ವಿವಿಧ ಬೇಡಿಕೆಗಳ ಈಡೇರಿಸಲು ಆಗ್ರಹಿಸಿ ರೈತ ಸಂಘ ಪ್ರತಿಭಟನೆ ಮನವಿ

0
65

ಸುರಪುರ: ರೈತರು ಬೆಳೆದ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಲು ಸ್ವಾಮಿನಾಥನ್ ವರದಿ ಜಾರಿಗೆ ತರುವಂತೆ ಹಲವಾರು ವರ್ಷಗಳಿಂದ ಆಗ್ರಹಿಸುತ್ತಾ ಬಂದರು ಸರಕಾರಗಳು ನಿರ್ಲಕ್ಷ್ಯ ತೋರುತ್ತಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ-ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಯ್ಯಣ್ಣ ಹಾಲಬಾವಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿ,ರೈತರ ಬೆಳೆಗಳಿಗೆ ಸರಿಯಾದ ಬೆಲೆ ಸಿಗದ ಕಾರಣದಿಂದಾಗಿ ನಿತ್ಯವು ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ರೈತರು ಬೆಳೆವ ಎಲ್ಲಾ ಬೆಳೆಗಳು ಕಟಾವಿಗೆ ಬರುವಾಗ ಸರಕಾರದಿಂದ ಖರೀದಿ ಕೇಂದ್ರ ತೆರೆಯುತ್ತೆವೆ ಎಂದು ಭರವಸೆ ನೀಡುತ್ತಾರೆ.ಆದರೆ ರೈತರಿಗೆ ಸರಿಯಾದ ಮಾಹಿತಿ ನೀಡುವುದಿಲ್ಲ.ಈಗ ತೊಗರಿ ಖರೀದಿ ಕೇಂದ್ರಗಳನ್ನು ಆರಂಭಿಸುವ ಬಗ್ಗೆ ಸರಿಯಾದ ಮಾಹಿತಿಯಿಲ್ಲ.ಆದರೆ ಸರಿಯಾದ ಮಾಹಿತಿ ನೀಡದೆ ರೈತರ ಹೆಸರು ನೊಂದಣಿಗೆ ೩೧ನೇ ತಾರೀಖು ಕೊನೆಯ ದಿನಾಂಕ ನಿಗದಿ ಮಾಡಿದ್ದಾರೆ.ಇದರಿಂದ ಇನ್ನೂ ಅರ್ಧದಷ್ಟು ರೈತರು ಹೆಸರು ನೊಂದಾಯಿಸದೆ ಉಳಿಯುತ್ತಾರೆ.ಆದ್ದರಿಂದ ಹೆಸರು ನೊಂದಣಿಯ ದಿನಾಂಕವನ್ನು ಫೇಬ್ರವರಿ ೧೫ರ ವರೆಗೆ ಮುಂದೂಡುವಂತೆ ಒತ್ತಾಯಿಸಿದರು.

Contact Your\'s Advertisement; 9902492681

ರೈತರ ಹೊಲಗಳಿಗೆ ಭೇಟಿ ನೀಡಿ ಜಿಪಿಎಸ್ ಮಾಡುವ ಮೂಲಕ ಜಮೀನಲ್ಲಿರುವ ಬೆಳೆಗಳನ್ನು ನಮೂದಿಸುವಂತೆ ಸರಕಾರ ನಿಯಮ ಮಾಡಿದೆ,ಆದರೆ ಅಧಿಕಾರಿಗಳು ನಮ್ಮ ಹೊಲಗಳಿಗೆ ಭೇಟಿ ನೀಡದೆ ತಮ್ಮ ಮನಸ್ಸಿಗೆ ಬಂದ ಬೆಳೆಗಳ ಹೆಸರನ್ನು ನಮೂದಿಸಿದ್ದಾರೆ.ಇದರಿಂದ ರೈತರಿಗೆ ತಮ್ಮ ಮಾಲನ್ನು ಮಾರಲು ತೊಂದರೆಯಾಗಿದೆ. ಆದ್ದರಿಂದ ಸರಿಯಾದ ಬೆಳೆಯ ಹೆಸರು ನಮೂದಿಸಲು ಆಗ್ರಹಿಸಿದರು.

