ಕಲಬುರಗಿ: ಸಾಂಸ್ಕೃತಿಕ ಸಿರಿವಂತ ಹಾಗೂ ಸಾಮರಸ್ಯದ ನೆಲವಾಗಿರುವ ಕಲಬುರಗಿಯಲ್ಲಿ ೮೫ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಲು ದಾಖಲೆಯ ಪ್ರಮಾಣದಲ್ಲಿ 21030 ಪ್ರತಿನಿಧಿಗಳು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿ?ತ್ತಿನ ಅಧ್ಯಕ್ಷರು ಮತ್ತು ಸಮ್ಮೇಳನದ ಸ್ವಾಗತ ಸಮಿತಿಯ ಪ್ರಧಾನ ಕಾರ್ಯದರ್ಶಿ ವೀರಭದ್ರ ಸಿಂಪಿ ಅವರು ತಿಳಿಸಿದರು.
ಶನಿವಾರ ಇಲ್ಲಿನ ಕನ್ನಡ ಸಾಹಿತ್ಯ ಪರಿ?ತ್ತಿನ ಭವನದಲ್ಲಿ ಸಾಹಿತ್ಯ ಸಮ್ಮೇಳನ ಅಂಗವಾಗಿ ವಿವರಿಸಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಹಿಂದೆ ನಡೆದ ರಾಯಚೂರಿನಲ್ಲಿ ೧೨೫೦೦, ಮೈಸೂರಿನಲ್ಲಿ ೧೩೦೦೦ ಹಾಗೂ ಧಾರವಾಡದಲ್ಲಿ ೧೩೫೦೦ ಜನ ನೋಂದಣಿ ಮಾಡಿಕೊಂಡಿದ್ದರು. ಆದರೆ ಕಲಬುರಗಿಯಲ್ಲಿ ದಾಖಲೆಯಾಗಿ ೨೧,೦೦೦ ಜನ ನೋಂದಣಿ ಮಾಡಿಕೊಂಡಿದ್ದು, ಇದರಲ್ಲಿ ೧೫೧೭೮ ಪುರುಷರು ಮತ್ತು ೫೮೫೨ ಮಹಿಳೆಯರು ಸೇರಿದ್ದಾರೆ. ಇದರಲ್ಲಿ ಕಲಬುರಗಿ ಜಿಲ್ಲೆಯಿಂದ ೩೫೦೦ಕ್ಕೂ ಹೆಚ್ಚು ಜನ ನೋಂದಣಿ ಮಾಡಿಕೊಂಡಿದ್ದಾರೆ ಎಂದರು.
೫೬೬ ಮಳಿಗೆಗಳ ನೋಂದಣಿ: ೩೭೯ ಪುಸ್ತಕ ಮತ್ತು ೧೭೭ ವಾಣಿಜ್ಯ ಮಳಿಗೆಗಳು ಸೇರಿದಂತೆ ಇದೂವರೆಗೆ ೫೬೬ ಮಳಿಗೆಗಳ ನೋಂದಣಿಯಾಗಿದ್ದು, ಎಲ್ಲವು ಗುಣಮಟ್ಟದಿಂದ ಕೂಡಿರಲಿವೆ ಎಂದರು.
ಕನ್ನಡಮ್ಮನ ತೇರು ಎಳೆಯಲು ಎಲ್ಲರೂ ಸಕ್ರಿಯವಾಗಿದ್ದಾರೆ: ನುಡಿ ಜಾತ್ರೆ ಅಂಗವಾಗಿ ಕನ್ನಡಮ್ಮನ ತೇರು ಎಳೆಯಲು ಜಿಲ್ಲೆಯ ಎಲ್ಲ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಅಧಿಕಾರಿಗಳು ಸಮ್ಮೇಳನ ಯಶಸ್ಸಿಗೆ ದುಡಿಯುತ್ತಿದ್ದು, ಅಕ್ಷರ ಜಾತ್ರೆ ಐತಿಹಾಸಿಕ ಯಶಸ್ವಿಯಾಗಲಿದೆ. ಇದರಲ್ಲಿ ಎರಡು ಮಾತಿಲ್ಲ ಎಂದು ಸಿಂಪಿ ವಿವರಿಸಿದರು.
೧೦ ಕೋಟಿ ರೂ. ಘೋಷಣೆ: ನುಡಿ ಜಾತ್ರೆಗೆ ರಾಜ್ಯ ಸರ್ಕಾರ ೧೦ ಕೋಟಿ ರೂ. ಘೋ?ಣೆ ಮಾಡಿದ್ದು, ಎರಡ್ಮೂರು ದಿನದಲ್ಲಿ ಅನುದಾನ ಬಿಡುಗಡೆಯಾಗಲಿದೆ. ಕನ್ನಡ ಸಾಹಿತ್ಯ ಪರಿ?ತ್ತಿನಿಂದ ಈಗಾಗಲೆ ೧೦ ಲಕ್ಷ ರೂ. ಅನುದಾನ ನೀಡಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ದೇಣಿಗೆ ಸಂಗ್ರಹ ಮುಂದುವರೆದಿದೆ ಎಂದರು.
೧೨೬ ಲೇಖನಗಳ ಸ್ಮರಣ ಸಂಚಿಕೆ ಸಿದ್ಧ: ೧೨೬ ಲೇಖನಗಳನ್ನು ಒಳಗೊಂಡ ೭೦೦ ಪುಟಗಳ ವೈವಿಧ್ಯಮಯ ಸ್ಮರಣ ಸಂಚಿಕೆ ಸಿದ್ಧಗೊಂಡಿದೆ. ಜನವರಿ ೨೭ರಿಂದ ಕಲಬುರಗಿ ಜಿಲ್ಲೆಯಲ್ಲಿ ಹಿರಿಯ ಸಾಹಿತಿಗಳಿಂದ ಆಮಂತ್ರಣ ಪತ್ರಿಕೆ ವಿತರಣೆಗೆ ಚಾಲನೆ ನೀಡಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಪರಿ?ತ್ತಿನ ಗೌರವ ಅಧ್ಯಕ್ಷ ದೌಲತರಾವ ಪಾಟೀಲ, ಗೌರವ ಕಾರ್ಯದರ್ಶಿ ವಿಜಯಕುಮಾರ್ ಪೊರತೆ, ಮಡಿವಾಳಪ್ಪ ನಾಗರಹಳ್ಳಿ, ಎಸ್.ಸಿ.ಎಸ್.ಟಿ. ಅಧ್ಯಕ್ಷ ಅಂಬಾಜಿ ಕವಲಗಾ, ಉತ್ತರ ವಲಯದ ಲಿಂಗರಾಜ, ದಕ್ಷಿಣ ವಲಯದ ಆನಂದ ನಂದೂರ್ಕರ್ ಇದ್ದರು.