ಕಲಬುರಗಿ ರೈಲ್ವೆ ನಿಲ್ದಾಣಕ್ಕೆ ಜಂಕ್ಷನ್ ನಾಮಕರಣ,ಹೊಸ ರೈಲುಗಳ ಸೇವೆಗೆ ಆಗ್ರಹ

0
385

ಕಲಬುರಗಿ: ಕಲಬುರಗಿ ಜಂಕ್ಷನ್ ಆಗಿರುವುದರಿಂದ ಇದಕ್ಕೇ ಅಧಿಕೃತವಾಗಿ ಸ್ಥಾನಮಾನ ನೀಡಿ ನಾಮಫಲಕ ಅಳವಡಿಕೆ ಮತ್ತು ಹೊಸ ರೈಲುಗಳ ಸೇವೆ ಆರಂಭಿಸಿ, ಬೆಂಗಳೂರು ಮಾರ್ಗದಲ್ಲಿ ಚಲಿಸುವ ರೈಲುಗಳಿಗೆ ವಿದುತ್ಯ ಚಾಲಾತ ಸೇವೆ ಮಾರ್ಗವನ್ನು ಕಲ್ಪಸಬೇಕೆಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸದ ಡಾ. ಉಮೇಶ್ ಜಾಧವ್ ಹಾಗೂ ಸೋಲಾಪೂರ ರೈಲ್ವೆ ವಿಭಾಗದ ವಿಭಾಗೀಯ ವ್ಯವಸ್ಥಾಪಕರಾದ ಶೈಲೆಶ ಗುಪ್ತಾರವರಿಗೆ ಸ್ಟೇಷನ್ ಆವರಣದಲ್ಲಿ ಬಹಿರಂಗ ಮನವಿ ಪತ್ರವನ್ನು ಸಲ್ಲಿಸಿ ಒತ್ತಾಯಿಸಿದರು.

ಹೈ.ಕ,ಜ.ಸಂ.ಸ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಮಾತನಾಡಿ, ಕಲಬುರಗಿಯಿಂದ ಬೆಂಗಳೂರಿಗೆ ಹೊಸ ರೈಲು ಆರಂಭಿಸಲು, ಕೊಲ್ಹಾಪೂರ-ಸೊಲಾಪೂರ ರೈಲು ಕಲಬುರಗಿಯವರೆಗೆ ಮುಂದುವರೆಸಿ ಇಲ್ಲಿನ ಜನರಿಗೆ ಶ್ರೀಕ್ಷೆತ್ರ ಪಂಡರಾಪೂರ ಮತ್ತು ಘಾಣಗಪೂರಕ್ಕೆ ಹೋಗಲು ಅನುವು ಮಾಡಿಕೊಡಲು ಅದರಂತೆ ಅಹಮದಾಬಾದ ಚೆನ್ನೈ ಎಕ್ಸಪ್ರೆಸ್ ಕಲಬುರಗಿಗೆ ನಿಲುಗಡೆ ಮಾಡಲು ಹಾಗೂ ಕಲಬುರಗಿ ಹೈದ್ರಾಬಾದ ಇಂಟರಸಿಟಿ ರೈಲು ಸೇಡಂ, ಚಿತ್ತಾಪೂರ, ಮಳಖೇಡ ಸ್ಟೇಷನ ಗಳಲ್ಲಿ ನಿಲುಗಡೆ ಮಾಡಲು ಹಾಗೂ ವಿಶಾಖಪಟ್ಟನಂ-ಮುಂಬೈ ರೈಲು ಶಹಾಬಾದ, ಚಿತ್ತಾಪೂರ ಮತ್ತು ಸೇಡಂ ಸ್ಟೇಷನಗಳಲ್ಲಿ ನಿಲುಗಡೆಗೆ ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.

Contact Your\'s Advertisement; 9902492681

ಕಲಬುರಗಿ ಜಂಕ್ಷನ್ ಆಗಿರುವುದರಿಂದ ಇದಕ್ಕೇ ಅಧಿಕೃತವಾಗಿ ಸ್ಥಾನಮಾನ ನೀಡಿ ನಾಮಫಲಕ ಹಾಕಬೇಕು. ಉದ್ಯಾನ್, ಹಾಸನ್, ಬಸವ, ಎಲ್.ಟಿ.ಟಿ, ಕರ್ನಾಟಕ ಎಕ್ಸಪ್ರೆಸ್ ರೈಲುಗಳು ಕಲಬುರಗಿಯಿಂದ ಬೆಂಗಳೂರಿಗೆ ಚಲಿಸುವ ರೈಲುಗಳಿಗೆ ವಿದ್ಯುತ್ ಇಂಜಿನ್‌ಗಳ ಅಳವಡಿಸುವುದರಿಂದ ಡಿಸೆಲ್‌ನ ಉಳಿತಾಯದ ಜೊತೆಗೆ ರೈಲುಗಳ ವೇಗ ಹೆಚ್ಚಳಕ್ಕೆ ಮನವಿ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಸಂಸದರ ಜೊತೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಜಿ ಪಾಟೀಲ ಮತ್ತು ಹೈ.ಕ,ಜ.ಸಂ.ಸ ಸಮಿತಿಯ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ, ಜ್ಞಾನಮಿತ್ರ ಸ್ಯಾಮ್ಯುವೆಲ್, ಇಂದುಧರ ಜಾಧವ, ಗುರುರಾಜ ಭಂಡಾರಿ, ಆಕಾಶ ರಾಠೋಡ, ಹಣಮಂತ, ಅಸ್ಲಂ ಚೌಂಗೆ ಮುಂತಾದವರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here