ಕಲಬುರಗಿ: ವಿವಾದಿತ ಸಿಎಎ, ಎನ್.ಆರ್.ಸಿ ಮತ್ತು ಎನ್.ಪಿ.ಆರ್ , ರದ್ದತಿ, ನವದೆಹಲಿಯ ಶಾಹೀನ್ ಬಾಗ್ ಗೆ ಬೆಂಬಲಿಸಿ ಗುಲಬರ್ಗಾ ಶಾಹೀನ್ ಬಾಗ್ ನೇತೃತ್ವದಲ್ಲಿ ಮಹಿಳೆಯರಿಂದ ಅನಿರ್ಧಿಷ್ಟ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ.
ನಗರದ ಮಹೇಬೂಬ್ ನಗರದ ಚೌಕ್ ಹತ್ತಿರ ಧರಣಿ ನಡೆಯುತಿದ್ದು, ಪ್ರತಿಭಟನೆಗೆ ಎಡ ಪಕ್ಷ ಹಾಗೂ ಪೀಪಲ್ಸ್ ಫೋರಂ ಸೇರಿದಂತೆ ಹಲವು ಸಂಘಟನೆಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತಿದೆ. ಪ್ರತಿಭಟನೆಯಲ್ಲಿ ಸುಮಾರು 200 ಹೆಚ್ಚು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ.
ಶಾಹೀನ್ ಬಾಗ್ ಮೇಲೆ ನಡೆಯುತಿರುವ ಆರೋಪಗಳು ಖಂಡಿಸಿ, ಕೋಮುವಾದಿಗಳಿಂದ ಹೋರಾಟ ಹತ್ತಿಕ್ಕುವ ಹುನ್ನಾರ ವಿರೋಧಿ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ, ಎನ್.ಆರ್.ಸಿ ಹಾಗೂ ಎನ್.ಪಿ.ಆರ್ ಮೂಲಕ ಒಂದು ಸಮುದಾಯ ಮತ್ತು ಹಿಂದುಳಿದ ವರ್ಗಕ್ಕೆ ಟಾರ್ಗೆಟ್ ಮಾಡಲಾಗುತಿದ್ದು, ಇಂತಜ ಕಾನೂನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.