ಸರ್ವರೂ ಸಮ್ಮೇಳನಕ್ಕೆ ಬನ್ನಿ: ಜಿಲ್ಲಾಧಿಕಾರಿ ಶರತ್

0
73

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ ಫೆಬ್ರವರಿ 5 ರಿಂದ 7ರವರೆಗೆ ನಡೆಯಲಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಿಗರೆಲ್ಲರೂ ಬಿಚ್ಚು ಮನಸ್ಸಿನಿಂದ ಪಾಲ್ಗೊಂಡು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಶರತ್ ಬಿ. ಅವರು ಕರೆ ನೀಡಿದರು.

ಅವರು ಫೆ. 2 ರವಿವಾರ ಗುಲಬರ್ಗಾ ವಿಶ್ವವಿದ್ಯಾಲಯದ ಆವರಣದಲ್ಲಿ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿರುವ ಮುಖ್ಯ ವೇದಿಕೆಯ ಬಳಿ ಹಮ್ಮಿಕೊಳ್ಳಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ನುಡಿ ಹಬ್ಬದ ಆಚರಣೆ ನಮ್ಮ ಹಬ್ಬವೆಂಬ ಎಂಬ ಭಾವನೆ ಪ್ರತಿಯೊಬ್ಬರಲ್ಲೂ ಮೂಡಬೇಕು, ಈಗಾಗಲೇ ಕನ್ನಡ ಸಾಹಿತ್ಯ ಪರಿಷತ್‍ದಿಂದ ಎಲ್ಲರಿಗೂ ಆಮಂತ್ರಣ ನೀಡಲಾಗಿದೆ. ಇದರಲ್ಲಿ ಯಾರಿಗೂ ನಿರ್ಲಕ್ಷ್ಯ ಮಾಡಿಲ್ಲ. ಬಿಚ್ಟು ಮನಸ್ಸಿನಿಂದ ಸರ್ವರೂ ನುಡಿ ಜಾತ್ರೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಅವರು ತಿಳಿಸಿದರು.

Contact Your\'s Advertisement; 9902492681

ನಗರದಲ್ಲಿರುವ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತರಾಗಿ ತಮ್ಮ ಅಂಗಡಿಗಳ ಮುಂದೆ ತಳಿ ತೋರಣ ಕಟ್ಟಿ, ರಂಗೋಲಿ ಹಾಕಿ ಅಲಂಕಾರ ಮಾಡಬೇಕು. ಜಿಲ್ಲೆಯಲ್ಲಿ ಹಬ್ಬದ ಕಳೆ ತರಬೇಕು ಎಂದರು.

ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಒಟ್ಟು 16 ಸಮಿತಿಗಳನ್ನು ರಚಿಸಲಾಗಿದೆ, ಸಮಿತಿಯ ಎಲ್ಲ ಸದಸ್ಯರು ಕ್ರೀಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮುಖ್ಯ ವೇದಿಕೆ ಹಾಗೂ ಎರಡು ಸಮಾನಾಂತರ ವೇದಿಕೆಗಳಲ್ಲಿ ಆಯೋಜಿಸಲಾದ ಕಾರ್ಯಕ್ರಮಗಳಿಗೆ ಯಾವುದೇ ಸಮಸ್ಯೆ ಬಾರದಂತೆ ಈಗಾಗಲೇ ಎಚ್ಚರ ವಹಿಸಲಾಗಿದೆ. ಸಮ್ಮೇಳನಕ್ಕೆ ಭಾಗವಹಿಸಲು ನೋಂದಾಯಿಸಿಕೊಂಡಿರುವವರೆಗೆ ವಸತಿ ಹಾಗೂ ಸಾರಿಗೆಯ ವ್ಯವಸ್ಥೆಯನ್ನು ಅಚ್ಟುಕಟ್ಟಾಗಿ ರೂಪಿಸಲಾಗಿದೆ. ಅತಿಥಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸಲು ನಗರದಲ್ಲಿ 60 ಹೊಟೇಲ್‍ಗಳು, 17 ಶಾಲೆಗಳು, 10 ಕಲ್ಯಾಣ ಮಂಟಪಗಳು, 12 ವಸತಿ ನಿಲಯಗಳು, 9 ಅತಿಥಿ ಗೃಹಗಳು, 5 ಸರ್ಕಾರಿ ವಸತಿ ಗೃಹಗಳನ್ನು ಬಳಸಿಕೊಳ್ಳಲಾಗಿದೆ. ಅವರೆಲ್ಲರಿಗೂ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ವೇದಿಕೆಗಳಲ್ಲಿ ಸಂಜೆ ವೇಳೆ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿದಿನ ಒಬ್ಬರನ್ನು “ಪ್ರದರ್ಶನದ ಅತ್ಯುತ್ತಮ ವ್ಯಕ್ತಿ” ಎಂದು ಸಮಿತಿಯಿಂದ ಘೋಷಿಸಲಾಗುವುದು ಎಂದು ಹೇಳಿದರು

ಆಹಾರ ಸಮಿತಿಯಿಂದ 150 ಕೌಂಟರ್‍ಗಳನ್ನು ತೆರೆದಿದ್ದು, ನೋಂದಾಯಿಸಿಕೊಂಡವರಿಗೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ವಿಶೇಷವಾಗಿ ಮಾಧ್ಯಮದವರಿಗೆ ಕಂಪ್ಯೂಟರ್, ವೈಫೈ, ಊಟದ ವ್ಯವಸ್ಥೆ, ಮಾಧ್ಯಮ ಗ್ಯಾಲರಿ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.

ನಗರ ಪೊಲೀಸ್ ಆಯುಕ್ತ ಡಾ. ಎಂ.ಎನ್. ನಾಗರಾಜ್ ಅವರು ಮಾತನಾಡಿ, ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಯಾಗಿ ನಿರ್ವಹಿಸಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ರೂಪಿಸಲಾಗಿದೆ. ಅದಕ್ಕಾಗಿ 4,000 ಪೊಲೀಸರು, 3+1 ಪೊಲೀಸ್ ವರಿಷ್ಠಾಧಿಕಾರಿಗಳು, 15 ಎಸಿಪಿ, 25 ಸರ್ಕಲ್ ಇನ್ಸ್‍ಪೆಕ್ಟರ್, 200 ಸಬ್‍ಇನ್‍ಪೆಕ್ಟರ್, 10 ಕೆ.ಎಸ್.ಆರ್.ಪಿ. ತುಕ್ಕಡಿ, 500 ಹೋಂ ಗಾರ್ಡ್, 700 ಟ್ರಾಫಿಕ್ ಪೊಲೀಸ್ ಹಾಗೂ 500 ಮಹಿಳಾ ಪೊಲೀಸರನ್ನು ನಿಯೋಜಿಸಲಾಗಿದೆ. ಕಾರ್ಯಕ್ರಮ ನಡೆಯುವ ಎಲ್ಲ ಸ್ಥಳಗಳಲ್ಲಿ ಸಿ.ಸಿ. ಟಿ.ವಿ. ಅಳವಡಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಭದ್ರ ಸಿಂಪಿ, ಭೂ ದಾಖಲೆಗಳ ಉಪನಿರ್ದೇಶಕ ಶಂಕರ್ ಖಾದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here