ಬಸವಣ್ಣನವರ ವಿಚಾರಗಳನ್ನು ಅಂಬೇಡ್ಕರ ಅವರು ಮೆಚ್ಚಿಕೊಂಡಿದ್ದರು: ಪ್ರಿಯಾಂಕ್ ಖರ್ಗೆ

0
54

 

ಕಲಬುರಗಿ, ಚಿತ್ತಾಪುರ: ಬಸವಣ್ಣನವರ ಕಾಯಕ‌ ತತ್ವವನ್ನು, ‌ಅವರ ವಿಚಾರಗಳನ್ನು ಡಾ ಬಿ.ಆರ್‌.‌ಅಂಬೇಡ್ಕರ್ ಅವರು ಅಪಾರವಾಗಿ ಮೆಚ್ಚಿಕೊಂಡಿದ್ದರು ಎಂದು ಶಾಸಕರಾದ ಪ್ರಿಯಾಂಕ್ ಖರ್ಗೆ ನುಡಿದರು.

Contact Your\'s Advertisement; 9902492681

ಚಿತ್ತಾಪುರ ತಾಲೂಕಿನ ಮುಗಳನಗಾವಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಯಾತ್ರಿ‌ನಿವಾಸ, ಶಾಲಾಕಟ್ಟಡ ಹಾಗೂ ಗ್ರಾಮಪಂಚಾಯತ ಕಚೇರಿ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಡಾ.‌ಬಿ.ಆರ್.ಅಂಬೇಡ್ಕರ್ ಅವರಿಗೆ ಬಸವಣ್ಣನವರ ಕುರಿತಾದ ಪುಸ್ತಕವನ್ನು ಹಿರಿಯ‌ ನಾಯಕರಾದ ಎಸ್‌ ನಿಜಲಿಂಗಪ್ಪನವರು ನೀಡಿದರು. ಅದನ್ನು ಓದಿದ ಬಾಬಾಸಾಹೇಬರು, ಬಸವಣ್ಣನವರ ವಿಚಾರ ಹಾಗೂ ಕಾಯಕ ತತ್ವ ಈ ದೇಶಕ್ಕೆ ಮಾತ್ರವಲ್ಲ ಇಡೀ ಜಗತ್ತಿಗೆ ಬೆಳಕು. ಅಂತ ಮಹಾನ್ ವ್ಯಕ್ತಿಯನ್ನು ಜಗಜ್ಯೋತಿಯನ್ನಾಗಿಬೇಕಿತ್ತು ಎಂದು ನುಡಿದರಂತೆ. ಹಾಗಾಗಿ, ಬಾಬಾಸಾಹೇಬರು ಕೂಡಾ ಬಸವಣ್ಣನವರ ವಿಚಾರಗಳನ್ನು ಬಹುವಾಗಿ ಇಷ್ಟಪಟ್ಟಿದ್ದರು ಎಂದು ಪುನರುಚ್ಚರಿಸಿದರು.

ನಾನು ಈ‌ ಕ್ಷೇತ್ರದ ಜನರ ಆಶೀರ್ವಾದಿಂದ ಶಾಸಕನಾಗಿ ಸಚಿವನಾಗಿ ಕ್ಷೇತ್ರದ ಹಾಗೂ ರಾಜ್ಯದ ಜನರ ಸೇವೆ ಮಾಡುವ ಅವಕಾಶ ಲಭಿಸಿದೆ.‌ ಬಸವಣ್ಣನವರ ಕಾಯಕತತ್ವ ನನ್ನನ್ನು ಬಹಳವಾಗಿ‌ ಅಕರ್ಷಿಸಿದ್ದರಿಂದ ಕ್ಷೇತ್ರದ ಅಭಿವೃದ್ದಿಗೆ ಶ್ರಮವಹಿಸಿದ್ದೇನೆ.‌ ಇಂದು ಮುಗುಳನಾಗಾವಿ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿ ಯಾತ್ರಿ ನಿವಾಸ ಸೇರಿದಂತೆ ರೂ‌ 3 ಕೋಟಿಗೂ ಅಧಿಕ ವೆಚ್ಚದಲ್ಲಿ ಹಲವಾರು ಅಭಿವೃದ್ದಿ ಕೆಲಸ ಮಾಡಿದ್ದೇನೆ. ಇದಕ್ಕೆ ಬಸವಣ್ಣನವರ ಕಾಯಕ ತತ್ವವೇ ಸ್ಫೂರ್ತಿ‌ ಎಂದು ಶಾಸಕರು ನುಡಿದರು.

