ಕಲಬುರಗಿಯಲ್ಲಿ ಭೀಕರ ಅಪಘಾತ: ಬೈಕ್ ಮೇಲೆ ಹೋಗ್ತಿದ್ದ ಮೂವರು ಸ್ಥಳದಲ್ಲೇ ಸಾವು

0
103

ಕಲಬುರಗಿ: ಲಾರಿ ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ರೇವೂರ್ ಗ್ರಾಮದ ಬಳಿ ನಡೆದಿದೆ.

ರಾಜಕುಮಾರ್ ಖಂಡೇಕರ್ (24), ಗುಂಡಪ್ಪಾ ಮಾನೆ (20) ಮತ್ತು ಮಹಾದೇವಪ್ಪಾ ಸಾಲೆಗಾಂವ್ (30) ಮೃತರು ಎಂದು ತಿಳಿದು ಬಂದಿದೆ. ಇವರು ಆಳಂದ ತಾಲೂಕಿನ ಮಾಡ್ಯಾಳ ಗ್ರಾಮದವರು ಎನ್ನಲಾಗಿದೆ.

Contact Your\'s Advertisement; 9902492681

ಜಾತ್ರಾ‌ ಮಹೋತ್ಸವದಲ್ಲಿ ಪಾಲ್ಗೊಂಡು ವಾಪಸ್ ಒಂದೇ ಬೈಕ್ನಲ್ಲಿ ಮೂವರು ಊರಿಗೆ ತೆರಳುವಾಗ ಈ ಅಪಘಾತ ಸಂಭವಿಸಿದೆ.

ಈ ಕುರಿತು ರೇವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here