ಕಲಬುರಗಿ: ಯಾವ ಸಮಾಜದಲ್ಲಿ ಶಿಕ್ಷಣ ವ್ಯವಸ್ಥೆ ಸರಿದಾರಿಯಲ್ಲಿ ಇರುತ್ತದೆಯೋ ಆ ಸಮಾಜ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿ ಸತೀಶ ಗಾಂವಕರ್ ಅಭಿಪ್ರಾಯಪಟ್ಟರು.
ಇತ್ತೀಚಿಗೆ ಆಳಂದ ತಾಲೂಕಿನ ಗಡಿಗ್ರಾಮ ಖಜೂರಿಯ ಸ್ವಾಮಿ ವಿವೇಕಾನಂದ ವಿವಿದೊದ್ದೇಶ ಸಹಕಾರ ಸಂಘದ ಸರ್ ಎಂ ವಿಶ್ವೇಶ್ವರಯ್ಯ ಕಾನ್ವೆಂಟ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ ೭ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಒಂದು ಭಾಷೆ ಬೆಳೆಯಬೇಕಾದರೆ ಅದನ್ನು ಸಾಧ್ಯವಾದಷ್ಟು ದಿನನಿತ್ಯದ ಜೀವನದಲ್ಲಿ ಉಪಯೋಗಿಸಬೇಕು ಅದಕ್ಕಾಗಿ ಆಡಳಿತ ಮತ್ತು ವ್ಯವಹಾರದಲ್ಲಿ ಆ ಭಾಷೆಯನ್ನು ಕಡ್ಡಾಯ ಮಾಡಬೇಕು ಆಗ ಭಾಷೆ ಸಂಪದ್ಭರಿತವಾಗಿ ಬೆಳೆಯುತ್ತದೆ ಎಂದು ಹೇಳಿದರು.
ಹಣಮಂತ ಶೇರಿ ಮಾತನಾಡಿದರು. ವೇದಿಕೆಯ ಮೇಲೆ ಶ್ರೀಕಾಂತ ಖೂನೆ, ವೈಜನಾಥ ಕಂದಗೂಳೆ, ಮಲ್ಲಿನಾಥ ಹೊಸಮನೆ, ನಾಗಣ್ಣ ಶಿವಶೆಟ್ಟಿ, ಶಂಕರ ಅಲ್ದಿ, ಕಾಳಿದಾಸ ಸುತಾರ, ಸೂರ್ಯಕಾಂತ ಗುಂಜೂಟೆ, ನಾಗಪ್ಪ ಅಲ್ದಿ, ವಿಶ್ವನಾಥ ಅವರಾದೆ, ಲೋಕೇಶ ಕಂದಗೂಳೆ, ಪಿಂಟೂ ಶಿವಶೆಟ್ಟಿ ಸೇರಿದಂತೆ ಇತರರು ಇದ್ದರು.
ಮುಖ್ಯ ಗುರು ಜಗದೇವಿ ಬಂಗರಗೆ ವಾರ್ಷಿಕ ವರದಿ ವಾಚನ ಮಾಡಿದರೆ, ಶಿಕ್ಷಕಿಯರು ಸ್ವಾಗತಿಸಿದರು. ಪುಷ್ಪಾ ಮತ್ತು ಸಿದ್ದಾರಾಮ ಜವಳಗೆ ನಿರೂಪಿಸಿದರು.