ಕಲಬುರಗಿ: ದಕ್ಷಿಣ ಮತಕ್ಷೇತ್ರದಲ್ಲಿ ಬರುವ ವಾರ್ಡ್ ನಂ.೪೪ ರ ಗಾಜಿಪುರ ಬಡಾವಣೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅನುದಾನದ ಅಡಿಯಲ್ಲಿ ರೂ.೩.೫ ಕೋಟಿ ವೆಚ್ಚದ ವಿವಿಧ ಕಾಮಗಾರಿಗೆ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಭಾನುವಾರ ಚಾಲನೆ ನೀಡಿದರು.
ಗಾಜಿಪುರ ಬಡಾವಣೆಯಲ್ಲಿ ಬಹಳ ದಿನದಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣದಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಸಮಾಜ ಕಲ್ಯಾಣ ಇಲಾಖೆ ಅನುದಾನದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಎಂದು ರೇವೂರ ಹೇಳಿದರು.
ಈ ಸಂದರ್ಭದಲ್ಲಿ ಮಹಾ ನಗರ ಪಾಲಿಕೆ ಮಾಜಿ ಮೇಯರ್ ಮಲ್ಲಮ್ಮ ವಳಕೇರಿ, ಮಾಜಿ ಪಾಲಿಕೆ ಸದಸ್ಯ ಗಣೇಶ ವಳಕೇರಿ, ಅವಿನಾಶ ಗಾಯಕವಾಡ, ರಾಜು ವಾಡೇಕರ, ಅಂಬಾರಾಯ ವಾಡೇಕರ, ಅಣ್ಣಾರಾವ ಶಿವಗೋಳ, ಅನೀಲ್ ಠಾಕ, ಜೆ.ಇ ಕಾಳಪ್ಪ, ದಸರಥ ಧೂಮನಸೂರ, ಚಂದ್ರಮೋಹನ ಗಾಯಕವಾಡ, ದೀಲಿಪ, ಗೊಪಾಲ ನಾಟಿಕಾರ, ಮಲ್ಲಿಕಾರ್ಜುನ ಟೆಂಗಳಿ, ಗುತ್ತಿಗೇದಾರ ಸೂರ್ಯಕಾಂತ ಪಾಟೀಲ್, ಹಾಗೂ ಬಡಾವಣೆಯ ಹಿರಿಯ ಮುಖಂಡರು ಇದ್ದರು.