ಕಲಬುರಗಿ: ಸಿಎಎ ಹಾಗೂ ಎನ್ಆರ್ಸಿ ಬೆಂಬಲಿಸಿ ಇಂದು ನಗರದಲ್ಲಿ ನಡೆದ ಮೆರವಣಿಗೆಯಲ್ಲಿ ಭಾಗಿಯಾದ ವ್ಯಕ್ತಿ ಓರ್ವ ಹೃದಯಘಾತದಿಂದ ಮೃತಪಟ್ಟರುವ ಘಟನೆ ನಡೆದಿದೆ.
ಈಶ್ವರ್ ಚಂದ್ರ (72) ಮೃತ ದುರ್ದೈವಿಯಾಗಿದ್ದು, ಮೆರವಣಿಗೆಯ ವೇಳೆ ಹೃದಯಘಾತವಾಗಿದೆ ಎನ್ನಲಾಗಿದ್ದು, ಕೂಡಲೇ ಆಂಬ್ಯುಲೆನ್ಸ್ ಮುಖಾಂತರ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.