60 ಸಾವಿರ ಸರಕಾರಿ ಶಾಲೆಯ ವಿದ್ಯಾರ್ಥಿಳಿಗೆ ಕಣ್ಣಿನ ಪರೀಕ್ಷೆಗೆ ಚಾಲೆನ

0
26

ಕಲಬುರಗಿ: ಜಯಾ ಫೌಂಡೆಷನ್, ಸೈಟ್ರೈಟ್ ಹಾಗೂ ಸ್ರಾವಷ್ಠಿ ಟ್ರಸ್ಟ್‌ಗಳ ಸಹಯೋದಲ್ಲಿ ಕಲ್ಯಾಣ ಕರ್ನಾಟಕ ಜಿಲ್ಲೆಗಳ ವಿದ್ಯಾರ್ಥಿಗಳ ಕಣ್ಣು ಪರೀಕ್ಷೆಯ ಯೋಜನೆಗೆ ಚಿತ್ತಾಪುರ ತಾಲೂಕಿನಲ್ಲಿ ಚಾಲನೆ ನೀಡಲಾಗಿದೆ. ಮುಂದುವರೆಗೆ ಎಲ್ಲಾ ತಾಲೂಕಗಳಲ್ಲಿ ಯೋಜನೆ ಜಾರಿಗೆ ತರವು ಉದ್ದೇಶ ಹೊಂದಾಲಾಗಿದೆ ಎಂದು ಚಿತ್ತಾಪುರ ಶಾಸಕ ಹಾಗೂ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.

ಅವರ ಪತ್ರಿಕಾ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿದ್ಯಾಭ್ಯಾಸದಲ್ಲಿ ಅನೇಕ ವಿದ್ಯಾರ್ಥಿಗಳು ಹಿಂದಕ್ಕೆ ಬಿಳುವದರಲ್ಲಿ ಅನೇಕ ಕಾರಣಗಳು ಇವೆ. ಸೈಟ್ರೈಟ್ ವಿಜನ್ ನವರು ಒಂದು ಅಧ್ಯಾಯನ ನಡೆಸಿ ಕಣ್ಣಿನ ದೃಷ್ಠಿಯಲ್ಲಿ ದೋಷವಿದ್ದರು ವಿದ್ಯಾಭ್ಯಾಸದಲ್ಲಿ ಮಕ್ಕಳು ಹಿಂದಕ್ಕೆ ಬಿಳುತ್ತಾರೆ ಎಂಬ ಅಂಶವನ್ನು ಕಂಡುಕೊಂಡಿದ್ದಾರೆ. ಬೆಂಗಳೂರ ಹಾಗೂ ಕೊಪ್ಪಳದಲ್ಲಿ ೫೬೦೦ ವಿದ್ಯಾಥಿಗಳ ಕಣ್ಣಿನ ದೃಷ್ಠಿಯಿಂದಾಗವ ಹಿನ್ನಡೆಯ ಕುರಿತು ಅದ್ಯಾಯ ನಡೆಸಿದರು.

Contact Your\'s Advertisement; 9902492681

ಅದರಲ್ಲಿ ಸುಮಾರು ೧೦ ರಿಂದ ೧೨ಪ್ರತಿಶತ ವಿದ್ಯಾರ್ಥಿಗಳು ಸರಿಪಡಿಸಬಹುದಾದ ದೃಷ್ಠಹೀನತೆಯಿಂದ ಇರುವುದು ಕಂಡುಬಂದಿದೆ. ಒಂದು ಶಾಲೆಯಲ್ಲಿ ಒಂದು ಮಗವಿನ ಒಂದು ಭಾಗದ ಕಣ್ಣೇ ಕಾಣಿಸುವದಿಲ್ಲ ಹಾಗೆಯೇ ವಿದ್ಯಾರ್ಥಿನಿ ಶಾಲೆ ಬರುತ್ತಿದ್ದಳು ಸಂಸ್ಥೆ ನಡೆಸಿ ಆಧ್ಯಾಯನದಿಂದ ಮಗುಗೆ ಇರುವ ತಂದರೆಯನ್ನು ಪಾಲಕರಿಗೆ ತಿಳಿಸಿದರು.
ಇನ್ನೂ ಸರಿಪಡಿಸದೇ ಇರುವ ತೊಂದರೆಗಳಿಗೆ ಕಣ್ಣಿನ ತಜ್ಞವೈದ್ಯರಿಗೆ ತಿಳಿಸಿ ಸಾಕಷ್ಟು ಸಹಾಯ ಮಾಡಲಾಗವುದು. ಅಲ್ಪದೃಷ್ಠಿಹೀನತೆಇರುವ ವಿದ್ಯಾಥಿಗಳಿಗೆ ಬೇಕಾಗುವ ಕನ್ನಡಕವನ್ನು ಜಯಾಫೌಂಡೇಷನ್‌ನವರು ವಿತರಿಸುತ್ತಾರೆ. ವಿದ್ಯಾರ್ಥಿ ಮುಖದ ಅಂದವನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ಕನ್ನಡಕವನ್ನು ತಯ್ಯಾರಿಸಿ ವಿತರಿಸುತ್ತಾರೆ ಎಂದು ವಿವರಿಸಿದರು.