ಸಂಘಟನೆಯ ರಾಜ್ಯ ಕಾರ್ಯದರ್ಶಿ ಮಹಾದೇವಮ್ಮ ಬೇವಿನಾಳಮಠ ಮಾತನಾಡಿ,ರೈತರು ಮಾರಿದ ಮಾಲಿನ ಹಣವನ್ನು ರೈತರು ಆಧಾರ ಲಿಂಕ್ ಮಾಡಿಸಿದ ಯಾವ್ಯಾವುದೋ ಖಾತೆಗಳಿಗೆ ಹಣ ಹಾಕುತ್ತಿದ್ದಾರೆ.ಇದರಿಂದ ರೈತರು ಗೊಂದಲಕ್ಕೊಳಗಾಗುತ್ತಿದ್ದಾರೆ.ಆದ್ದರಿಂದ ರೈತರು ಹೇಳಿದ ಖಾತೆಗೆ ಹಣ ಹಾಕಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಒಂದೆರಡು ಎಕರೆ ಜಮೀನಿರುವ ರೈತರು ಹನಿ ನೀರಾವರಿಗಾಗಿ ಸ್ಪಿಂಕ್ಲರ್ ಪೈಪ್ ನೀಡಲು ಅರ್ಜಿಸಲ್ಲಿಸಿದರೆ ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ.ಸ್ಪಿಂಕ್ಲರ್ ಪೈಪ್ ನೀಡಲು ಕ್ರಮ ಕೈಗೊಳ್ಳುವಂತೆ ತಿಳಿಸಿದರು.ದಿನಕ್ಕೆ ಏಳು ಗಂಟೆ ಮಾತ್ರ ವಿದ್ಯೂತ್ ನೀಡುತ್ತಿದ್ದು ಇದರಿಂದ ರೈತರಿಗೆ ಜಮೀನಿಗೆ ನೀರಾಯಿಸಲು ಸಾಧ್ಯವಾಗುತ್ತಿಲ್ಲ ಸುಮಾರು ೧೨ ಗಂಟ ವಿದ್ಯೂತ್ ನೀಡಲು ಒತ್ತಾಯಿಸಿದರು.ಬರ ಮತ್ತು ನೆರೆಯಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ.

ಇಂತಹ ರೈತರು ಸಾಲ ಮರು ಪಾವತಿಸುವಂತೆ ಬ್ಯಾಂಕ್ ಅಧಿಕಾರಿಗಳು ಒತ್ತಾಯಿಸುತ್ತಿದ್ದು ಇದರಿಂದ ರೈತರು ಕಂಗಾಲಾಗಿದ್ದಾರೆ.ಬ್ಯಾಂಕಿನ ಅಧಿಕಾರಿಗಳು ಸಾಲಕ್ಕೆ ಒತ್ತಾಯಿಸದಂತೆ ಕ್ರಮ ಕೈಗೊಳ್ಳಬೇಕು ಮತ್ತು ಬರಗಾಲದಿಂದ ಸಂಕಷ್ಟ ಹೆದರಿಸುತ್ತಿರುವ ರೈತರ ಸಾಲ ಮನ್ನಾ ಮಾಡುವುದಾಗಿ ಹಿಂದಿನ ಸರಕಾರ ಘೋಷಣೆ ಮಾಡಿತ್ತು,ಅದನ್ನು ಮುಂದುವರೆಸಿ ಎಲ್ಲಾ ರೈತರ ಸಾಲ ಮನ್ನಾ ಮಾಡುವಂತೆ ಹಾಗು ಎಸ್‌ಬಿಐ ಬ್ಯಾಂಕ್‌ನಲ್ಲಿಯ ಅಧಿಕಾರಿಗಳು ಗ್ರಾಹಕರ ಹಣವನ್ನು ತುಂಬಿಕೊಳ್ಳದೆ ತೊಮದರೆ ನೀಡುತ್ತಿದ್ದಾರೆ ಇದನ್ನು ತಪ್ಪಿಸಿ ಬ್ಯಾಂಕ್ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂಬ ವಿವಿಧ ಬೇಡಿಕೆಗಳನ್ನು ಸರಕಾರದ ಮುಂದಿಟ್ಟರು.

ಇದಕ್ಕು ಮುನ್ನ ನಗರದ ಮಹಾತ್ಮ ಗಾಂಧಿ ವೃತ್ತದಿಂದ ತಹಸೀಲ್ ಕಚೇರಿ ವರೆಗೆ ಪಾದಯಾತ್ರೆ ಮಾಡಿ ಸರಕಾರದ ವಿರುಧ್ಧ ಘೋಷಣೆಗಳನ್ನು ಕೂಗಿದರು.ನಂತರ ಜಿಲ್ಲಾಧಿಕಾರಿಗಳಿಗೆ ಬರೆದ ಮನವಿಯನ್ನು ತಹಸೀಲ್ದಾರ ನಿಂಗಣ್ಣ ಬಿರೆದಾರ ಮೂಲಕ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘದ ತಾಲೂಕಾಧ್ಯಕ್ಷ ಹಣಮಂತ್ರಾಯ ಮಡಿವಾಳ,ಹುಣಸಗಿ ತಾಲೂಕು ಮಹಿಳಾ ಘಟಕದ ಅಧ್ಯಕ್ಷೆ ಶರಣಮ್ಮ ಬೂದಿಹಾಳ,ಕೆಂಭಾವಿ ಹೋಬಳಿ ಮಹಿಳಾ ಘಟಕದ ಅಧ್ಯಕ್ಷೆ ಧರ್ಮಬಾಯಿ,ಶಿವುಶರಣ ಸಾಹುಕಾರ,ತಿಪ್ಪಣ್ಣ ಜಂಪಾ,ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ದೇವೆಂದ್ರಪ್ಪ ಪತ್ತಾರ,ರಾಘು ಕುಪಗಲ್,ರುದ್ರಯ್ಯ ಮೇಟಿ,ವೆಂಕಟೇಶ ಕುಪಗಲ್,ಚಂದ್ರಕಾಂತ ಗೊಡ್ರಿಹಾಳ,ಸಿದ್ದಪ್ಪ ಪುಜಾರಿ,ಶ್ರೀಶೈಲ ಗೌಡಗೇರಾ,ಗುರುರಾಜ ಸಾಥಕೇಡ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here