ಕನ್ನಡ ಸಾಹಿತ್ಯ ಸಮ್ಮೇಳನ ಜಾಗೃತಿಗೆ ಬೈಕ್ ಹತ್ತಿ ಬಂದ ಯುವಕ!

0
278
  • ಶಿವರಂಜನ್ ಸತ್ಯಂಪೇಟೆ

ಕಲಬುರಗಿ: ಫೆ. ೫, ೬ ಮತ್ತು ೭ರಂದು ಕಲಬುರಗಿಯಲ್ಲಿ ನಡೆಯಲಿರುವ ಅಖಿಲ ಭಾರತ ೮೫ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ (ಬಸವಣ್ಣನವರ ಜನ್ಮ ಸ್ಥಳ)ಯಿಂದ ಕಲಬುರಗಿವರೆಗೆ ಯುವಕನೊಬ್ಬ ಬೈಕ್ ಹತ್ತಿ ಬಂದಿದ್ದಾನೆ.

ದೇವರ ಹಿಪ್ಪರಗಿಯ ಭೀಮರಾಯ ಹೂಗಾರ ಎಂಬಾತ ತನ್ನ ಹೊಂಡಾ ಎಕ್ಟೀವ್ ಬೈಕ್ ಗೆ ವಿಶೇಷ ಅಲಂಕಾರ ಮಾಡಿ, ಸಾಹಿತ್ಯ ಸಮ್ಮೇಳನದ ವಿವರ ಮತ್ತು ಕೆಲ ನುಡಿಮುತ್ತುಗಳನ್ನು ಬರೆಯುವ ಮೂಲಕ ಕನ್ನಡ ಪ್ರೇಮವನ್ನು ಮೆರೆದಿದ್ದಾನೆ.

Contact Your\'s Advertisement; 9902492681

ಭಾರತ ಸರ್ಕಾರದ ಸ್ವಚ್ಛ ಭಾರತ ಅಭಿಯಾನದ ಹಿನ್ನೆಲೆಯಲ್ಲಿ ನಾನು ಸಂಗ್ರಹಿಸಿರುವ ಪುಸ್ತಕಕ್ಕೆ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಮೆಚ್ಷುಗೆ ಸೂಚಿಸಿ ಪತ್ರ ಬರೆದಿದ್ದಾರೆ ಎಂದು ಅತ್ಯಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ, ತನ್ನ ಬೈಕ್  ಮೇಲೆ ನುಡಿ ಮುತ್ತುಗಳ ಸಾಹಿತ್ಯ ಸಾರಿಗೆ ಎಂದು ಹೆಸರಿಟ್ಟಿರುವುದು ಇನ್ನೂ ವಿಶೇಷವಾಗಿದೆ.

ಈ ಹಿಂದೆ ಮೈಸೂರಿನಲ್ಲಿ ನಡೆದ ಅಖಿಲ ಭಾರತ ೮೩ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಧಾರವಾಡದಲ್ಲಿ ನಡೆದ ಅಖಿಲ ಭಾರತ ೮೪ನೇ ಸಾಹಿತ್ಯ ಸಮ್ಮೇಳನಕ್ಕೂ ಇದೇ ಬೈಕ್ ಮೇಲೆ ತೆರಳಿ ಕನ್ನಡ ಸಾಹಿತ್ಯ ಸಮ್ಮೇಳನದ ಜಾಗೃತಿ ಮೂಡಿಸಿದ್ದರು ಇವರು.

ಇದೀಗ ಇಂದು ಬೆಳಗ್ಗೆ ಬಸವ ಬಾಗೇವಾಡಿಯ ಬಸವ ಜನ್ಮ ಸ್ಥಳದಿಂದ ಇಲ್ಲಿಗೆ ಆಗಮಿಸಿರುವ ಈ ಯುವಕ ಸಮ್ಮೇಳನ ಮುಗಿವವರೆಗೆ ಇಲ್ಲಿಯೇ ಸುತ್ತಾಡಲಿದ್ದಾನೆ.

ಜಿಲ್ಲೆಯ ವಿವಿಧ ತಾಲ್ಲೂಕುಗಳಿಗೆ ತೆರಳಿ ಅಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಜಾಗೃತಿ ಮೂಡಿಸಿ ಸಾರ್ವಜನಿಕರನ್ನು ಸಮ್ಮೇಳನದಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲಿದ್ದಾನೆ.

ಬಿ.ಕಾಂ ಪದವೀಧರನಾದ ಈ ಭೀಮರಾಯ ಹೂಗಾರ ೩೦ ಕೃತಿಗಳನ್ನು ಕೂಡ ರಚಿಸಿದ್ದು, ೧ ಲಕ್ಷ ನುಡಿ ಮುತ್ತುಗಳ ಪುಸ್ತಕವನ್ನು ಸಹ ಸಂಗ್ರಹಿಸಿದ್ದಾರೆ. ಅರ್ಧ ಬೆಲೆಯಲ್ಲಿ ತನ್ನ ಈ ಪುಸ್ತಕವನ್ನು ಮಾರಾಟ ಮಾಡುತ್ತ ಕನ್ನಡದ ಕೈಂಕರ್ಯ ಕೈಗೊಂಡಿರುವ ಇವರ ಸೇವೆಗೆ ನಾವೆಲ್ಲರೂ ಒಂದು ಸೆಲ್ಯೂಟ್ ಸಲ್ಲಿಸಲೇಬೇಕಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here