- ಸಾಜಿದ್ ಅಲಿ
ಕಲಬುರಗಿ: ದರ್ಗಾ ಪ್ರದೇಶದಲ್ಲಿ ಕಳೆದ ಒಂದು ತಿಂಗಳಿಂದ ನಡೆಯುತಿರುವ ಯುಜಿಡಿ ಕಾಮಗಾರಿ ತೀವ್ರ ಆಮೆಗತಿಯಿಂದ ಸಾಗುತಿದ್ದು, ಶಾಲಾ, ಕಾಲೇಜು, ದರ್ಗಾಕ್ಕೆ ಆಗಮಿಸುತ್ತಿರುವ ಭಕ್ತಾದಿ ಸೇರಿದಂತೆ ಸಾರ್ವಜನಿಕರು ಪರದಾಡುಂವತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಇನಾಮ್ದಾರ್ ಪೆಟ್ರೋಲ್ ಬಂಕ್ ದಿಂದ ರೋಜಾ ಪೊಲೀಸ್ ಠಾಣೆಯ ಮಾರ್ಗದ ಮಧ್ಯೆದಲ್ಲಿ ನಡೆಯುತ್ತಿರುವ ಈ ಕಾಮಗಾರಿ 22 ದಿನಕ್ಕೂ ಹೆಚ್ಚು ಕಳೆದಿದ್ದು, ಕಾಮಗಾರಿಕೆ ಪಡೆದ ಗುತ್ತಿಗೆದಾರ ಅರ್ಧ ಕಿ.ಮೀ ನಷ್ಟು ಕಾಮಗಾರಿಕ್ಕೆಯೂ ಪೂರ್ಣಗೊಳಿಸಿದರಿರುವುದು ಹಾಸ್ಯಸ್ಪದವಾಗಿದೆ.
ದರ್ಗಾ ಪ್ರದೇಶ ಜನ ನಿಬಿಡ ಪ್ರದೇಶವಾಗಿರುವ ಈ ರಸ್ತೆ ಕೆ.ಬಿ,ಎನ್ ಇಂಜಿನಿಯರಿಂಗ್, ಮೇಡಿಕಲ್, ಹಾಗೂ ಬಿಬಿ ರಜಾ ಪದವಿ, ಹಾಗರಗಾ, ಮಹೇಬೂಬ್ ನಗರ ಬಡಾವಣೆಗಳಿಗೆ ತಲುಪುವ ಪ್ರಮುಖ ಮಾರ್ಗವಾಗಿವೆ. ಅಲ್ಲದೇ ಖಾಜಾ ಬಂದಾ ನವಾಜ್ ದರ್ಗಾದ ಮುಂದೆ ಈ ಕಾಮಗಾರಿಕೆ ನಡೆಯುತಿರುವುದರಿಂದ ದರ್ಗಾಕ್ಕೆ ಆಗಮಿಸುವ ಪ್ರವಾಸಿ ಹಾಗೂ ಭಕ್ತಾದಿಗಳಿಗೆ ಭಾರಿ ಸಮಸ್ಯೆಗಳು ಎದುರಿಸುತಿದ್ದಾರೆ.
ಈ ಕಾಮಗಾರಿಕೆಯಿಂದ ಬಸ್ ಸಂಚಾರ ಸಂಪೂರ್ಣವಾಗಿ ಸ್ತಬ್ಧವಾಗಿದ್ದು, ಬಸ್ ಸ್ಟಾಂಡ್, ರೈಲ್ವೆ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರು ತೀವ್ರ ಕಷ್ಟವನ್ನು ಅನುಭವಿಸುತ್ತಿದ್ದು, ಆಟೋಗಳು ಸಣ್ಣ ಪ್ರದೇದಲ್ಲಿ ಸಿಲುಕಿಕೊಂಡು ಟ್ರಾಫಿಕ್ ಜಾಮ್ ಆಗಿ ಕಿತ್ತಾಟಗಳು ನಡೆಯುತಿರುವುದು ಪ್ರತಿ ದಿನದ ಕಿರಿಕಿರಿಯಾಗಿದೆ. ಅಲ್ಲದೆ ಪರೀಕ್ಷೆಗಳು ಎದುರಿಸುವ ಮತ್ತು ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ರಸ್ತೆ ನಿರ್ಮಾಣದ ಮಾರ್ಗ ಕಂಟಕವಾಗಿ ಪರಿಣಮಿಸಿದೆ.
ಜನ ನಿಬಿಡ ಪ್ರದೇಶದ ಇಲಾಖೆ ಕಾಮಗಾರಿಕೆ ಅಮೆಗತಿಯಲ್ಲಿ ನಡೆಸುತಿರುವುದರಿಂದ ಪ್ರತಿ ನಿತ್ಯ ಶಾಲಾ ಕಾಲೇಜುಗಳಿಗೆ ತೆರಳುವ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಅಧಿಕಾರಿಗಳು ಕಾಮಗಾರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಠಿಯಿಂದ ನಡೆಸಬೇಕಾದ ಕಾಮಗಾರಿಕೆಗಳು ಸಾರ್ವಜನಿಕರಿಗೆ ತೊಂದರೆ ಮತ್ತು ಸಂಕಷ್ಟಕ್ಕೆ ಸಿಲುಕುವಂತೆ ಮಾಡುತಿದ್ದು, ರಸ್ತೆಯಲ್ಲಿ ಸಂಚರಿಸುವ ನಾಗರಿಕರು ಸಂಸದ, ಶಾಸಕರು, ಕಲಬುರಗಿ ಮಹಾನಗರ ಪಾಲಿಕೆ ಆಯುಕ್ತರ ಹಾಗೂ ಲೋಕೋಪಯೋಗಿ ಇಲಾಖೆಯ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.