಸ್ ಪಾಟೀಲ,ದೇವಿಂದ್ರಪ್ಪ ನಾಯಕ,ಕಿಷ್ಟಪ್ಪ ದೊರೆ,ಯಂಕೋಬ ನಾಯ್ಕೋಡಿ,ಭಿಮರಾಯ ತಿಪ್ಪನಟಿಗಿ,ಕೆಂಚಪ್ಪ ಮಾಕಣ್ಣೋರ,ಧರ್ಮಣ್ಣ ಸಾಹು ನಾಶಿ,ಮುತ್ತಯ್ಯ ಅಲಗೂರು,ದ್ಯಾವಪ್ಪ ಸುಗೂರು,ಕಾಮಣ್ಣ ಹಸನಾಪುರ,ಮಂಜಪ್ಪ ಕನ್ನೆಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here