ಕಲಬುರಗಿ: ಸಂವಿಧಾನದಲ್ಲಿ ಹಿಂದೂ ಎಂಬ ಶಬ್ದವೇ ಇಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ, ಸಂವಿಧಾನದಲ್ಲಿ ಹಿಂದೂಗಳಿಗೆ ಮಿಸಲಾತಿ ನೀಡಿಲ್ಲ. ನನಗೆ ಹಿಂದೂ ಕರೆದರೆ ಬೈದಂತೆ ಎಂದು ಮಹಾರಾಷ್ಟ್ರದ ಭಾರತ ಮುಕ್ತಿ ಮೋರ್ಚಾ ಅಧ್ಯಕ್ಷೆ ಪ್ರತೀಭಾ ಉಬ್ಲೆ ತಿಳಿಸಿದರು.
ಅವರು ನಗರದ ಮಹೇಬೂಬ್ ನಗರ ಪ್ರದೇಶದಲ್ಲಿ ಕಳೆದ 14 ದಿನಗಳಿಂದ ಸಿಎಎ.ಎನ್.ಆರ್.ಸಿ ಮತ್ತು ಎನ್.ಪಿ.ಆರ್ ವಿರುದ್ಧ ದೆಹಲಿ ಮಾದರಿಯಲ್ಲಿ ಕಲಬುರಗಿ ಶಾಹೀನ್ ಬಾಗ್ ಹೋರಾಟದಲ್ಲಿ ಭಾಗವಹಿಸಿ ಮಾತನಾಡಿದರು.
ಹಿಂದೂ ಹೆಸರಿನ ಮುಖವಾಡ ಹಾಕಿಕೊಂಡು ಬ್ರಾಹ್ಮಣರು ಬಹುಸಂಖ್ಯೆನಾಗಲು ಹೊರಟಿದ್ದಾರೆ. ಎಸ್.ಸಿ.ಎಸ್.ಟಿ ಮತ್ತು ಓಬಿಸಿಗಳಿಗೆ ಹಿಂದೂ ಮಾಡುತಿದ್ದಾರೆ ಎಂದು ಆರೋಪಿಸಿದರು. ಆರ್.ಎಸ್.ಎಸ್ ಮತ್ತು ಬಿಜೆಪಿಯು ಭಾರತವನ್ನು ಹಿಂದೂ ರಾಷ್ಟ್ರ ಮಾಡಲು ಹೊರಟಿದೆ. ದೇಶದ ಮೂಲ ನಿವಾಸಿಗಳಾದ ದಲಿತರು, ಅಲ್ಪಸಂಖ್ಯಾತ ಸಮುದಾಯದ ಹಿಂದೂಗಳು ಎಂದು ಕರೆಸಿಕೊಳಲು ಬಯಸುವುದಿಲ್ಲ.
ನಮ್ಮನ್ನು ಹಿಂದೂಗಳು ಎಂದು ಕರೆಯುವ ಮೂಲಕ ನಮಗೆ ಶೋಷಿಸುವ ಹುನ್ನಾರ ಅಡಗಿದೆ. ಹಿಂದೂ ಶಬ್ದ ಬಾಬರ್ ಮತ್ತು ಅಕ್ಬರ್ ಕಾಲದಲ್ಲಿ ಭಾಯಿಗಳಾಗಿದವು, ಅದಕ್ಕಾಗಿ ನಮಗೆ ಹಿಂದೂಗಳು ಎಂದು ಕರೆಯದಿರಿ ಎಂದು ಎಚ್ಚರಿಕೆ ನೀಡಿದರು.
ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಮೂಲಕ ಮೂಲ ನಿವಾಸಿಗಳಾದ ದಲಿತರು, ಆದಿವಾಸಿ, ಅಲ್ಪಸಂಖ್ಯಾತರು ಹಾಗೂ ಮುಸ್ಲಿಂ ಸಮುದಾಯದ ಮತದಾನ, ಆಸ್ತಿ, ಸಂವಿಧಾನಿಕ ಹಕ್ಕುಗಳೊಂದಿಗೆ ನಮ್ಮ ದೇಶದ ನಾಗರೀಕತ್ವದ ಹಕ್ಕುಗಳನ್ನು ಕಸಿದುಕೊಳುವ ಹುನ್ನಾರವೇ ಈ ನೂತನ ಕಾಯ್ದೆಗಳು ಎಂದು ಟೀಕಿಸಿದರು. ಪ್ರತಿಯೊಬ್ಬ ಭಾರತೀಯ ನಾಗರೀಕರು ಎನ್.ಆರ್.ಸಿ ಮತ್ತು ಎನ್.ಪಿ.ಆರ್ ಕಾಯ್ದೆಗಳನ್ನು ಬಹಿಷ್ಕರಿಸಿ ಎಂದು ಕರೆ ನೀಡಿದರು.
ಇದೆ ವೇಳೆ ಎಐಡಿಎಸ್ಓ ರಾಜ್ಯಾಧ್ಯಕ್ಷೆ ಮಾತನಾಡಿ, ಸಂವಿಧಾನದ ಉಳಿವಿಗಾಗಿ ಕೋಮುವಾದಿ ಸರಕಾರದ ವಿರುದ್ಧ ಹೋರಾಟಗಳು ಇದೆ ರೀತಿ ಮುಂದುವರಿಸೋಣ, ಎಲ್ಲರೂ ಒಗ್ಗಟಾಗಿ ನೂತನ ಕಾಯ್ದೆಗಳ ವಿರುದ್ಧ ಬೀದಿಗೆ ಬಂದು ಪ್ರತಿಭಟನೆ ಮಾಡುವ ಅಗತ್ಯವಿದ್ದು, ಕಲಬುರಗಿಯಲ್ಲಿ ಮಹಿಳೆಯರಿಂದ ನಡೆಯುತ್ತಿರುವ ಶಾಹೀನ್ಬಾಗ್ ಹೋರಾಟಕ್ಕೆ ಸಂಘಟನೆ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಪ್ರತಿಭಟನೆಯಲ್ಲಿ ಶಿಲ್ಪಾ ಬಿ.ಕೆ, ಅಶ್ವಿನಿ ಚೌಲ್, ಡಾ.ಸ ಸೀಮಾ ದೇಶಪಾಂಡೆ, ಎಸ್.ಜಿ ಅಂಬಿಕಾ ಸೇರಿದಂತೆ ನೂರಾರು ಮಹಿಳೆಯರು ಇದ್ದರು.
ಎಮ್.ಎಸ್,ಕಿ ಮಿಲ್ ಪ್ರದೇಶದಲ್ಲಿ ನಡೆಯುತಿರುವ ಶಾಹೀನ್ ಬಾಗ್ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದೆ.