ಕಲಬುರಗಿ: ನಗರದ ಜಗತ್ ಸರ್ಕಲ್ ಹತ್ತಿರ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಹತ್ತಿರ ಸಿಎಎ, ಎನ್,ಪಿ,ಆರ್ ಹಾಗೂ ಎನ್,ಆರ್,ಸಿ ವಿರುದ್ಧ ಉತ್ತರ ಮತಕ್ಷೇತ್ರದ ಶಾಸಕಿ ಕನೀಜ್ ಫಾತೀಮಾ ಅವರ ನೇತೃತ್ವದಲ್ಲಿ ಒಂದು ದಿನದ ಸತ್ಯಾಗ್ರಹ ನಡೆಸಲಾಗುತಿದೆ.
ಸತ್ಯಾಗ್ರಹ ಉದ್ದೇಶಿ ಶಾಸಕಿ ಫಾತೀಮಾ ಮಾತನಾಡಿ, ಸಿಎಎ ಧರ್ಮ ಆಧಾರಿತ ಮತ್ತು ಸಂವಿಧಾನ ವಿರೋಧಿಯಾಗಿದೆ ಈ ಕಾನೂನನ್ನು ಸಂವಿಧಾನ ಪ್ರೀಯರಲ್ಲೇರು ವಿರುದ್ಧಿಸಬೇಕ್ಕಾಗಿದೆ ಎಂದು ಕರೆ ನೀಡಿದರು.
ಅಷ್ಟೇ ಅಲ್ಲೇ ಎಪ್ರಿಲ್ ತಿಂಗಳಲ್ಲಿ ಎನ್.ಪಿ.ಆರ್ ನಡೆಸಲಾಗುತ್ತಿದ್ದು, ಇದರಲ್ಲಿ ಕೇಲವು ಪ್ರಶ್ನೆಗಳು ನೇರವಾಗಿ ಎನ್.ಆರ್.ಸಿಗೆ ಸಹಾಯ ಮಾಡುವಂತಹದಾಗಿದ್ದು, ಎನ್.ಪಿ.ಆರ್ ನೇರವಾಗಿ ಎನ್, ಆರ್, ಸಿ ಮಾಡಲಾಗುತ್ತಿದೆ ಎಂದರು.
ಎನ್,ಪಿ,ಆರ್ ನಲ್ಲಿ ಜನ್ಮ ದಿನಾಂಕ ಮತ್ತು ಜನ್ಮ ಸ್ಥಳ ಕೇಳಿದು, ದೇಶದಲ್ಲಿ ಎಲ್ಲಿ ಹೊಟ್ಟಿದ್ದಾರೆಂಬು ಸ್ಪಷ್ಟವಾಗಿ ಹೇಗೆ ತಿಳಿಸಲು ಸಾಧ್ಯವಿಲ್ಲ, ಅಂತಹದ್ರಲ್ಲಿ ಜನ್ಮದಿನ ಹೇಗೆ ಹೇಳಲು ಸಾಧ್ಯ ಎಂದು ಆತಂಕ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಖಿಲ ಭಾರತೀಯ ಮಹಿಳಾ ಹೋರಾಟಗಾರ್ತಿ ಹಾಗೂ ಸಾಹಿತಿ ಕೆ. ನೀಲಾ ಮಾತನಾಡಿ, ಪ್ರಧಾನಿ ಮೋದಿ ಅವರು ದೇಶದ ಆರ್ಥಿಕತೆ ಹಾಳು ಮಾಡಿ ಈ ಬಡ ಜನರಿಗೆ ಹುಟ್ಟಿದ ದಾಖಲೆಗಳನ್ನು ಕೇಳುವ ಮೂಲಕ ದೇಶದ ಜನರಿಗೆ ಬೀದಿಗೆ ತಳ್ಳಿ ಕಂಗಾಲ ಮಾಡಲಾಗುತಿದೆ, ತಮ್ಮ ಅಭಿವೃದ್ಧಿ ಬಗ್ಗೆ ಮಾತನಾಡಿ, ಉದ್ಯೋಗದ ಬಗ್ಗೆ ಮಾತನಾಡಿ, ಮಹಿಳೆಯರ ರಕ್ಷಣೆಯ ಬಗ್ಗೆ ಮಾತನಾಡಿ ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರ ರಕ್ಷಣೆಯ ಕರಸೇವಕರಾಗಿ ಶಾಸಕಿ ಪುತ್ರ ಫರಾಜು ಉಲ್ ಇಸ್ಲಾಂ, ಕಲಬುರಗಿ ಮಹಾನಗರ ಪಾಲಿಕೆಯ ಮಾಜಿ ಮಹಾಪೌರರಾದ ಸೈಯದ್ ಅಹ್ಮದ್, ಮಾಜಿ ಮಹಾಪೌರ ಆಶ್ಫಕ್ ಅಹ್ಮದ್ ಚುಲಬುಲ್, ಆದೀಲ್ ಸುಲೇಮಾನ್ ಸೇಠ್ ಸೇರಿದಂತೆ ಮುಂತಾದವರು ಇದ್ದರು.