‘ಯಾವುದು ಧರ್ಮ’ ವಿಶೇಷ ಅನುಭಾವ ಮೇ. 10ಕ್ಕೆ

0
143

ಅಫಜಲಪುರ: ಭಾರತೀಯ ಬಸವ ಬಳಗ, ಬಸವ ಮಾರ್ಗ ಪ್ರತಿಷ್ಠಾನ, ಜಾಗತಿಕ ಲಿಂಗಾಯತ ಮಹಾಸಭಾ ಹಾಗೂ ಶರಣ ಸಾಹಿತ್ಯ ಪರಿಷತ್ ಅಫಜಲಪುರ ಘಟಕದ ವತಿಯಿಂದ ಮೇ 10ರಂದು ಶರಣ ಸಂಗಮ ಹಾಗೂ ಬಸವ ಜಯಂತಿ ಆಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿವಿಧ ಸಂಘಟನೆಗಳ ಮುಖ್ಯಸ್ಥರು ತಿಳಿಸಿದ್ದಾರೆ.

ಪಟ್ಟಣದ ಆದರ್ಶ ನಗರದಲ್ಲಿರುವ ಬಸವ ಮಂಟಪದಲ್ಲಿ ದಿನಾಂಕ 10 ರಂದು ಸಂಜೆ 6 ಗಂಟೆಗೆ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.

Contact Your\'s Advertisement; 9902492681

ಕಲಬುರಗಿ ಸರಗಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ಟಿ. ಗುರುಬಸಪ್ಪ ಅಧ್ಯಕ್ಷತೆ ವಹಿಸಲಿದ್ದು, ತಾಲೂಕು ವಲಯ ಅರಣ್ಯಾಧಿಕಾರಿ ವಿಶ್ವನಾಥ ಕೊರನಳ್ಳಿ ಉದ್ಘಾಟಿಸಸಲಿದ್ದಾರೆ. ಸ್ತ್ರೀ ಶಕ್ತಿ ಸಂಘಗಳ ಒಕ್ಕೂಟದ ಕಾರ್ಯದರ್ಶಿ ಸಿದ್ದಮ್ಮಗೌಡತಿ ನಿಂಗಣ್ಣಗೌಡ ಮಾಲಿ ಪಾಟೀಲ ಷಟಸ್ಥಲ ಧ್ವಜಾರೋಹಣ ನೆರವೇರಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಪತ್ರಕರ್ತ, ಲೇಖಕ ಶಿವರಂಜನ್ ಸತ್ಯಂಪೇಟೆ ಅವರು ” ಯಾವುದು ಧರ್ಮ” ವಿಷಯ ಕುರಿತು ವಿಶೇಷ ಅನುಭಬಾವ ನೀಡಲಿದ್ದಾರೆ. ಪುರಸಭೆ ಸದಸ್ಯ ಶಿವಾನಂದ ಸಲಗರ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದು, ಕಲಬುರಗಿ ಸರ್ಕಾರಿ ಮಹಾವಿದ್ಯಾಲಯದ ಸಹ ಪ್ರಾಧ್ಯಾಪಕ ಮಲ್ಲೇಶಪ್ಪ ಎಸ್. ಕುಂಬಾರ ಅವರನ್ನು ಇದೇವೇಳೆ ಸತ್ಕರಿಸಲಾಗುವುದು ಎಂದು ವಿವರಿಸಿದ್ದಾರೆ.

ಪುರಸಭೆ ಸದಸ್ಯ ಯಮನಪ್ಪ ಭಾಸಗಿ ಪ್ರಸಾದ ಸೇವೆ ಮಾಡಿದ್ದು, ಡಾ. ನೀಲಾಶ್ರೀ ಅಮೃತರಾವ ಪಾಟೀಲ ಗುಡ್ಡೇವಾಡಿ ಅವರು ಪ್ತಾಸ್ತಾವಿಕ ಮಾತನಾಡಲಿದ್ದಾರೆ.

ಸಂತೋಷ ರಾಮಶೆಟ್ಟಿ ಹಾಗೂ ಸಂಗಡಿಗರಿಂದ ವಚನ ಪ್ರಾರ್ಥನೆ, ಶ್ರೀಶೈಲ ಆಡಕಿ ಸ್ವಾಗತಿಸಲಿದ್ದು, ಮುರುಗೇಂದ್ರ ಮಸಳಿ ನಿರೂಪಣೆ, ರಾವುತರಾಯ ಬಿ. ಶರಣು ಸಮರ್ಪಣೆಗೈಯಲಿದ್ದಾರೆ ಎಂದು ಅವರು ತಮ್ಮ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here