ಬೇಡಿಕೆಗಳ ಈಡೇರಿಸಲು ಗ್ರಾಮ ಸಹಾಯಕರ ಸಂಘ ಮನವಿ

0
258

ಸುರಪುರ: ಕಂದಾಯ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗ್ರಾಮ ಸಹಾಯಕರನ್ನು ಸೇವಾ ನಿಯಮಾವಳಿ ರಚಿಸಿ ಕನಿಷ್ಠ ೧೦ವರ್ಷ ಸೇವೆ ಸಲ್ಲಿಸಿದವರಿಗೆ ಮುಂಬಡ್ತಿ ನೀಡಿ ಕಂದಾಯ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಸರ್ಕಾರದೊಂದಿಗೆ ಚರ್ಚೆ ಮಾಡಿ ಒತ್ತಡ ಹೇರುವಂತೆ ಕರ್ನಾಟಕ ರಾಜ್ಯ ಕಂದಾಯ ಇಲಾಖೆ ಗ್ರಾಮ ಸಹಾಯಕರ ಸಂಘದ ಜಿಲ್ಲಾ ಘಟಕದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಾಸಕ ರಾಜುಗೌಡ ಅವರಿಗೆ ಮನವಿ ಸಲ್ಲಿಸಲಾಯಿತು.

ಕಂದಾಯ ಇಲಾಖೆಯಲ್ಲಿ ಸುಮಾರು ೪೫ ವರ್ಷಗಳಿಂದ ಗ್ರಾಮ ಸಹಾಯಕರಾಗಿ ಹಗಲಿರುಳು ದುಡಿಯುತ್ತಿದ್ದು ಸರಕಾರದ ಯಾವುದೇ ಸೇವಾ ಭದ್ರತೆ ಇಲ್ಲದೆ ಕೇವಲ ೧೨ಸಾವಿರ ರೂ ವೇತನದಲ್ಲಿ ಸೇವೆ ನಿರ್ವಹಿಸುವಂತಾಗಿದೆ ಚುನಾವಣೆ ಕೆಲಸ, ಬೆಳೆಗಳ ಜಿಪಿಎಸ್, ಜನನ-ಮರಣ ವರದಿ ನೀಡುವುದು, ಅತಿವೃಷ್ಠಿ-ಅನಾವೃಷ್ಠಿಗೊಳಗಾದ ಕುಟುಂಬಗಳ ಮಾಹಿತಿ ನೀಡುವುದು ಸೇರಿದಂತೆ ಗ್ರಾಮದಲ್ಲಿರುವ ಪ್ರತಿಯೊಂದು ಸಮಸ್ಯೆಗಳಿಗೆ ಸ್ಪಂದಿಸುತ್ತಾ ಕಂದಾಯ ಇಲಾಖೆಯ ಬೆನ್ನೆಲುಬಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇವೆ ಎಂದು ಶಾಸಕ ರಾಜುಗೌಡ ಅವರಿ ಮನವಿ ಸಲ್ಲಿಸಿ ತಮ್ಮ ಸಂಕಷ್ಟ ತೋಡಿಕೊಂಡರು.

