ಕಲಬುರಗಿ: ಕೇಂದ್ರ ಸರ್ಕಾರ ಜನ ವಿರೋಧಿ ಪೌರತ್ವ ಕಾಯ್ದೆ ಮತ್ತು ಎನ್‌ಆರ್‌ಸಿ ಕೈಬಿಡಬೇಕು ಎಂದು ಆಗ್ರಹಿಸಿ ಗುಲಬರ್ಗಾ ಬೀಯಿಂಗ್ ಹ್ಯುಮೆನ್ ಸಂಸ್ಥೆ ಹಾಗೂ ಹ್ಯೂಮೆನ್ ಏಡ್ ವೆಲಫೇರ್ ಚಾರಿಟೇಬಲ್ ಟ್ರಸ್ಟ್ ಸದಸ್ಯರು ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಸಾಧಿಕ್ ಅಲಿ ದೇಶಮುಖ, ಮಹ್ಮದ ಹುಸೇನಿ, ಅಬ್ದುಲ್ ಹಮೀದ್, ಅಬ್ದುಲ್ ಸುತ್ತಾರ ಸೇರಿದಂತೆ ಇತರರಿದ್ದರು.