ಸುರಪೂರ: ಶೊಷಿತ ಸಮುದಾಯದ ಜನರ ಸಮಸ್ಯಗಳು ಮತ್ತು ಗ್ರಾಮೀಣ ಬಾಗದಲ್ಲಿ ಹಿಂದುಳಿದ ವರ್ಗದವರಿಗೆ ಅಂಬೇಡ್ಕರ್ ರವರ ಇತಿಹಾಸ ಮತ್ತು ಹೋರಾಟದ ಸತ್ಯ ಸಂಗತಿಗಳನ್ನು ಪರಿಚಯಿಸುವಂತಹ ಕಾರ್ಯಾಗಳು ಮಾಡಬೇಕು ಎಂದು ಮೂಲನಿವಾಸಿ ಅಂಬೇಡ್ಕರ್ ಸೇನೆಯ ರಾಜ್ಯ ಕಾರ್ಯದರ್ಶಿ ರಾಹುಲ್ ಹುಲಿಮನಿ ಮಾತನಾಡಿದರು.
ತಾಲೂಕಿನ ಬೋನ್ಹಾಳ ಗ್ರಾಮದ ಪಕ್ಷಿಧಾಮದಲ್ಲಿ ಗ್ರಾಮ ಶಾಖೆ ರಚನೆಗಾಗಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಡಾ.ಅಂಬೇಡ್ಕರ್ ರವರ ಅನುಯಾಯಿUಗಳಾದ ನಾವು ಜಾತ್ಯಾತಿತವಾದ ಸಂಘಟನೆಯನ್ನು ಕಟ್ಟಬೆಕು ದಿನ ದಲಿತರ ಉದ್ದಾರ ಕೆಲಸಗಳನ್ನು ಮಾಡಬೇಕು.ನಿಮ್ಮ ಕಣ್ಣ ಮುಂದೆ ಯಾವುದೆ ದೀನ ದಲಿತ ಶೋಷಿತರಿಗೆ ಅನ್ಯಾಯವಾದರೆ ಅದರ ವಿರುದ್ಧ ಧ್ವನಿ ಎತ್ತುವ ಮೂಲಕ ದಲಿತರ ನೆರವಿಗೆ ನಿಲ್ಲುವಂತೆ ತಿಳಿಸಿದರು.
ಸಭೆಯ ಆರಂಭದಲ್ಲಿ ಡಾ. ಬಿ.ಆರ್, ಅಂಬೇಡ್ಕರ್ ರವರ ಭಾವ ಚಿತ್ರಕ್ಕೆ ಮಾಲಾರ್ಪಣೆಮಾಡಿ ಜ್ಯೋತಿ ಬೆಳಗಿಸುವ ಮೂಲಕ ಸಭೆಯನ್ನು ಪ್ರಾರಂಭಿಸಲಾಯಿತು. ತಾಲೂಕ ಅದ್ಯಕ್ಷ ರಾಜು ಬಡಿಗೇರ್ ಸ್ವಾಗತಿಸಿದರು, ನಬಿಸಾಬ್ ಗೋಡೆಕಾರ್ ನಿರೂಪಿಸಿದರು ಶೇಖ್ ಅಲಿ ವಂದಿಸಿದರು. ಸಭೆಯಲ್ಲಿ ಹಣಮಂತ ಚಲುವಾದಿ, ವೆಂಕಟೇಶ್ ಬಡಿಗೇರ್ ,ಶಿವಣ್ಣ ಸಾಸಗೇರ್, ಭೀಮಣ್ಣ ಬೇವಿನಾಳ, ಹಣಮಂತ ರತ್ತಾಳ ಮಾನಪ್ಪ ರತ್ತಾಳ, ಯಲ್ಲಪ್ಪ ,ಮುತ್ತು ಅಮ್ಮಾಪೂರ್, ಹುಸೇನ್ ಭಾಷಾ, ಬೋಜೆಪ್ಪ, ಮೌನೇಶ ಘಂಟಿ, ಪ್ರಭು ಹುಲಿಮನಿ,ಚಂದ್ರು ಗೋಗಿ ಸೇರಿದಂತೆ ಮೂಲನಿವಾಸಿ ಸೇನೆಯ ಪದಾಧಿಕಾರಿಗಳು ಬಾಗವಹಿಸಿದ್ದರು.
ಬೋನ್ಹಾಳ ಗ್ರಾಮ ಘಟಕದ ಪದಾಧಿಕಾರಿಗಳು: ಪರುಶುರಾಮ್ ನಾಟೇಕಾರ್ (ಅದ್ಯಕ್ಷ), ಶರಣು ಹುಲಿಮನಿ (ಉಪಾದ್ಯಕ್ಷ),ಬಡೆಸಾಬ್ ಗುಡಗುಂಟಿ (ಉಪಾದ್ಯಕ್ಷ),ಮಶಾಕ್ ಪಟೇಲ್ (ಪ್ರಧಾನ ಕಾರ್ಯಾದರ್ಶಿ),ಉಮೇಶ ಹುಲಿಮನಿ (ಜಂಟಿ ಕಾಯಾದರ್ಶಿ), ಅಸ್ಲಾಮ್ ಹವಾಲ್ದಾರ್(ಕಾಯಾದರ್ಶಿ),ರವಿ ಚಾಕ್ರಿ (ಕಾಯಾದರ್ಶಿ),ಬಸವರಾಜ್ ಮದ್ರಿಕಿ (ಖಜಾಂಚಿ), ಅಲ್ಲಾಭಕ್ಷ ಸಾಲೋಡಗಿ,ಮರೆಪ್ಪ ನಾಟೇಕಾರ್,ಸದ್ದಾಮ್ ಹುಸೇನ (ಸದಸ್ಯರು)