ಶಹಾಪುರ: ಪೌರತ್ವದಿಂದ ನಾವು ಹೆದರುವದಿಲ್ಲ, ಅಖಂಡ ಭಾರತದ ಪ್ರಜೆಗಳ ಹಕ್ಕು ಕಸಿದುಕೊಳ್ಳಲಾಗಲ್ಲ.ಎಂದು ರುಕ್ಷಾನಾ ಬೇಗಂ ಹೇಳಿದರು.
ಪಟ್ಟಣದ ಸಿಪಿಎಸ್ ಶಾಲಾಮೈದಾನದಲ್ಲಿ ಸಂವಿಧಾನ ರಕ್ಷಿಸಿ ದೇಶ ಉಳಿಸಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ಮಾತನಾಡಿದರು.
ಹಿಂದುಳಿದ ವರ್ಗಗಳ ಪೌರತ್ವ ಹಕ್ಕು ಕಿತ್ತುಕೊಳ್ಳುವ ಹುನ್ನಾರ ಕೇಂದ್ರದ ಮೋದಿ ಸರ್ಕಾರ ಮುಂದಾಗಿದ್ದು, ಸಂವಿಧಾನ ತಿದ್ದುಪಡಿ ಗೆ ಭಾರತೀಯರಲ್ಲರು ವಿರೋಧ ವ್ಯಕ್ತವಾಗುತ್ತಿದೆ. ದೇಶದಲ್ಲಿ ಒಂದೆ ಹಕ್ಕು ಒಂದೆ ಗುರುತು ಇದ್ದರೂ ಮೋದಿ ಮಾಡುವ ದುರುದ್ದೇಶ ಸಂವಿಧಾನದ ಆಸೆಗಳಿಗೆ ದಕ್ಕೆ ತರುತ್ತಿದ್ದಾರೆ ಎಂದರು.
ವೇದಿಕೆಯಲ್ಲಿ ಹಿಂದುಳಿದ ಸಮುದಾಯದ ಮುಖಂಡರು ಎಡಪಕ್ಷ ಹಾಗೂ ಪ್ರಗತಿ ಪರ ಹೋರಾಟಗಾರರು ಸೇರಿಂದತೆ ಮುಂತಾದವರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.