ಮುಂಬೈ: ಸಾವಿರ ಕೋಟಿ ವೆಚ್ಚದಲ್ಲಿ ಡಾ.ಅಂಬೇಡ್ಕರ್ ಪ್ರತಿಮೆ ನಿರ್ಮಾಣ

1
2935

ಮುಂಬೈ: ಮಹಾರಾಷ್ಟ್ರದ ರಾಜಧಾನಿ, ವಾಣಿಜ್ಯ ನಗರಿ ಹಾಗೂ ಭಾರತದ ಮೆಂಚೆಸ್ಟರ್ ಎಂದು ಕರೆಯಲ್ಪಡುವ ಮುಂಬೈ ನಗರದ ಹಿಂದೂ ಹಿಲ್ಸ್ ಆವರಣದಲ್ಲಿ ಡಾ. ಅಂಬೇಡ್ಕರ್ ಅವರ 350 ಅಡಿಯ ಭವ್ಶವಾದ ಮೂರ್ತಿ ತಲೆ ಎತ್ತಲಿದೆ.

ಸದ್ಶ ಪ್ರತಿಮೆ ನಿರ್ಮಾಣ ಯೋಜನೆಯ ಎತ್ತರ 250 ಅಡಿ ಇತ್ತು. ಈ ನಿರ್ಮಾಣ ಹಂತದಲ್ಲಿರುವ ಪ್ರತಿಮೆಯ ಎತ್ತರ 350 ಅಡಿ ಎತ್ತರ ಮಾಡಲು ಮಹಾರಾಷ್ಟ್ರ ಸರ್ಕಾರ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದಿದೆ.

Contact Your\'s Advertisement; 9902492681

ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಪ್ರತಿಮೆ ನಿರ್ಮಾಣಕ್ಕಾಗಿ 700 ಕೋಟಿ ರೂ. ಬಿಡುಗಡೆ ಮಾಡಿ ಭೂಮಿ ಪೂಜೆ ಮಾಡಲಾಗಿತ್ತು. ಈಗೀನ ಶಿವಸೇನೆ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ಇನ್ನು 300 ಕೋಟಿ ಬಿಡುಗಡೆ ಮಾಡಲು ಸಚಿವ ಸಂಪುಟದಲ್ಲಿ ನಿರ್ಧಾರ ತೆಗೆದುಕೊಂಡಿದೆ. ಒಟ್ಟು ಸಾವಿರ ಕೋಟಿಯಿಂದ ಹನ್ನೊಂದನೂರು ಕೋಟಿಯ ಮೊತ್ತದಲ್ಲಿ ಈ ಪ್ರತಿಮೆ ನಿರ್ಮಾಣ ಮಾಡಲಾಗುತ್ತಿದೆ.

ನಿರ್ಮಾಣ ಹಂತದಲ್ಲಿರುವ ಈ ಭವ್ಯ ಪ್ರತಿಮೆ ಕೆಳಬಾಗ ಡಾ.ಅಂಬೇಡ್ಕರ್ ಅವರ ಅಧ್ಯಯನ ಪೀಠ, ರಂಗಮಂಟಪ, ಗ್ರಂಥಾಲಯ, ಸಂಶೋಧನಾ ಕೇಂದ್ರಗಳು ಸ್ಥಾಪನೆಗೊಳ್ಳಲಿವೆ.

ಇದನ್ನು ಮುಂಬೈ ಮೆಟ್ರೊಪಾಲಿಟಿಯನ್ ಅಭಿವ್ರದ್ಧಿ ಆಯೋಗ ಈ ಯೋಜನೆಯನ್ನು ಅನುಷ್ಟಾನಗೊಳಿಸಲಿದೆ. ಇದು ದೇಶದ ಕೊಟ್ಶಂತರ ಬಹುಜನರಲ್ಲಿ ಖುಷಿ ತರಲಿದೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here