ಆಳಂದ: ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಎಸ್‌ಆರ್‌ಜಿ ಫೌಂಡೇಷನ್‌ನ ಅಡಿಯಲ್ಲಿ ನಡೆಯುತ್ತಿರುವ ಎಸ್‌ಆರ್‌ಜಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಂಗಳವಾರ ಸಂಭ್ರಮದಿಂದ ಪಾಲಕರೊಂದಿಗೆ ಸಂಕ್ರಾಂತಿ ಭೋಗಿ ಹಬ್ಬವನ್ನು ಆಚರಿಸಲಾಯಿತು.
ಸರಸ್ವತಿಯ ಭಾವಚಿತ್ರಕ್ಕೆ ಪೂಜೆ ಕೈಗೊಂಡು ಸಂಕ್ರಾಂತಿ ಹಬ್ಬದ ಮಹತ್ವವನ್ನು ಮಕ್ಕಳಿಗೆ ತಿಳಿ ಹೇಳಲಾಯಿತು. ಭೋಗಿಯ ಅಂಗವಾಗಿ ಮಕ್ಕಳಿಗೆ ಸಂಪ್ರಾದಾಯಿಕವಾಗಿ ಮಂತ್ರಾಕ್ಷತೆ ಹಾಕಿ ಬಾರೆಹಣ್ಣು, ಚುರುಮುರಿ, ಕಬ್ಬು, ಬಾಳೆ ಹಣ್ಣು, ನಾಣ್ಯ, ಚಾಕೋಲೆಟನಿಂದ ಮಕ್ಕಳನ್ನು ಎರೆದು ಆರತಿ ಬೆಳಗಿ ಹರಸಲಾಯಿತು. ಸಂಕ್ರಾಂತಿ ಹಬ್ಬದ ಪ್ರಯುಕ್ತ ಪಾಲಕರಿಗಾಗಿ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪಾಲಕರು ಉತ್ಸಾಹದಿಂದ ಪಾಲ್ಗೊಂಡು ರಂಗೋಲಿ ಬಿಡಿಸಿದರು. ಸ್ಪರ್ಧಾಳುಗಳಿಗೆ ಭಾಗವಹಿಸುವಿಕೆಯ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿ ಕಿರಣ್ಮಯಿ, ಸಿಬ್ಬಂದಿಗಳಾದ ಗೋಪಿಕಾ, ಸಾವಿತ್ರಿ, ಜಯಶ್ರೀ, ವಿನುತಾ, ವಿಜಯಲಕ್ಷ್ಮೀ, ರಂಜಿತಾ, ಅಂಬಿಕಾ, ಮೇಟಿಲ್ಡಾ, ಅನೀಲ, ದೇವಿಂದ್ರ, ಸಂತೋಷ, ವಾಹೀದ್, ದೀಪಿಕಾ, ಪುತಳಾಬಾಯಿ, ಗೀತಾ, ಮಹಾನಂದಾ, ಪೂಜಾ, ಅನಿತಾ,. ನಿರ್ಮಲಾ, ಜ್ಯೋತಿ, ರವಿರಾಜ, ಆನಂದ, ಶಿವುಕುಮಾರ, ಲಕ್ಷ್ಮೀ, ಮಹೇಶ, ಅಶ್ವಿನಿ, ಅನಿಲ್ ಸೋಲಂಕರ್, ಸೇಹರಬಾನು, ರಾಜಶ್ರೀ, ಸೇರಿದಂತೆ ಇತರೆ ಭೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ರಂಗೋಲಿ ಸ್ಪರ್ಧೆಯಲ್ಲಿ ಪಾಲಕರಾದ ಅಶ್ವಿನಿ, ಪ್ರಿಯಾಂಕಾ, ಸರೋಜಾ, ಅನುರಾಧಾ, ಪ್ರೀತಿ, ಸರಸ್ವತಿ, ಕಾವೇರಿ, ಭಾಗ್ಯಶ್ರೀ, ವಿಜಯಲಕ್ಷ್ಮೀ, ಭಾಗ್ಯಶ್ರೀ ಸೇರಿದಂತೆ ಇತರರು ಭಾಗವಹಿಸಿದ್ದರು.