ವಾಡಿ: ಹಳಕರ್ಟಿ ಶ್ರೀಸಿದ್ದೇಶ್ವರ ಧ್ಯಾನಧಾಮದ ಪಂಚ ವಾರ್ಷಿಕೋತ್ಸವ ಫೆ.೨೫ ರಂದು ಆಚರಿಸಲಾಗುತ್ತಿದ್ದು, ಫೆ.೨೧ ರಿಂದ ೨೫ರ ವರಗೆ ಪ್ರತಿದಿನ ಸಂಜೆ ೭:೩೦ ರಿಂದ ಶ್ರೀಮಠದ ಪೂಜ್ಯ ಶ್ರೀರಾಜಶೇಖರ ಸ್ವಾಮೀಜಿಗಳ ಸಾನಿಧ್ಯದಲ್ಲಿ ಶರಣುಕುಮಾರ ಸ್ವಾಮಿ ಹಿತ್ತಲಶಿರೂರ ಅವರು ಪ್ರವಚನ ನಡೆಸಿಕೊಡುವರು. ಪ್ರತಿದಿನವೂ ವಿವಿಧ ಗ್ರಾಮಗಳ ೩೦ ರೈತರಿಗೆ ಸನ್ಮಾನ ನಡೆಯಲಿದೆ.
ಬೆಳಗ್ಗೆ ೯:೩೦ಕ್ಕೆ ಶ್ರೀಮಠದ ಆವರಣದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಯಲಿದ್ದು, ಮಾಜಿ ಶಾಸಕ ವಾಲ್ಮೀಕಿ ನಾಯಕ ಉದ್ಘಾಟಿಸುವರು. ಜಂಗಮ ಸಮಾಜದ ತಾಲೂಕು ಅಧ್ಯಕ್ಷ ನೀಲಯ್ಯಸ್ವಾಮಿ ಮಠಪತಿ, ಬೆಂಗಳೂರು ನಾರಾಯಣ ಹೃದಯಾಲಯದ ಡಾ.ಬಸವರಾಜ ಎಸ್.ಹಾಗರಗಿ, ಡಾ.ಬಸವರಾಜ ಜಿ.ಎಸ್, ಡಾ.ಸಂತೋಷ ಸಕ್ಲೇಚ್ ಪಾಲ್ಗೊಳ್ಳುವರು.
ಸಾಯಂಕಾಲ ೭:೩೦ಕ್ಕೆ ಧಾರ್ಮಿಕ ಚಿಂತನಾ ಸಭೆ ಏರ್ಪಡಿಸಲಾಗಿದ್ದು, ನಾಲವಾರ ಶ್ರೀಕೋರಿಸಿದ್ಧೇಶ್ವರ ಸಂಸ್ಥಾನ ಮಠದ ಪೂಜ್ಯಶ್ರೀ ಡಾ.ಸಿದ್ಧ ತೋಟೇಂದ್ರ ಸ್ವಾಮೀಜಿ, ಆಂದೋಲಾ ಕರುಣೇಶ್ವರ ಮಠದ ಪೂಜ್ಯಶ್ರೀ ಸಿದ್ದಲಿಂಗ ಸ್ವಾಮೀಜಿ, ಶ್ರೀಶಿವಶಂಕರ ಶಿವಾಚಾರ್ಯ ಸೇಡಂ, ಶ್ರೀಮುನೀಂದ್ರ ಶಿವಾಚಾರ್ಯ ಹಳಕರ್ಟಿ, ಶ್ರೀಸಂಗಮನಾಥ ಸ್ವಾಮೀಜಿ ಅಳ್ಳೊಳ್ಳಿ, ಶ್ರೀನಿಜಗುಣಾನಂದ ಸ್ವಾಮೀಜಿ ಭೂಸನೂರ, ಶ್ರೀಸಿದ್ಧವೀರ ಶಿವಾಚಾರ್ಯ ದಿಗ್ಗಾಂವ, ಶ್ರೀಸಂಗನಬಸವ ಸ್ವಾಮೀಜಿ ದಂಡಗುಂಡ ಸೇರಿದಂತೆ ವಿವಿಧ ಮಠಾದೀಶರು ಸಾನಿಧ್ಯ ವಹಿಸುವರು. ಸಿಪಿಐ ಪಂಚಾಕ್ಷರಿ ಸಾಲಿಮಠ ಕಾರ್ಯಕ್ರಮ ಉದ್ಘಾಟಿಸುವರು.
ಅಲ್ಲದೆ ಇದೇ ಧಾರ್ಮಿಕ ಸಮಾರಂಭದಲ್ಲಿ ಸೇಡಂ ಸಿಪಿಐ ಶಂಕರಗೌಡ ಪಾಟೀಲ ಹಾಗೂ ಬೀದರ ಠಾಣೆಯ ಪಿಎಸ್‌ಐ ಗಂಗಾ ಭೀಮರಾಯ ಅವರಿಗೆ ಸಿದ್ಧಶಕ್ತಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಅಂದು ನಡೆಯುವ ಸಾಮಸ್ಕೃತಿಕ ಕಾರ್ಯಕ್ರಮಗಳಲ್ಲಿ ಜ್ಯೂ.ವಿಷ್ಣುವರ್ಧನ, ಜ್ಯೂ.ರವಿಚಂದ್ರನ್, ಜ್ಯೂ.ರಂಗಾಯಣ ರಘು ಹಾಗೂ ಖ್ಯಾತ ಸಂಗೀತ ಕಲಾವಿದ ಬಸವ ಬೆಂಗಳೂರು ಮನರಂಜನೆ ನೀಡುವರು ಎಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.