ಸುರಪುರ: ಇಸ್ಲಾಂ ಧರ್ಮದ ಮೂಲ ಎಂದರೆ ಶಾಂತಿಯಾಗಿದೆ.ಇದನ್ನು ಅರಿತುಕೊಂಡ ಯಾವ ಮುಸ್ಲೀಮನು ಅಶಾಂತಿ ಹರಡಲು ಮುಂದಾಗಲಾರ ಎಂದು ಜೈನಮುನಿ ಅಭಿನಂದನ ಸಾಗರಜೀ ಹೇಳಿದರು.
ನಗರದ ಜಾಮೀಯಾ ಮಸೀದಿಯಲ್ಲಿ ಸಾಮೂಹಿಕ ಪ್ರಾರ್ಥನೆ ನಂತರ ನಡೆಸಿದ ಪ್ರವಚನದಲ್ಲಿ ಭಾಗವಹಿಸಿ ಮಾತನಾಡಿ ಮಾನವೀಯ ಮೌಲ್ಯಗಳು,ಪರಸ್ಪರಲ್ಲಿ ಮಾನವೀಯ ಮೌಲ್ಯಗಳನ್ನು ಹಾಗೂ ಗೌರವದ ಭಾವನೆಗಳನ್ನು ಬೆಳೆಸುವುದು ಪ್ರತಿಯೋಬ್ಬರ ಜವ್ಬಾದಾರಿಯಾದೆ ಎಂದರು.
ಈ ಸಂದರ್ಭದಲ್ಲಿ ಬಾಲಮುನಿಗಳಾದ ನೇಮಿಚಂದ, ಮತ್ತು ನಮಿಚಂದರವರು ಕುರಾನಿನ್ ಶ್ಲೋಕಗಳನು ಉಚ್ಛರಿಸಿ, ಇದು ಭಾರತೀಯ ಸೌರ್ಹಾದತೆಗೆ ಸಾಕ್ಷಿಯಾಗಿದೆ ಇಂತಹ ಅಮೂಲ್ಯವಾದ ಎಲ್ಲಾ ಧರ್ಮದ ಗ್ರಂಥಗಳನ್ನು ಪ್ರತಿಯೊಬ್ಬರು ಅರಿತಾಗ ಸೌಹಾರ್ಧ ಸಮಾಜ ಸಾಧ್ಯ ಎಂದರು.
ಈ ಸಂದರ್ಭದಲ್ಲಿ ಮುಫ್ತಿ ಇಕ್ಬಾಲ ಅಹ್ಮದ ಒಂಟಿ ಮಾತನಾಡುತ್ತಾ ಪ್ರತಿಯೊಂದು ಧರ್ಮದ ಮೂಲ ಆಶಯವೇ ಪರಸ್ಪರ ಸಹಬಾಳ್ವೆ, ಸೌರ್ಹಾದತೆ ಆಗಿದೆ, ಅದರಲ್ಲೂ ಸುರಪುರದ ಮಣ್ಣಿನಲ್ಲಿ ಅದು ರಕ್ತಗತವಾಗಿದೆ ಎಂದು ಅಭಿಪ್ರಾಪಟ್ಟರು.
ಪ್ರವಚನದಲ್ಲಿ ಪ್ರಮುಖರಾದರಮೇಶಚಂದ ಜೈನ, ಖಾಜಾ ಖಲೀಲ್ ಅಹ್ಮದ ಅರಕೇರಿ, ಲಿಯಾಖತ ಹುಸೇನ ಉಸ್ತಾದ, ಡಾ.ಮುನವರ ಬೋಡೆ, ಇಮ್ತಿಯಾಜ ಹುಸೇನ್ ಗುತ್ತೇದಾರ, ಮುನೀರಸಾಬ್‌ತಿರಂದಾಜ್, ನಯೀಮ್ ತಿರಂದಾಜ್, ಆಬಿದಹುಸೇನ ಪಗಡಿಬಂದ, ಮೌಲಾ ಸೌದಾಗರ, ಉತ್ತಮ ಜೈನ, ರಾಯಚಂದ ಜೈನ, ಸಂಜಯ ಜೈನ, ಇಕ್ಬಾಲ ಸೌದಾಗರ, ಅಜೀಮ್ ಫರೀದಿ, ಅನ್ವರ ಜಮಾದಾರ ಅನೇಕ ಮುಸ್ಲೀಮ ಬಾಂಧವರು ಉಪಸ್ಥಿತರಿದ್ದರು.