Contact Your\'s Advertisement; 9902492681

ಈಗ ಗ್ರಾಮ ಸಹಾಯಕರ ಖಾಯಾಮಾತಿಯ ಕಡತವು ಕಂದಾಯ ಇಲಾಖೆಯಲ್ಲಿ ಅಂತಿಮ ಹಂತದಲ್ಲಿ ಡಿ ದರ್ಜೆ ಖಾಯಾಮಾತಿಯು ಹಿಂದಿನ ಸರಕಾರದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ೭೦ಕೋಟಿ ರೂ ಹಣವನ್ನು ಮೀಸಲಿಡಲು ಬಜೆಟ್‌ನ ಪೂರ್ವಭಾವಿ ಸಭೆ ನಿರ್ಣಯಿಸಿದರೂ ಖಾಯಂ ಘೋಷಣೆ ಕೈಗೊಳ್ಳದೇ ಸರಕಾರ ಮಲತಾಯಿ ಧೋರಣೆ ತೋರಿಸುತ್ತಿದೆ ಕಾರಣ ಈ ಬಾರಿಯ ಬಜೆಟ್ ಪೂರ್ವಭಾವಿ ಸಭೆಗಿಂತ ಮುಂಚೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರೊಂದಿಗೆ ಚರ್ಚೆ ಮಾಡಿ ಗ್ರಾಮ ಸಹಾಯಕರನ್ನು ಡಿ ಗ್ರುಪ್ ನೌಕರರೆಂದು ಖಾಯಂಗೊಳಿಸುವುದು ಸೇರಿದಂತೆ ಗ್ರಾಮ ಸಹಾಯಕರ ವೇತನ ನೀಡುವ ಅನುದಾನವನ್ನು ೩ ತಿಂಗಳಿಗೊಮ್ಮೆ ನೀಡುವ ಬದಲಾಗಿ ಒಂದೇ ಹಂತದಲ್ಲಿ ವೇತನದ ಹಣವನ್ನು ಬಿಡುಗಡೆಗೊಳಿಸುವುದು, ನಿವೃತ್ತಿ ಹೊಂದಿರ ಗ್ರಾಮ ಸಹಾಯಕರಿಗೆ ಕನಿಷ್ಠ ೪ಲಕ್ಷ ರೂ ಪರಿಹಾರ ಧನ ನೀಡುವುದು, ನಿವೃತ್ತಿಗೊಂಡವರಿಗೆ ಮಾಸಿಕ ಪಿಂಚಣಿಯನ್ನು ನೀಡಬೇಕು, ಸರಕಾರಿ ನೌಕರರಿಗೆ ನೀಡುವ ವೈದ್ಯಕೀಯ ಭತ್ಯೆ ಹಾಗೂ ಇನ್ನೀತರ ಭತ್ಯೆಗಳನ್ನು ಮಂಜೂರಿಗೊಳಿಸಬೇಕು ಹಾಗೂ ತಹಶೀಲ್ ಕಾರ್ಯಾಲಯದಲ್ಲಿ ರಾತ್ರಿ ಪಾಳೆಕ್ಕೆ ಗ್ರಾಮ ಸಹಾಯಕರನ್ನು ಕೈ ಬಿಡುವುದು ಸೇರಿದಂತೆ ಗ್ರಾಮ ಸಹಾಯಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ಮನವಿ ಸಲ್ಲಿಸಿ ಒತ್ತಾಯಿಸಿದರು.

ಸಂಘದ ಗೌರವಾಧ್ಯಕ್ಷ ಸೈದಪ್ಪ ಶಿವಪೂರ, ಜಿಲ್ಲಾಧ್ಯಕ್ಷ ಮಲ್ಲಪ್ಪ ಗೋಗಿ, ಕಾರ್ಯದರ್ಶಿ ತಾಯಪ್ಪ ಯಾದಗಿರಿ, ಉಪಾಧ್ಯಕ್ಷ ಅಲ್ಲಾಭಕ್ಷ ಶಾನಿ ಕಕ್ಕೇರಾ, ಖಜಾಂಚಿ ದೇವಿಂದ್ರಪ್ಪ ಕನ್ಯೆಕೋಳೂರು, ಪದಾಧಿಕಾರಿಗಳಾದ ಆನಂದ ಕರಡಕಲ್, ಅಶೋಕ ಗುಡಗುಂಟಿ, ಮಲ್ಲಪ್ಪ ಖಾನಾಪುರ, ಗಜೇಂದ್ರ ಬೆಳಗುಂದಿ, ಯಲ್ಲಪ್ಪ ರತ್ತಾಳ, ಸಿದ್ದು ವಾಗಣಗೇರಾ, ನಿಂಗಪ್ಪ ಆಲ್ಹಾಳ ಕೆಂಭಾವಿ, ಗುರಪ್ಪ ನಗನೂರು, ತಿಮ್ಮಣ್ಣ ಹೆಗ್ಗನದೊಡ್ಡಿ, ಮುನೀರಾ ಬೇಗಂ ಕೆಂಭಾವಿ, ರಾಜಪ್ಪ ಬಳಿಚಕ್ರ, ರಮೇಶ ಅಲ್ಲಿಪುರ ಹಾಗೂ ಇತರರು ಇದ್ದರು.

ಮನವಿ ಪತ್ರವನ್ನು ಸ್ವೀಕರಿಸಿದ ಶಾಸಕ ರಾಜುಗೌಡ ಅವರು ಗ್ರಾಮ ಸಹಾಯಕರ ಬೇಡಿಕೆಗಳು ನ್ಯಾಯಯುತವಾಗಿದ್ದು ಈ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರೊಂದಿಗೆ ಬಜೆಟ್ ಪೂರ್ವಭಾವಿ ಸಭೆಗಿಂತ ಮುಂಚೆ ಚರ್ಚಿಸುವುದಾಗಿ ಆಶ್ವಾಸನೆ ನೀಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here