ಸುರಪುರ: ಇಲ್ಲಿಯ ಸಂಸ್ಥಾನದ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಇದೇ ತಿಂಗಳು ೧೯ನೇ ತಾರೀಖಿನಂದು ಹಮ್ಮಿಕೊಳ್ಳಲಾಗಿದೆ.ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥಾನದ ರಾಜಾ ಕೃಷ್ಣಪ್ಪ ನಾಯಕ ಅವರು,೧೯ ರಂದು ಬೆಳಿಗ್ಗೆ ೧೦ ಗಂಟೆಗೆ ದರಬಾರದ ಕನ್ನಡಿ ಮಹಲಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ ಹಿರಿಯ ನ್ಯಾಯವಾದಿಗಳಾದ ರಾಜಾ ವೆಂಕಟಪ್ಪ ನಾಯಕ ಕಾರ್ಯಕ್ರಮ ಉದ್ಘಾಟಿಸಲಿದ್ದು,ಮುಖ್ಯ ಅತಿಥಿಗಳಾಗಿ ರಾಜಾ ಸೀತಾರಾಮ ನಾಯಕ,ಮಾಜಿ ಸಚಿವ ರಾಜಾ ಮದನಗೋಪಾಲ ನಾಯಕ,ವೀರಪ್ಪ ನಿಷ್ಠಿ ಇಂಜಿನಿಯರಿಂಗ್ ಕಾಲೇಜಿನ ಕಾರ್ಯದರ್ಶಿ ಶರಣಬಸವಪ್ಪ ನಿಷ್ಠಿ ಜಹಾಗೀರದಾರ,ರಾಜಾ ಎಸ್.ಗೋಪಾಲ ನಾಯಕ ಪ್ರಥಮ ದರ್ಜೆ ಗುತ್ತೇದಾರರು ಭಾಗವಹಿಸಲಿದ್ದಾರೆ.
ಸುರಪುರ ಸಂಸ್ಥಾನದ ಗೌರವ ಪ್ರಶಸ್ತಿಗೆ ೧೦ ಜನರನ್ನು ಆಯ್ಕೆಗೊಳಿಸಲಾಗಿದ್ದು,ಇನ್ನುಳಿದಂತೆ ಮೂವತ್ತು ಜನರಿಗೆ ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಅದರಲ್ಲಿ ಸುರಪುರ ಸಂಸ್ಥಾನದ ಗೌರವದ ಪ್ರಶಸ್ತಿಯ ಹತ್ತು ಜನರಲ್ಲಿ ಪ್ರಮುಖವಾಗಿ ಬಿ.ಕೃಷ್ಣಮಾಚಾರಿ ರಾಜ ಗುರುಗಳು,ವಿಜಯ ಹಾಗರಗುಂಡಿಗಿ ಗರುಡಾದ್ರಿ ಕಲಾ ಪೇಂಟಿಂಗ್,ಎ.ಕೃಷ್ಣಾ ಸಾಹಿತ್ಯ ಕ್ಷೇತ್ರದಲ್ಲಿ, ನಾಲ್ವಡಿ ರಾಜಾ ವೆಂಕಟಪ್ಪ ನಾಯಕ ಪ್ರಶಸ್ತಿ ಡಾ. ರಾಜಾ ಹನುಮಣ್ಣ ನಾಯಕ ದೊರೆ ಮಾಜಿ ಕುಲಪತಿಗಳು ಸಂಗೀತ ವಿವಿ ಮೈಸೂರು ಸಂಗೀತ ಕ್ಷೇತ್ರದಲ್ಲಿ,ಡಾ. ಉಪೇಂದ್ರ ನಾಯಕ ಸುಬೇದಾರ ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಸಗರನಾಡಿನ ಕುರಿತು ಮಹಾನ್ ಪ್ರಬಂಧ ಮಂಡನೆಗೆ,ಶಾಂತಪ್ಪ ಬೂದಿಹಾಳ ಸಾಹಿತ್ಯ ಕ್ಷೇತ್ರದಲ್ಲಿ,ಶ್ರೀಹರಿರಾವ್ ಆದವಾನಿ ಗಾಯನ ಕ್ಷೇತ್ರದಲ್ಲಿ,ಸಿದ್ದರಾಮ ಹೊನ್ಕಲ್ ಸಾಹಿತ್ಯ ಕ್ಷೇತ್ರದಲ್ಲಿ ಸೇರಿದಂತೆ ಒಟ್ಟು ಮೂವತ್ತು ಜನರಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ.
ಇದೇ ಸಂದರ್ಭದಲ್ಲಿ ಮೊನ್ನೆತಾನೆ ಸುರಪುರ ಸಂಸ್ಥಾನದ ಕುರಿತು ನಡೆಸಿದ ಕಿರು ಪರೀಕ್ಷೆಯಲ್ಲಿ ಪಾಲ್ಗೊಂಡ ನಗರದ ಹನ್ನೆರಡು ಶಾಲೆಗಳಲ್ಲಿನ ಪ್ರತಿ ಶಾಲೆಯ ಮೂರು ಜನ ಪ್ರಥಮ ದ್ವತೀಯ ಮತ್ತು ತೃತೀಯ ಸ್ಥಾನಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆಯೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.