ಅದಕ್ಕಾಗಿ ವೈದ್ಯರಾದ ಸಿದ್ದಾರ್ಥ ಪೈಯವರು ಜಿಲ್ಲೆಯಲ್ಲಿ ತಂಡಗಳನ್ನು ರಚನೆ ಮಾಡಿ ಅವರಿಗೆ ಮಾರ್ಗದರ್ಶನ ನೀಡಲಾಗುತ್ತದೆ. ನಗರ ಪ್ರದಶದಲ್ಲಿ ೯ ಸಾವಿರ ಜನರ ಕುರಿತು ಮಾಹಿತಿ ಸಂಗ್ರಹಿಸಲು ಒಂದೊಂದ ತಂಡವನ್ನು ರಚನೆ ಮಾಡಲಾಗಿದೆ. ಅದರಂತೆ ಗ್ರಾಮೀಣ ಭಾಗದಲ್ಲಿ ೬೯ ಸಾವರ ಜನರ ಕುರಿತು ಮಾಹಿತಿ ಸಂಗ್ರಹಿಸಿ ತಂಡ ರಚನೆ ಮಾಡಲಾಗಿದೆ. ತಂಡಕ್ಕೆ ಬೇಕಾಗುವ ಅವಶ್ಯಕ ತರಬೇತಿ ಮ್ಯಾಪಿಂಗ್ ಕುರಿತು ಮಾಹಿತಿ ಇತ್ಯಾದಿಯನ್ನು ಸಂಗ್ರಹಿಸಲಾಗುತ್ತದೆ ವಿವರಿಸಿದರು.

೫ ವರ್ಷದಿಂದ ೧೮ ವರ್ಷದ ಒಳಗಿರುವ ಸರಕಾರಿ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ ಕಣ್ಣಿನ ಪರೀಕ್ಷೆ ಮಾಡಲಾಗುವುದು. ಖಾಸಗಿ ಶಾಲೆಯ ವಿದ್ಯಾರ್ಥಗಳಿ ಬಂದರೆ ಅವರಿಗೂ ಕೂಡ ಪರೀಕ್ಷೆ ಮಾಡಲಾಗುವದು. ನಮ್ಮ ಭಾಗದ ಅನೇಕ ಖಾಸಗಿ ಶಾಲೆಗಳಲ್ಲಿ ಬಡ ಮಕ್ಕಳೂ ಸಹ ವಿದ್ಯಾಭ್ಯಾಸ ಮಾಡುತ್ತಾರೆ. ಅವರಿಗೂ ವಚನೆಯಾಗಬಾರದು ಎಂದು ಜಯಾ ಫೌಂಡೇಷನ್‌ನ ಅಧ್ಯಕ್ಷ ಉಲ್ಲಾಸ ಕಾಮತ ಅವರನ್ನು ಕೇಳಿಕೊಂಡಾಗ ಅದಕ್ಕೆ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಗದೇವ ಗುತ್ತೇದಾರ, ಪ್ರವೀಣ ಪಾಟೀಲ ಹರವಾಳ ಹಾಗೂ ಇತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here