ನಾಳೆ ನಮ್ಮ ನಡೆ ಮಹಾತ್ಮ ಗಾಂಧಿ ಕಡೆ: ಪಾದಯತ್ರೆ: ಡಾ. ಶರಣಪ್ರಕಾಶ

0
43

ಕಲಬುರಗಿ: ಮಹಾತ್ಮ ಗಾಂಧಿಜಿ ಅವರ ಹುತಾತ್ಮ ದಿನಾಚರಣೆ ಅಂಗವಾಗಿ ನಾಳೆ ಜ. 30 ರಂದು ನಗರದ ವಿವಿಧ ಕಡೆಯಿಂದ ಗಾಂಧಿ ಪ್ರಥಿಮೆಯವರೆಗೆ ಕಾರ್ಯಕರ್ತರಿಂದ ಪಾದಯಾತ್ರೆ ಹಾಗೂ ಸಭೆಯನ್ನು ಏರ್ಪಡಿಸಲಾಗಿದೆ ಎಂದು ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ತಿಳಿಸಿದರು.

ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಇಂದಿನ ಯುವ ಜನಾಂಗವು ಮಹಾತ್ಮ ಗಾಂಧಿಜೀ ಯವರ ಕುರಿತು ಅರಿಯಬೇಕಾಗಿದೆ. ದೇಶದಲ್ಲಿ ನಡೆಯುತ್ತಿರುವ ಅಶಾಂತಿಯವ ವಾತರವಣದಿಂದಾಗಿ ಇಂದು ಉದ್ಯೋಗ ಸೃಷ್ಠಿಯಲ್ಲಿ ಕಡಿಮೆ, ವ್ಯಾಪಾರ ವಹೀವಾಟಿನಲ್ಲಿ ಕುಸಿತ, ಆರ್ಥಿಕ ಪರಿಸ್ಥಿತಿ ಅಧೋಗತಿಗೆ ಹೋಗಿದೆ. ಇದೆನೆಲ್ಲ ತಿಳಿಯುವುದು ಹಾಗೂ ಗಾಂಧಿ ಅವರು ಹಾಕಿಕೊಟ್ಟಂತ ಮಾರ್ಗದಲ್ಲಿ ನಡೆಯುವುದ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

Contact Your\'s Advertisement; 9902492681

ಗಾಂಧಿಜೀ ಆದರ್ಶ ತತ್ವವನ್ನು ಸಾರುವವರು ಇಂದು ಅವರನ್ನು ಕೊಂದ ಗೋಡ್ಸೆಯನ್ನು ಸಂಸತ್ತಿನಲ್ಲಿ ಮತ್ತು ಹೊರಗೆ ವೈಭವಿಕರಿಸಲಾಗುತ್ತಿದೆ. ಇದು ಮೂರ್ಖತನದ ಪರಮಾವದಿಯಾಗಿದೆ. ಗಾಂಧಿಜೀಯನ್ನು ಅಪಮಾನ ಮಾಡುವ ರೀತಿಯಲ್ಲಿ ಅಧಿಕಾರದಲ್ಲಿವ ಪಕ್ಷ ಹಾಗೂ ಸಂಘಟನೆಯಾಗಿವೆ ಎಂದು ಬಿಜೆಪಿ ಹೆಸರು ಹೇಳದೆ ಪರೋಕ್ಷವಾಗಿ ಟೀಕಿಸಿದರು.

ನಗರದ ರಿಂಗ್ ರಸ್ತೆಗಳಿಗೆ ಬಂದು ಸೇರುವ ಪ್ರಮುಖ ರಸ್ತೆಗಳ ಮುಖಾಂತರ ಕಾರ್ಯಕರ್ತರು ಸುಮಾರು ೩ ರಿಂದ ೪ ಕಿ.ಮೀ. ಪಾದಯಾತ್ರೆ ಮಾಡುವರು. ಇಂದಿರಾ ಸ್ಮಾರಕ ಭವನದ ಎದುರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಎಲ್ಲರು ಬಂದು ಸೇರಿ ಪ್ರಾರ್ಥನೆ ಸಲ್ಲಿಸಲಾಗುವುದು. ನಂತರ ಜಗತ್ತ ವೃತ್ತದ ಟ್ಯಾಂಕ್ ಬಂಡ್ ರಸ್ತೆಯಲ್ಲಿ ಸಾರ್ವಜನಿಕ ಸಭೆಯ ಆಯೋಜಿಸಲಾಗಿದೆ. ಪಕ್ಷದ ಕಾರ್ಯಕರ್ತರು ಸೇರಿದಂತೆ ಎಲ್ಲಾ ಮುಖಂಡರು ಆಗಮಿಸುವರು ಎಂದು ವಿವರಿಸಿದರು.

ಸುದ್ದಿಗೋಷ್ಠಿಯಲ್ಲಿ ಉತ್ತರ ಕ್ಷೇತ್ರದ ಶಾಸಕಿ ಕನೀಜಾ ಫಾತೀಮಾ ಖಮರುಲ್ ಇಸ್ಲಾಂ, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ ಮರತುರ, ಸಿದ್ದರಾಮ ಪ್ಯಾಟಿ ಉಪಸ್ಥಿತರಿದ್ದರು.

ಶಾಸಕರ ನೆರಳಲ್ಲಿ ಅಕ್ರಮ ಕ್ಲಬ್‌ಗಳು ಆರಂಭ.? 

