ಕಲಬುರಗಿ: ಗುಲಬರ್ಗಾ ವಿಶ್ವ ವಿದ್ಯಾಲಯ ಆವರಣದಲ್ಲಿ ನಡೆಯುತಿರುವ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಜೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.
ಉಪಮುಖ್ಯಮಂತ್ರಿ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೊಂವಿದ್ ಕಾರಜೋಳ ಸ್ವಾಗತಿಸಿದರು. ಕನ್ನಡ ಮತ್ತು ಸಂಸ್ಕೃತ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ. ಸಮ್ಮೇಳನಾಧ್ಯಕ್ಷ ಡಾ.ಎಚ್.ಎಸ್. ವೆಂಕಟೇಶ ಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮನು ಬಳಿಗಾರ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ, ಸಂಸದ ಡಾ. ಉಮೇಶ ಜಾಧವ್, ಕಸಾಪ ಜಿಲ್ಲಾಧ್ಯಕ್ಷ ವೀರೇಂದ್ರ ಸಿಂಪಿ, ಜಿಲ್ಲಾಧಿಕಾರಿ ಶರತ್ ಬಿ, ಪೊಲೀಸ್ ಆಯುಕ್ತರು, ಪೊಲೀಸ್ ಮಹಾನಿರ್ದೃಶಕರು, ಶಾಸಕಿ ಕನೀಜ್ ಫಾತೀಮಾ, ಶಾಸಕ ದತ್ತಾತ್ರೇಯ ಪಾಟೀಲ್, ಸೇರಿಂದ ಜಿಲ್ಲೆಯ ತಾಲ್ಲೂಕು ಮತಕ್ಷೇತ್ರ ಶಾಸಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಇದ್ದರು.
ಈ ಸಂದರ್ಭದಲ್ಲಿ ಸಮ್ಮೇಳನ ಉದ್ದೇಶಿ ಮಾತನಾಡಿದ ಸಿಎಂ, ನಾಳೆ ಬೀದರ್ ವಿಮಾನ ನಿಲ್ದಾಣ ಸರ್ವಜನಿಕರಿಗೆ ಸೇವೆಗಾಗಿ ಉದ್ಘಾಟನೆವಾಗಲಿದ್ದು, ಕಲ್ಯಾಣ ಕರ್ನಾಟ ಭಾದವ ಅಭಿವೃದ್ಧಿ ಸರಕಾರ ಬದ್ಧವಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.
ಕಲಬುರಗಿಯಲ್ಲಿ ನಡೆಯುತಿರುವ 4ನೇ ಸಮ್ಮೇಳನ ಜಾತ್ರ ಮತ್ತು ಮೆರವಣಿಗೆ ಹಬ್ಬದ ವಾತವರಣ ಸೃಷ್ಠಿಸಿದೆ. ಸಮ್ಮೇಳನ ಸುಮಾರು ಎರಡು ಲಕ್ಷ ಸುತಮುತ ಜನರು ಸೇರುವುದು ಕಂಡುಬಂದಿದು, ಸಮ್ಮೇಳನ ಆವರಣದಲ್ಲಿ ಬೀದಿ ವ್ಯಾಪಾರಿಗಳಿಗೂ ತಮ್ಮ ಮಳಿಗೆಗೆ ಅವಕಾಶ ಮಾಡಿ ಕುಡುವ ಮೂಲಕ ಸಮ್ಮೇಳನ ಜಾತ್ರೆಗೆಚಾವಕಾಶ ನೀಡಲಾಗಿದೆ.