ಗೋದುತಾಯಿ ಅವರ ಬದುಕು ಅಮೂಲ್ಯ ರತ್ನ : ಬಸವರಾಜ ದೇಶಮುಖ

0
54

ಕಲಬುರಗಿ: ಶರಣ ಸಂಸ್ಥಾನದ ೨೫೦ ವರ್ಷಗಳ ಇತಿಹಾಸದಲ್ಲಿ ಈ ಸಂಸ್ಥಾನದಲ್ಲಿ ಮಾತೆಯರ ಪಾತ್ರ ಮಹತ್ವದ್ದಾಗಿದೆ. ಗೋದುತಾಯಿ ಅವ್ವನವರು ಮಹಾಮನೆಯ ಮಾತೆಯಾಗಿದ್ದರೂ ಕೂಡ ಸರಳ ಜೀವನಸಾಗಿಸುತ್ತಿದ್ದರು. ಇವರ ಬದುಕು ಅಮೂಲ್ಯ ರತ್ನವಾಗಿತ್ತು ಎಂದು ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಮಾತನಾಡಿ ಶ್ಲಾಘಿಸಿದರು.

ನಗರದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಮಾತೋಶ್ರೀ ಗೋದುತಾಯಿ ಅವ್ವನವರ ೪೯ನೇ ಪುಣ್ಯಸ್ಮರಣೋತ್ಸವದಲ್ಲಿ ಮಾತನಾಡಿದ ಅವರು, ಗೋದುತಾಯಿ ಅವ್ವನವರು ಕಾಯಕ ದಾಸೋಹಕ್ಕಾಗಿ ತಮ್ಮ ಜೀವನ ಮುಡುಪಾಗಿಟ್ಟಿದ್ದರು. ಸಂಸ್ಥಾನಕ್ಕೆ ಆಗಮಿಸುತ್ತಿದ್ದ ಮಕ್ಕಳನ್ನು, ತಮ್ಮ ಮಕ್ಕಳಂತೆ ಪೋಷಿಸುತ್ತಿದ್ದರು. ಅವ್ವನವರು ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದರು. ಹೀಗಾಗಿಯೇ ಕೇವಲ ಹೆಣ್ಣು ಮಕ್ಕಳಶಿಕ್ಷಣಕ್ಕಾಗಿ ದೊಡ್ಡಪ್ಪ ಅಪ್ಪನವರು ಮಹಾದೇವಿ ಶಾಲೆ ಆರಂಭಿಸುವದಕ್ಕೆ, ಗೋದುತಾಯಿ ಅವ್ವಾಜೀ ಅವರೇ ಮುಖ್ಯ ಪ್ರೇರಣೆಯಾಗಿದ್ದರು ಎಂದರು.

Contact Your\'s Advertisement; 9902492681

ಗೋದುತಾಯಿ ಅವ್ವನವರು ದೂರ ದೃಷ್ಟಿಯುಳ್ಳವರಾಗಿದ್ದರು. ದ್ರಾಕ್ಷಾಯಿಣಿ ಅವ್ವನವರು ಜನ್ಮತಾಳಿದಾಗಲೇ ಮುಂದೆ ಮಹಾಮನೆಯ ಮಾತೆಯಾಗುತ್ತಾಳೆಂದು ಭವಿಷ್ಯ ನುಡಿದಿದ್ದರು. ಇಂದು ಮಾತೋಶ್ರೀ ದಾಕ್ಷಾಯಿಣಿ ಅವ್ವನವರು ಗೋದುತಾಯಿ ಅವ್ವನವರ ಮಾರ್ಗದಲ್ಲಿಯೇ ಸಾಗುತ್ತಿದ್ದಾರೆ. ಹಸಿದ ಹೊಟ್ಟೆಗೆ ಅನ್ನ ನೀಡಿ, ನಿರಾಶ್ರಿತರಿಗೆ ಆಶ್ರಯ ನೀಡಿ ