ಎಸ್.ಬಿ ಮುದಾಯ ರೇಡಿಯೋ ಕೇಂದ್ರದ ಎಫ್.ಎಂ.ನ ದಶಮಾನೋತ್ಸವದ ಸಂಭ್ರಮದ

0
64

ಕಲಬುರಗಿ: ಇಲ್ಲಿ ಸಾಮಾಜಿಕ ಸಮಸ್ಯೆಗಳ ಅನಾವರಣವಿತ್ತು. ಜಾತಿ ಪದ್ಧತಿಯ ಶೋಷಣೆ, ಮಳೆಯ ಅಬ್ಬರದಿಂದ ಝರ್ಜರಿತವಾದ ಬದುಕು, ಅಮ್ಮನ ಪ್ರೀತಿ, ದೇಶಾಭಿಮಾನ, ಸೈನಿಕ, ರೈತ ತಂದೆ ಹೀಗೆ ಅನೇಕ ಭಾವನೆಗಳನ್ನು ಅಕ್ಷರಗಳಲ್ಲಿ ಪ್ರಾಸದೊಂದಿಗೆ ಹಿಡಿದಿಡುವ ಪರಿಣಾಮಕಾರಿ ಪ್ರಸಂಗವೊಂದು ಗುರುವಾರದಂದು ಜರುಗಿತು.

ನಗರದ ಕಲಾ ಮಂಡಳದಲ್ಲಿ ಇಲ್ಲಿನ ಜಂಗಮ ಬೆಳಗು ಪ್ರತಿಷ್ಠಾನದ ವತಿಯಿಂದ ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಅಂತರ್ವಾಣಿ ಸಮುದಾಯ ರೇಡಿಯೋ ಕೇಂದ್ರದ ಎಫ್.ಎಂ.ನ ದಶಮಾನೋತ್ಸವದ ಸಂಭ್ರಮದ ಪ್ರಯುಕ್ತ ನಡೆದ ವಿಶೇಷ ಕವಿಗೋಷ್ಠಿ ಹಾಗೂ ‘ಪಂಚಾಚಾರ್ಯ ಶ್ರೀ’ ಪ್ರಶಸ್ತಿ ಪುರಸ್ಕೃತ ಕಡಗಂಚಿಯ ಶ್ರೀ ಶಾಂತಲಿಂಗೇಶ್ವರ ಸಂಸ್ಥಾನ ಕಟ್ಟಿಮಠದ ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯರು ಅವರ ಅಭಿನಂದನಾ ಸಮಾರಂಭದಲ್ಲಿ ಹಿರಿಯ ಮತ್ತು ಕಿರಿಯ ಕವಿಗಳು ತಮ್ಮ ಅಂತರಾಳದ ಕವನಗಳನ್ನು ಹೊರಹಾಕಿ ಪ್ರೇಕ್ಷಕರ ಮನಸೂರೆಗೊಳಿಸಿದರು.

Contact Your\'s Advertisement; 9902492681

ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಶರಣಬಸವೇಶ್ವರ ಸಂಸ್ಥಾನದ ಮಾತೋಶ್ರೀ ದಾಕ್ಷಾಯಿಣಿ ಡಾ.ಶರಣಬಸವಪ್ಪ ಅಪ್ಪಾ ಅವರು, ‘ಮನುಷ್ಯರಾದ ನಾವು ಜಾತಿಗೆ ಸೀಮಿತ ಆಗುವ ದಾರಿಯಲ್ಲಿ ಹೋಗಬಾರದು. ಉಪದೇಶಗಳು ಮಾಡುವವರು ಗುರುವಲ್ಲ. ಯಾರು ಜ್ಞಾನವನ್ನು ತಿಳಿಸಿಕೊಡುತ್ತಾರೋ ಅವರು ನಿಜವಾದ ಗುರುಗಳು. ಅಜ್ಞಾನದಲ್ಲಿರುವವನಿಗೆ ಜ್ಞಾನದ ಮಾರ್ಗ ತೋರಿಸಿ, ನಿಶ್ಚಲವಾದ ಮನಸ್ಸನ್ನು ನೀಡಿ ಅಂತರಂಗದ ಕಲ್ಮಶಗಳನ್ನು ತೆಗೆದು ಹಾಕಿ ಮುಕ್ತಿಯ ಮಾರ್ಗವನ್ನು ತೋರಿಸುವವನೇ ನಿಜವಾದ ಗುರು’ ಎಂದು ನುಡಿದರು.

ಮುಂದುವರೆದು ಮಾತನಾಡಿದ ಅವರು, ‘ಧರ್ಮ ಹಾಗೂ ಸಂಸ್ಕೃತಿ ಮನುಷ್ಯನ ಜೀವನದ ತಳಹದಿ ಆಗಬೇಕು. ಆಗ ಮಾತ್ರ ಸಮಾಜದಲ್ಲಿ ಬೇರೂರಿರುವ ದ್ವೇಷ, ಅಸೂಯೆ, ಕ್ರೌರ್ಯ ಇರುವುದಿಲ್ಲ. ಹೀಗಾಗಿ ಪ್ರತಿಯೊಬ್ಬರೂ ಧರ್ಮದ ಮಾರ್ಗದಲ್ಲಿ ನಡೆಯಬೇಕು. ಮನುಷ್ಯನಿಗೆ ಸಮಾಜದ ಬಗ್ಗೆ ಅರಿವಿರಬೇಕು. ತನ್ನ ಸಂಪಾದನೆಯಲ್ಲಿ ಸಮಾಜಕ್ಕೆ ದಾಸೋಹ ಮಾಡುವುದು ರೂಢಿಮಾಡಿಕೊಳ್ಳಬೇಕೆಂದು ಮಾರ್ಮಿಕವಾಗಿ ನುಡಿದರು.

