ಕಲಬುರಗಿ: ಅರಣ್ಯ ವೃತ್ತದ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರಣ್ಯ ರಕ್ಷಕರಿಗೆ ಮತ್ತು ಅರಣ್ಯ ವೀಕ್ಷಕರಿಗೆ ಮುಂಬಡ್ತಿ ನೀಡಲು ಆಗ್ರಹಿಸಿ ಕರ್ನಾಟಕ ರಾಜ್ಯ ಅರಣ್ಯ ರಕ್ಷಕ ಮತ್ತು ಅರಣ್ಯ ವೀಕ್ಷಕರ ಸಂಘ (ರಿ.) ಕಲಬುರಗಿ ವಿಭಾಗ ಘಟಕದ ವತಿಯಿಂದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಪುನಾಟಿ ಶ್ರೀಧರ ಅವರಿಗೆ ಸಂಘದ ಅಧ್ಯಕ್ಷರಾದ ಮದಾರಸಾಬ ಎಚ್.ಎಮ್ ಮತ್ತು ಕಾರ್ಯದರ್ಶಿ ಸಿದ್ರಾಮ ಎಸ್.ನಾಲತವಾಡ ಅವರು ಮನವಿ ಪತ್ರ ನೀಡಿ ಆಗ್ರಹಿಸಿದರು.
೨೦೦೯ನೇ ಸಾಲಿನ ಅರಣ್ಯ ರಕ್ಷಕರಿಗೆ ಸೇವಾ ಹಿರಿತನದ ಮೇಲೆ ಉಪವಲಯ ಅರಣ್ಯಾಧಿಕಾರಿಗಳ ಹುದ್ದೆಯಲ್ಲಿ ಮುಂಬಡ್ತಿಯನ್ನು ನೀಡಲಾಗಿದೆ ೨೦೧೦ನೇ ಸಾಲಿನ ಅರ್ಹ ಅರಣ್ಯ ರಕ್ಷಕರಿಗೆ ಉಪವಲಯ ಅರಣ್ಯಾಧಿಕಾರಿ-ವ-ಮೋಜಿಣಿದಾರ ಹುದ್ದೆಗೆ ಮುಂಬಡ್ತಿ ನೀಡಲು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ೨೦೧೮ನೇ ಸಾಲಿನಲ್ಲಿ ಸೇವಾ ವಿವರಗಳನ್ನು ಕರೆದಿದ್ದು ಆದರೆ ಇಲ್ಲಿಯವರೆಗೂ ಯಾವುದೇ ಮುಂಬಡ್ತಿಯನ್ನು ನೀಡಿರುವುದಿಲ್ಲ ಇದರಿಂದ ಕಲ್ಯಾಣ ಕರ್ನಾಟಕ ಭಾಗದ ಮುಂಚೂಣಿ ಸಿಬ್ಬಂದಿಗಳಾದ ಅರಣ್ಯ ರಕ್ಷಕರಿಗೆ ಮತ್ತು ಅರಣ್ಯ ವೀಕ್ಷಕರಿಗೆ ತುಂಬಾ ಅನ್ಯಾಯವಾಗಿರುತ್ತದೆ.
ಆದ್ದರಿಂದ ಅರಣ್ಯ ಇಲಾಖೆಯ ಕೆಳ ಹಂತದ ಸಿಬ್ಬಂದಿಗಳಾದ ಅರಣ್ಯ ರಕ್ಷಕರುಗಳಿಗೆ ಉಪವಲಯ ಅರಣ್ಯಾಧಿಕಾರಿಗಳ ಹುದ್ದೆಗೆ ಮತ್ತು ಅರಣ್ಯ ವೀಕ್ಷಕರಿಗೆ ಅರಣ್ಯ ರಕ್ಷಕ ಹುದ್ದೆಗೆ ಮುಂಬಡ್ತಿ ನೀಡಲು ವೃತ್ತ ಸಂಘದ ಕಾರ್ಯದರ್ಶಿಗಳಾದ ರಾಜಶೇಖರ ಧೂಪದ ಹಾಗೂ ಇತರೆ ಸದಸ್ಯರುಗಳಾದ ಪೀರಪ್ಪ ಕಟ್ಟಿ , ಮೋನಪ್ಪ, ಪ್ರಭು ಜಾಧವ, ಹೈದರ್ ಅಲಿ, ಸುರೇಶ ಬೆಣ್ಣೂರ, ವಿರೇಶ ಅರಳಗುಂಡಗಿ, ವಸಂತ ನಾಯ್ಕ, ಸಿದ್ರಾಮ ಕೂಸುರ ಇವರುಗಳು ಕಲಬುರಗಿ ವೃತ್ತಕ್ಕೆ ಪ್ರಗತಿ ಪರಿಶೀಲನೆಗೆ ಆಗಮಿಸಿರುವ ಅರಣ್ಯ ಪಡೆ ಮುಖ್ಯಸ್ಥರಿಗೆ ಮನವಿ ಪತ್ರ ಸಲ್ಲಿಸಿದರು.