ಕಲಬುರಗಿ: ಬಸವಾದಿ ಶರಣರ ವಚನ ಓದುವುದು ಹಾಗೂ ಅದರಂತೆ ನಡೆದುಕೊಳ್ಳುವುದರಿಂದ ಮನ ಪರಿವರ್ತನೆಯಾಗುವುದಲ್ಲದೆ ಬದುಕು ಹಸನಾಗಬಲ್ಲುದು ಎಂದು ಶಹಾಪುರದ ಬಸವ ಮಾರ್ಗ ಪ್ರತಿಷ್ಠಾನದ ಅಧ್ಯಕ್ಷ ವಿಶ್ವಾರಾಧ್ಯ ಸತ್ಯಂಪೆಟೆ ತಿಳಿಸಿದರು.
ನಗರದ ಸಾಯಿ ಮಂದಿರ ಬಳಿಯಿರುವ ನ್ಯಾಯವಾದಿ ಶಿವಕುಮರ ಬಿದರಿ ಅವರ ಮನೆಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ, ಬಸವ ಸೇವಾ ಪ್ರತಿಷ್ಠಾನ ಹಾಗೂ ನೀಲಮ್ಮನ ಬಳಗದ ಆಶ್ರ್ರಯದಲ್ಲಿ ಗುರುವಾರ ನಡೆದ ಶಿವಯೋಗಿ ಸಿದ್ಧರಾಮ ಜಯಂತಿ ಲಿಂ. ಶರಣ ಮಲ್ಲಿಕಾರ್ಜುನ ಬಿದರಿ ಅವರ ಸ್ಮರಣೋತ್ಸವ ಸಮಾರಂಭದಲ್ಲಿ ವಿಶೇಷ ಅನುಭಾವ ನೀಡಿದ ಅವರು, ಬಸವಣ್ಣನವರು ನಮ್ಮೊಳಗೆ ಆವಿರ್ಭಸಿದರೆ ಮೂಢನಂಬಿಕೆ, ಕಂದಾಚಾರಗಳಿಂದ ದೂರವಾಗುತ್ತೇವೆ. ವಾಸ್ತವ ಸತ್ಯವನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಕಾಯಕ-ದಾಸೋಹದಿಂದ ಬದುಕು ಹಸನಾಗಬಲ್ಲುದು ಎಂದು ವಿವರಿಸಿದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಶರಣ ಚಿಂತಕ ಶಿವಣ್ಣ ಇಜೇರಿ ಮಾತನಾಡಿ, ಹಾಲು, ತುಪ್ಪ ದೇವರಿಗೆ ಹಾಕಲು ಹೇಳುವ ಪುರೋಹಿತರು ಆಕಳ ಸೆಗಣಿ ಮತ್ತು ಮೂತ್ರವನ್ನು ಪವಿತ್ರ ಎಂದು ಹೇಳಿ ನಮ್ಮನ್ನು ದಿಶಾಬೂಲ್ ಮಾಡಿದ್ದಾರೆ. ವೈಚಾರಿಕೆ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ಸರಳತೆಯನ್ನು ಬೆಳೆಸಿಕೊಳ್ಳಬೆಕು ಎಂದು ತಿಳಿಸಿದರು.
ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಪ್ರಭುಲಿಂಗ ಮಹಾಗಾಂವಕರ ಉದ್ಘಾಟಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅಲ್ಲಮಪ್ರಭು ಪಾಟೀಲ ಧ್ವಜಾರೋಹನ ನೆರವೇರಿಸಿದರು. ಬಸವ ಸೇವ ಪ್ರತಿಷ್ಠಾನದ ಜಿಲ್ಲಾಧ್ಯಕ್ಷ ರಾಜಶೇಖರ ಯಂಕಂಚಿ ಮುಖ್ಯ ಅತಿಥಿಯಾಗಿದ್ದರು. ಅಫಜಲಪುರ ಬಿ.ಆರ್.ಪಿ. ಬಸವರಾಜ ಎಚ್. ಕಲ್ಲಾ ಅಧ್ಯಕ್ಷತೆ ವಹಿಸಿದ್ದರು. ಶಿವಕುಮರ ಬಿದರಿ ಸ್ವಾಗತಿಸಿದರು. ಆದಪ್ಪ ಬಗಲಿ ನಿರೂಪಿಸಿದರು. ಅಶ್ವಿನಿ ರಾಜಕುಮಾರ ಹಿರೇಮಠ ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಮಹಾಂತೇಶ ಕಲ್ಬುರ್ಗಿ, ಅಯ್ಯನಗೌಡ ಪಾಟೀಲ, ಸತೀಶ ಸಜ್ಜನ್, ಕುಪೇಂದ್ರ ಪಾಟೀಲ, ರವೀಂದ್ರ ಶಾಬಾದಿ, ನಳಿನಿ ಮಹಾಗಾಂವಕರ್, ಶಿವಸರಣಪ್ಪ ದೇಗಾಂವ, ಮಲ್ಲಣ್ಣ ನಾಗರಾಳ, ವಿಸ್ವನಾಥ ಡೋಣೂರ, ಕೆ. ಎ. ಕಲ್ಬುರ್ಗಿ, ಹಣಮಂತರಾಯಗೌಡ ಕುಸನೂರ, ಸಿದ್ದಪ್ಪ ಪಾಲ್ಕಿ, ಅಯ್ಯಣ್ಣ ನಂದಿ, ಪ್ರಸನ್ನ ವಾಂಜರಖೇಡ ಇತರರಿದ್ದರು.