ಅತಿಥಿಯಾಗಿ ಆಗಮಿಸಿದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಸರ್ವ ಜನತೆಯ ಕಲ್ಯಾಣ, ಶ್ರೇಯಸ್ಸು ಬಯಸುವ ಹನ್ನೆರಡನೇ ಶತಮಾನದ ಬಸವಾದಿ ಶರಣರ ವಚನ ಸಾಹಿತ್ಯವು ಜನತೆಯ ಬದುಕನ್ನು ಹಸನಾಗಿಸಿ ಬದುಕಿನ ಮಾರ್ಗದ ಜ್ಞಾನದ ದಿಗಂತವನ್ನು ಹೆಚ್ಚಿಸಿದೆ. ಸಕಲ ಜೀವರಾಶಿಗೆ ಲೇಸನ್ನೇ ತರುವ ನಿಟ್ಟಿನಲ್ಲಿ ಮಾನವ ಕೆಲಸ ಮಾಡಬೇಕೆಂದರು.

ಸಾನ್ನಿಧ್ಯವಹಿಸಿ ಆಶೀರ್ವಚನ ನೀಡಿದ ಕಡಗಂಚಿ ಮಠದ ಶ್ರೀ ವೀರತಪಸ್ವಿ ವೀರಭದ್ರ ಶಿವಾಚಾರ್ಯರು, ಮನುಷ್ಯ ಜನ್ಮ ಪಡೆದ ಮೇಲೆ ಸಮಾಜಕ್ಕೆ ಒಳ್ಳೆಯ ಕೊಡುಗೆ ನೀಡುವ ಕೆಲಸ ಮಾಡಬೇಕು. ಹಾಗೆಯೇ, ಮಹಾತ್ಮರ ವಿಚಾರಧಾರೆಯಲ್ಲಿ ಮುನ್ನಡೆದರೆ ಉತ್ತಮ ಜೀವನ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದು ನುಡಿದರು.

ಜಿಲ್ಲಾ ವೀರಶೈವ ಮಹಾಸಭಾದ ಕಾರ್ಯಕಾರಿಣಿ ಸದಸ್ಯ ಶರಣಬಸಪ್ಪ ಭೂಸನೂರ, ಪ್ರವಚನಕಾರ ಸಂಗಮೇಶ ಶಾಸ್ತ್ರಿ ಮಾಶಾಳ, ಶ್ರೀ ಶರಣಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಶಿವರಾಜ ಶಾಸ್ತ್ರಿ ಹೇರೂರ, ಪ್ರತಿಷ್ಠಾನದ ಅಧ್ಯಕ್ಷ ಶಿವಾನಂದ ಮಠಪತಿ, ನಾಗಲಿಂಗಯ್ಯಾ ಮಠಪತಿ, ಹಣಮಂತರಾಯ ಅಟ್ಟೂರ, ಶಿವರಜ ಅಂಡಗಿ, ಶ್ರವಣಕುಮಾರ ಮಠ ಮಾತನಾಡಿದರು.

ಕವಿಗಳಾದ ಪರಮೇಶ್ವರ ಶಟಕಾರ, ಶಕುಂತಲಾ ಪಾಟೀಲ ಜಾವಳಿ, ಡಾ.ಗೀತಾ ಪಾಟೀಲ, ಕವಿತಾ ಕಾವಳೆ, ಸಂತೋಷ ಕುಂಬಾರ, ಯಶೋಧಾ ಕಟಕೆ, ರೇಣುಕಾ ಡಾಂಗೆ, ಶಿಲ್ಪಾ ಜೋಶಿ, ರಾಜಕುಮಾರ ಉದನೂರ, ಸುರೇಶ ಬಡಿಗೇರ್, ನಾಗೇಂದ್ರಪ್ಪ ಮಾಡ್ಯಾಳೆ, ಹಣಮಂತರಾವ ಘಂಟೇಕರ್, ಈರಣ್ಣಾ ನಾವಿ, ವಿಜಯಕುಮಾರ ಪಾಟೀಲ ರವರು ತಮ್ಮ ಸ್ವ ರಚಿತ ಕವನಗಳ ಮೂಲಕ ಪ್ರಚಲಿತ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿದರು.

ಪ್ರಮುಖರಾದ ಜಗದೀಶ ಮರಪಳ್ಳಿ, ಶಿವಶರಣಪ್ಪ ಸರಸಂಬಾ, ರವೀಂದ್ರಕುಮಾರ ಭಂಟನಳ್ಳಿ, ಪ್ರಸನ್ನ ವಾಂಜರಖೇಡೆ, ಸವಿತಾ ಪಾಟೀಲ, ಶರಣರಾಜ ಛಪ್ಪರಬಂದಿ, ರವಿ ಶಹಾಪುರಕರ್, ಪ್ರಯಾಗಬಾಯಿ ಮಠಪತಿ ಬೆಳಮಗಿ, ಸಿದ್ಧಮ್ಮ ಶಿವಾನಂದ ಮಠಪತಿ, ಪ್ರಭುದೇವ ಯಳವಂತಗಿ, ಪ್ರಭುಲಿಂಗ ಮೂಲಗೆ, ಪ್ರಭು ಹರಸೂರ, ಶಿವಶರಣ ಕುಸನೂರ, ಎಸ್.ಎಸ್.ಬರಗಾಲಿ, ರುದ್ರಮುನಿ ಪುರಾಣಿಕ್, ಅಣವೀರಯ್ಯ ಪ್ಯಾಟಿಮನಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here