ರಾಣೇಬೆನ್ನೂರು: ಜೀವನವೇ ಒಂದು ಯಾನ. ಈ ಜೀವನ ಯಾನವನ್ನ ಮೂರು ಭಾಗವಾಗಿ ವಿಂಗಡಿಸಬಹುದು. ಒಂದು ಲೌಕಿಕ ಯಾನ , ಸಾಂಸ್ಕೃತಿಕ ಮತ್ತು ಬೌದ್ಧಿಕ ಯಾನ, ಈ ಬಡಿದಾಟದ ಬದುಕಿನಲ್ಲಿ ನನಗೂ ಒಂದು ಅಂಂತರಂಗವಿದೆ ಎನ್ನುವುದು ಮರೆಯುವುದೇ ಆಘಾತವಾಗಿದೆ ಎಂದು ಚಿತ್ರದುರ್ಗದ ಮುರುಘಾ ಶರಣರು ಹೇಳಿದರು.
ರಾಣೇಬೆನ್ನೂರುನಲ್ಲಿ ನಡೆದ ಕರ್ನಾಟಕ ವೈಭವ ವೈಚಾರಿಕ ಹಬ್ಬದಲ್ಲಿ ಸಾನಿಧ್ಯ ವಹಿಸಿ ಮಾತನಾಡಿದ ಸ್ವಾಮಿಗಳು ಜೀವನದ ಬಡಿದಾಟದಲ್ಲಿ ಮನುಷ್ಯ ಬರೀ ಮಾತಿನ ಮೂಲಕ ಸಮಯ ವ್ಯಯ ಮಾಡುತ್ತಾ ಇದ್ದಾನೆ.ಮಾತಾಡುತ್ತಾ ಹೋಗುವುದರಿಂದ ಮಾನವ ಎನರ್ಜಿ ಕಳೆದುಕೊಳ್ಳುತ್ತಿದ್ದಾನೆ. ಅಂತರಂಗದ ಮೌನದೊಂದಿಗೆ ಜೀವಿಸವುದು ಒಳ್ಳೆಯ ಧ್ಯಾನದ ಲಕ್ಷಣ ಎಂದು ಹೇಳಿದರು.
ಇನ್ನು ವೇದಿಕೆ ಮೇಲೆ ಕೇಸರಿ ಪತ್ರಿಕೆಯ ಸಂಪಾದಕರಾದ ಜೆ.ನಂದಕುಮಾರ ಮತ್ತು ಮಾರ್ಗದರ್ಶಕರಾದ ಎಸ್.ಜಿ.ವೈದ್ಯ ಅವರು ಉಪಸ್ಥಿತಿತರಿದ್ದರು.