ಬಾಕಿ ವೇತನ ಬಡ್ತಿ ನೀಡದಿದ್ದರೆ ಮೌಲ್ಯಮಾಪನ ಬಹಿಷ್ಕಾರ ಅನಿವಾರ್ಯ: ಮಹಾದೇವ ನಲಕಂಠೆ

0
132

ಕಲಬುರಗಿ: ನಗರದ ಜಿಲಾನಾಬಾದನಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಥಮ ವರ್ಷದ ಪಿ ಯು ಸಿ ಪರೀಕ್ಷೆ ನಡೆಯುತ್ತಿದ್ದು, ತಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.

ದಕ್ಷಿಣ ವಲಯ ಉಪನ್ಯಾಸಕರ ಸಂಘದ ಅಧ್ಯಕ್ಷ ಮಹಾದೇವ ನಲಕಂಠೆ ಮಾತನಾಡುತ್ತಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ರಾಜ್ಯಾದ್ಯಂತ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಎಲ್ಲಾ ಉಪನ್ಯಾಸಕರು ಕಪ್ಪು ಪಟ್ಟಿ ಧರಿಸಿಕೊಂಡು ಕಾರ್ಯನಿರ್ವಹಿಸುವ ಮೂಲಕ ಆಗ್ರಹಿಸಿದ್ದಾರೆ.

Contact Your\'s Advertisement; 9902492681

ಉಪನ್ಯಾಸಕರ ವೇತನ ತಾರತಮ್ಯವನ್ನು ಸರಿಪಡಿಸಲು ಈ ಹಿಂದೆ ಶ್ರೀ ಯಡಿಯುರಪ್ಪಾ ನವರ(ಸರಕಾರ) ಮುಖ್ಯ ಮಂತ್ರಿಗಳಾಗಿದ್ದಾಗ ರಚಿಸಿದ ಜಿ .ಕುಮಾರನಾಯಕ ಆಯೋಗ ಉಪನ್ಯಾಸಕರಿಗೆ ನಾಲ್ಕು ವೇತನ ಬಡ್ತಿಗಳನ್ನು ಕೊಡುವಂತೆ ಶಿಪಾರಸ್ಸು ಮಾಡಿತು.ಈಗಾಗಲೇ ಒಂದು ವೇತನ ಬಡ್ತಿಯನ್ನು ಸಿದ್ದರಾಮಯ್ಯ ನವರ(ಸರಕಾರ) ಮುಖ್ಯ ಮಂತ್ರಿಗಳಿದ್ದಾಗ ಕೊಡಲಾಗಿದೆ.

ಉಳಿದ ಮೂರು ವೇತನ ಬಡ್ತಿಗಳನ್ನು ಸರಕಾರ ನೀಡದೆ ಇದ್ದರೆ ಮುಂದಿನ ದ್ವಿತೀಯ ಪಿಯುಸಿ ಪರೀಕ್ಷೆಯ ಮೌಲ್ಯಮಾಪವನದ ಬಹಿಷ್ಕಾರ ಅನಿವಾರ್ಯವಾಗುತ್ತದೆ. ನಮ್ಮ ನ್ಯಾಯಯುತ ಬೇಡಿಕೆ ಈಡೇರಿಕೆಗಾಗಿ ವಿವಿಧ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಎಂದು ಹೇಳಿದರು.

ಉಪನ್ಯಾಸಕರಾದ ರಮೇಶ ಮಾಡ್ಯಾಳಕರ,ಶಾಂತಗೌಡ ಪಾಟೀಲ, ಸೋಮಶೇಖರ ಚವ್ಹಾಣ, ಮಹೇಶ್ ದೇಶಪಾಂಡೆ, ಡಾ.ವಿಶ್ವನಾಥ ಹೊಸಮನಿ, ಧರ್ಮರಾಜ ಜವಳಿ, ಜಮುನಾಬಾಯಿ ಟಿಳೆ,ನೀಲಮ್ಮಾ ಪಾಟೀಲ, ರೇಷ್ಮಾ ಖಾತುನ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here