ಸಿದ್ದಗಂಗಾ ಶ್ರೀಗಳ ನಿಧನರಾದ ದಿನದಂದು ಸಮಾಜಕಲ್ಯಾಣ ಇಲಾಖೆಯಿಂದ ಏರ್ಪಡಿಸಲಾಗಿದ್ದ ಸಂವಿಧಾನದ‌ ಕುರಿತಾದ ಕಾರ್ಯಾಗಾರದ‌ ಸಂದರ್ಭವನ್ನು ನೆನಪಿಸಿಕೊಂಡ ಶಾಸಕರು, ಬಸವಣ್ಣನವರನ್ನು ಅಕ್ಷರಶಃ ಪಾಲಿಸಿದ್ದ ಶ್ರೀಗಳ ನಿಧನದಂದು ತುಮಕೂರು ಮಠದಲ್ಲಿ ಎಂದಿನಂತೆ ಕಾಯಕ ನಡೆದವು ಅದೂ ಶ್ರೀಗಳ ಆಶಯವಾಗಿತ್ತು. ಆ ಹಿನ್ನೆಲೆಯಲ್ಲಿ ನಾನು ಸಚಿವನಾಗಿದ್ದ ಇಲಾಖೆಯವತಿಯಿಂದ ಕಾರ್ಯಕ್ರಮ ನಡೆಸಲು ಉದ್ದೇಶಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ದೇಶದ ಹೆಸರಾಂತ ಸಂವಿಧಾನ ತಜ್ಞರು ಬಂದಿದ್ದರು. ಆದರೆ‌ ಕೆಲವರು ಅದನ್ನು ವಿರೋಧಿಸಿ ತಮ್ಮನ್ನು ಲಿಂಗಾಯತ ವಿರೋಧಿ ಎನ್ನುವಂತೆ ಬಿಂಬಿಸಿದರು ಎಂದು ವಿಷಾದಿಸಿ, ಶ್ರೀಗಳ ಬಗ್ಗೆ ತಮಗೆ ಅಪಾರಗೌರವವಿದೆ ಎಂದು ಸ್ಪಷ್ಟಪಡಿಸಿದರು.

ಶರಣರನ್ನು ಸಂತರನ್ನು ಒಂದು‌ ನಿರ್ದಿಷ್ಠ‌ ಜಾತಿ ಧರ್ಮಕ್ಕೆ ಸೀಮಿತ ಮಾಡದಂತೆ ಮನವಿ ಮಾಡಿದ ಪ್ರಿಯಾಂಕ್ ಖರ್ಗೆ ಅವರು, ಬಸವಣ್ಣ, ಬುದ್ದ, ಬಾಬಾಸಾಹೇಬ್ ಅಂಬೇಡ್ಕರ, ಕನಕದಾಸ ಅವರ ವಿಚಾರಗಳು ಇಡೀ ಮನುಕುಲದ ಒಳಿತಿಗಾಗಿ‌ ಇವೆ. ಅವುಗಳ ಪಾಲನೆ ಮಾಡಬೇಕಾಗಿರುವುದು ಎಲ್ಲರ ಕರ್ತವ್ಯವಾಗಿದೆ ಎಂದರು

ಇದೇ ಸಂದರ್ಭದಲ್ಲಿ ಕಟ್ಟೀಮನಿ ಹೀರೆಮಠ‌ ಸಂಸ್ಥಾನದ ಸಿದ್ದಲಿಂಗ ಶಿವಾಚಾರ್ಯರು ಶಾಸಕರಿಗೆ ಸನ್ಮಾನಿಸಿ ವಿಶೇಷ ರುದ್ರಾಕ್ಷಿ ನೀಡಿ ಆಶೀರ್ವದಿಸಿದರು.

