ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿನ 105ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಜಿಲ್ಲಾ ಕಸಾಪ ವತಿಯಿಂದ ನಾಳೆ ಜಿಲ್ಲಾ ಕಸಾಪ ಅಧ್ಯಕ್ಷರು ಹಾಗೂ ಜಿಲ್ಲಾ ಸಮ್ಮೇಳನಾಧ್ಯಕ್ಷರಿಗೆ ಸತ್ಕಾರ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಡಾ. ವಿಜಯಕುಮಾರ ಪರೂತೆ ಹಾಗೂ ಮಡಿವಾಳಪ್ಪ ನಾಗರಳ್ಳಿ ತಿಳಿಸಿದ್ದಾರೆ.
05 ರಂದು ನಗರದ ಕನ್ನಡ ಭವನದ ಸುವರ್ಣ ಸೌಧದಲ್ಲಿ ನಡಡಯಲಿರುವ ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವೀರಭದ್ರ ಸಿಂಪಿ ವಹಿಸಲಿದ್ದಾರೆ.
ಕಸಾಪ ಹಿಂದಿನ ಅಧ್ಯಕ್ಷರಾದ ಪಿ.ಎಂ. ಮಣ್ಣೂರ, ಡಾ. ಎಂ.ಎಸ್. ಪಾಟೀಲ, ಅಪ್ಪಾರಾವ ಅಕ್ಕೋಣಿ, ಮಹಿಪಾಲರೆಡ್ಡಿ ಮುನ್ನೂರ ಅವರನ್ನು ಸತ್ಕರಿಸಲಾಗುವುದು.
ಇದೇ ವೇಳೆಯಲ್ಲಿ ಹಿಂದಿನ ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಡಾ. ಗೀತಾ ನಾಗಭೂಷಣ, ಡಾ. ವೀರಣ್ಣ ದಂಡೆ, ಹಣಂತರಾವ ದೊಡ್ಡಮನಿ, ಎಲ್.ಬಿ.ಕೆ. ಆಲ್ದಾಳ, ಡಾ. ನಾಗಾಬಾಯಿ ಬುಳ್ಳಾ ಮತ್ತಿತರರನ್ನು ಸನ್ಮಾನಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.