ಸೇಡಂ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಸರ್ಕಾರ ದ್ವಿತೀಯ ಮತ್ತು ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಹೊರತು ಪಡಿಸಿ ಕೇವಲ ಪ್ರಥಮ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಮಾತ್ರ ಲ್ಯಾಪ್ ಟಾಪ್ ನೀಡುತ್ತಿದ್ದು , ವಿಧ್ಯಾರ್ಥಿಗಳಲ್ಲೆ ತಾರತಮ್ಯ ಮಾಡುತ್ತಿದ್ದಾರೆ , ಎಂದು ಸರ್ಕಾರದ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿಲಾಯಿತ್ತು.
ಪಟ್ಟಣದ ಕರ್ನಾಟಕ ರಕ್ಷಣಾ ವೇದಿಕೆ, BVF ವಲೆಂಟರಿ ಫೊರ್ಸ್ ಸಮಿತಿ . ಮತ್ತು ಹಜರತ್ ಶಾಹಿದ್ ಟೀಪು ಸುಲ್ತಾನ ಸಂಘದ ನೇತೃತ್ವದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರತಿಭಟನೆಯನ್ನು ಬಸ್ ನಿಲ್ದಾಣದ ಹಳೆಯ ಪ್ರವಾಸಿ ಮಂದಿರದಿಂದ ,ಚೌರಾಸ್ತಾ , ಕಿರಣಬಜಾರ ದಿಂದ ನೆರವಾಗಿ ಸಹಾಯಕ ಆಯುಕ್ತರ ಕಛೇರಿ ವರೆಗೆ ಪ್ರತಿಭಟನೆ ತಲುಪಿದ .
ನಂತರ ವಿವಿಧ ಸಂಘಟನೆ ನಾಯಕರು ಮಾತನಾಡಿ ಸರಕಾರ ಈ ರೀತಿ ಭೇದ ಮಾಡುತ್ತಿದೆ , ಪ್ರತಿಯೊಬ್ಬ ವಿಧ್ಯಾರ್ಥಿಗಳಲ್ಲಿ ವಿಧ್ಯಾಭ್ಯಾಸದ ಜೋತೆ ದೊಡ್ದದಾದ್ದ ಕನಸುಗಳು ಕಟ್ಟಿಕೊಂಡಿರುತ್ತಾರೆ ಆದ್ದುದರಿಂದ ವಿಧ್ಯಾಭ್ಯಾಸಕ್ಕೆ ಲ್ಯಾಪ್‌ಟಾಪ್ ಮುಖ್ಯ ವಾಗಿರುತ್ತದ್ದೆ , ಸರ್ಕಾರ ವಿಧ್ಯಾರ್ಥಿಗಳ ಮಧ್ಯೆ ಭೇದ ಮುಡಿಸದ್ದೆ ಪ್ರತಿಯೊಬ್ಬ ವಿಧ್ಯಾರ್ಥಿಗಳಿಗೆ ಸಮಾನವಾಗಿ ಲ್ಯಾಪ್‌ಟಾಪ್ ಕೊಡುವ ಜವಾಬ್ದಾರಿ ಸರ್ಕಾರ ದ್ದಾಗಿರುತ್ತದ್ದೆ , ಸರಕಾರಿ ಶಾಲಾ ಕಾಲೇಜುಗಳಲ್ಲಿ ಬಡ ವಿಧ್ಯಾರ್ಥಿ ಗಳೆ ಹೇಚ್ಚಾಗಿ ಪ್ರವೇಶ ಪಡೆದಿರುತ್ತಾರೆ , ಎಲ್ಲ ವರ್ಗದ ಬಡ ವಿಧ್ಯಾರ್ಥಿ ಗಳಿಗೆ ಸಮಾನವಾಗಿ ನೀಡುವ ಕಾರ್ಯ ತಮದ್ದಾಗಿರುತ್ತದೆ , ನಮ್ಮ ಮನವಿಗೆ ಸ್ಪಂದಿಸದ್ದಿದರೆ ಮುಂದಿನ ದಿನಗಳಲ್ಲಿ ಜಿಲ್ಲಾ ಮತ್ತು ರಾಜ್ಯಾದ್ಯಂತ ಉಗ್ರವಾದ ಹೋರಾಟ ಮಾಡಲಾಗುತ್ತದೆ ಅವರು ಸರಕಾರಕ್ಕೆ ಎಚ್ಚರಿಕೆ ನೀಡಿದರು,
ನಂತರ ಸಹಾಯಕ ಆಯುಕ್ತ ಆಗಿರುವ ಮಹೇಶ ಕೋಲಾರ ರವರ ಮುಖಾಂತರ ಮಾನ್ಯ ಮುಖ್ಯಮಂತ್ರಿ ಗಳಿಗೆ ಹಾಗೂ ಸ್ಥಳೀಯ ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ರವರಿಗೆ ಮನವಿ ಪತ್ರ ಸಲ್ಲಿಸಿದರು ,
ಈ ಸಂದರ್ಭದಲ್ಲಿ ಕರವೇ ನಗರ ಅಧ್ಯಕ್ಷರು ಸತೀಷ ಧುದನಿ , ಕೆ. ಮಹೇಶ BVF ಜಿಲ್ಲಾಧ್ಯಕ್ಷರು , ರೇವಣಸಿದ್ದಪ್ಪ ತಾಲೂಕಾಧ್ಯಕ್ಷರು BVF , ಅಶೋಕ ಭೀಮಳಿ , ಅನೀಲ ಹಳಿಮನಿ , ಅನಂತ ಕುಮಾರ ಹುಳಗೋಳ , ರಾಹುಲ್ ಪಾಟೀಲ್, ಶಿವುಕುಮಾರ ಉಡಗ್ಗಿ , ಮಹಾಂತೇಶ ಗಂಜಿಗೇರಿ , ಯಲ್ಲಾಲಿಂಗ , ದಿಲೀಪ ಕುಮಾರ , ಶರತಕುಮಾರ , ನಾಗಪ್ಪ, ಶರಣಪ್ಪ , ಸೈಯಾದಖಾಜಿ , ವಿಷ್ಣುವರ್ದನ ಉಡಗ್ಗಿ , ಮಹಾದೇವ ಕೋಡ್ಲಾ , ವಿಶ್ವನಾಥ ಸಂಗಾವಿ , ಚಂದ್ರಶೇಖರ ಯಡಳ್ಳಿ ಸೇರಿದಂತೆ ನೂರಾರು ವಿಧ್ಯಾರ್ಥಿಗಳು ಪಾಲ್ಗೊಂಡಿದರು .