ನಂತರ ಮಾತನಾಡಿದ ಶ್ರೀಗಳು ಬಸವಾದಿ ಶರಣರ ಕಾಯಕ ದಾಸೋಹ ತತ್ವ ಬಹಳ ಅಪ್ಯಾಯಮಾನವಾದುದು. ಕಲಬುರಗಿ ಶ್ರೀ ಶರಣಬಸವೇಶ್ವರರು ತಮ್ಮ ಅಪರಿಮಿತ ದಾಸೋದದಿಂದಲೇ ನಾಡಿನ ಜನರಿಗೆ ಅನ್ನದಾಸೋಹ ಮಾಡಿದರು.

ಎಲ್ಲಕ್ಕಿಂತ ಬಹುದೊಡ್ಡ ಬಲ ತೋಳ್ಬಲ. ಆ ಬಲವನ್ನು ಬಳಸಿ‌ ಕಾಯಕ ಮಾಡಬೇಕು. ದುಷ್ಚಟಗಳಿಗೆ ಬಲಿಯಾಗಬಾರದು ಎಂದ ಶ್ರೀಗಳು, ಶಾಸಕರಾದ ಶ್ರೀಮಠ ಸರ್ವಜನಾಂಗದ ಶಾಂತಿಯ ತೋಟದಂತಿರುವ, ಬಸವಣ್ಣನವರ ಇವನಾರವ ಇವನಾರವ ಎನ್ನುವ ವಚನದ ತತ್ವದ ಅಡಿಪಾಯದಲ್ಲಿ ಶ್ರೀ ಮಠ‌ ಯಾವುದೇ ಜಾತಿಧರ್ಮಕ್ಕೆ ಸೀಮಿತವಾಗಿರದ ಎಲ್ಲರಿಗೂ ಅನುಕೂಲವಾಗುವಂತ ಯಾತ್ರಿ‌ನಿವಾಸ ನಿರ್ಮಿಸಿಕೊಟ್ಟಿದ್ದಾರೆ.‌ ಇದೇ ನಿಜವಾದ ಕಾಯಕ ತತ್ವದ ಪರಿಪಾಲನೆ ಹಾಗೂ ಸಮಾಜಮುಖಿ‌ ಕೆಲಸವಾಗಿದೆ ಎಂದು ನುಡಿದರು.

ಪ್ರಿಯಾಂಕ್ ಖರ್ಗೆ ಅವರು ನೇಡ ನುಡಿಯವರು. ಅವರ ಮಾತುಗಳು ಖಾರ ಎನಿಸಬಹುದು ಆದರೆ ಅಭಿವೃದ್ಧಿಗೆ ಸದಾ ತುಡಿಯುವ ಅವರ ಸೇವೆ ಅಪಾರವಾದುದು ಎಂದು ಶ್ರೀಗಳು ಶ್ಲಾಘಿಸಿದರು.

ವೇದಿಕೆಯ ಮೇಲೆ ಶರಣಬಸವಪ್ಪ ಅಪ್ಪ, ಎಂ ಎಲ್ ಸಿ ತಿಪ್ಪಣ್ಣಪ್ಪ ಕಮಕನೂರು ಸೇರಿದಂತೆ ವಿವಿಧ ಮಠಗಳ ಶ್ರೀಗಳು ಸೇರಿದಂತೆ ಅಪಾರ ಜನರು ಹಾಗೂ ಮಠದ ಭಕ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here