ಶಾಸರಕ ಹಾಗೂ ಪೊಲೀಸ ನೆರಳಲ್ಲಿ ಅಕ್ರಮವಾಗಿ ಕ್ಲಬ್‌ಗಳು ಆರಂಭಿಸಲಾಗುತ್ತಿದೆ ಅದಕ್ಕೆ ಜಿಲ್ಲಾಡಳಿತ ಹಿಂದಿನಿಂದ ಕೈಜೋಡಿಸಿರಬಹುದು ಎಂದು ಆರೋಪಿಸಿ ಶಂಕೆ ವ್ಯಕ್ತ ಪಡಿಸಿದ ಮಾಜಿ ಸಚಿವ ಡಾ. ಶರಣಪ್ರಕಾಶ ಪಾಟೀಲ ಕೂಡಲ ಕ್ಲಬ್‌ಗಳು ಬಂದ್ ಮಾಡಬೇಕು ಇಲ್ಲವಾದಲ್ಲಿ ಹೋರಾಟ ಮಾಡುತ್ತೇವೆ ಎಂದು ಎಚ್ಚಿರಿಸಿದರು.

ಸೇಡಂ ಸೇರಿದಂತೆ ಜಿಲ್ಲೆಯಾದಂತ ಅಕ್ರಮ ಜೂಜಾಟ ಕ್ಲಬ್‌ಗಳಿಗೆ ಶಾಸಕರಿಂದ ಕೃಪಾಕಟಾಕ್ಷ ಇದೆ ಎನ್ನುವದು ಇದೆ. ಈ ಕುರಿತು ಪೊಲೀಸರು ಅನುಮತಿ ನೀಡಿದ್ದಾರೆಯೇ? ನೀಡಿಲ್ಲವಾದರೆ ಕೂಡಲೆ ಕ್ರಮಕೈಗೊಳ್ಳುತ್ತಿಲ್ಲವೇಕೆ? ಜಿಲ್ಲೆಯಾದ್ಯಂತ ಅಕ್ರಮ ಮರಳು ಧಂದೆ ಪೊಲೀಸರ ಕೃಪೆಯಲ್ಲಿ ನಡೆಯುತ್ತಿದೆ. ಕಡಿವಾಣ ಏಕೆ ಇಲ್ಲ? ಪತ್ರಿಕಾ ಭವನದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.

ಕೇಂದ್ರ ಸರಕಾರದಲ್ಲಿರುವ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಗಳಿಂದ ದೇಶದ ಐಕತೆಗೆ ಹಾಗೂ ಭದ್ರತೆ ಧಕ್ಕೆ ಇದೆ. ದೇಶದಲ್ಲಿ ಕೇವಲ ನಕರಾತ್ಮ ವಿಷಯಗಳ ಮೇಲೆ ಚರ್ಚೆ ನಡೆಯುತ್ತಿದೆ. ನಮ್ಮ ಸರಕಾರ ಸಕರಾತ್ಮವಾಗಿ ಕೆಲಸ ಮಾಡುತ್ತದೆ. ಈ ದೇಶದ ಹಿಂದುಳಿದ ಹಾಗೂ ಅಲ್ಪಸಂಖ್ಯಾತರು ಹೊರಗಿನಿಂದ ಬಂದವರು ಎಂಬ ಹೇಳಿಕೆ ಕೋಡುವವರಿಗೆ ಬುದ್ಧಿ ಭ್ರಮಣೆಯಾಗಿದೆ. ದೇಶಭಕ್ತಿಯ ಅಪ್ಪಟ ನಾಟಕವಾಡುತ್ತಿರುವ ಜನರಿಂದ ದೇಶ ಜನರು ನಿರೀಕ್ಷಿಸುವುದಾದರು ಏನು? ಎಂದರು.

ಶಾಸಕರು ಇದ್ದರು ಸಚಿವರಿಲ್ಲದ ಜಿಲ್ಲೆ ಅಭಿವೃದ್ಧಿ ನಿರೀಕ್ಷಿಸುವದಾದರೂ ಏನು. ಹೈದ್ರಾಬಾದ ಕರ್ನಾಟಕ ಎನ್ನುವದು ಕಲ್ಯಾಣ ಕರ್ನಾಟಕ ಮಾಡಿದರೆ ಅಭಿವೃದ್ಧಿಯಾದಿತೆ. ಹೆಸರು ಬದಲಾಯಿಸಿ ಹಣ ಬಿಡುಗಡೆ ಮಾಡುತ್ತಿಲ್ಲ. ೧೦ ರಿಂದ ೨೦ ಕಾಮಗಾರಿಗಳ ವೃಂದ ರಚಿಸಿ ಒಬ್ಬರಿಗೆಯೇ ಟೆಂಡರ್ ನೀಡುತ್ತಿರುವದರಿಂದ ಅಭಿವೃದ್ಧಿ ಹೇಗೆ ಪ್ರತಿಯೊಂದು ಕಾಮಗಾರಿಗೂ ಪ್ರತ್ಯೇಕ ಟೆಂಡರ್ ಕರೆಯಬೇಕು ಎಂದು ಆಗ್ರಹಿಸಿದರು.

ಈ ಕುರಿತು ಪಕ್ಷದ ವತಿಯಿಂದ ಹೋರಾಟದ ನಿರ್ಣಯಕೈಗೊಂಡು ಸದ್ಯದಲ್ಲಿಯೇ ವೈಫಲ್ಯದ ಕುರಿತು ಹಾಗೂ ಅಕ್ರಮ ಕ್ಲಬ್‌ಗಳ ಬಂದ್ ಮಾಡುವದಕ್ಕಾಗಿ ಜಿಲ್ಲೆಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉತ್ತರ ಕ್ಷೇತ್ರದ ಶಾಸಕಿ ಕನೀಜಾ ಫಾತೀಮಾ ಖಮರುಲ್ ಇಸ್ಲಾಂ, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ ಮರತುರ, ಸಿದ್ದರಾಮ ಪ್ಯಾಟಿ ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here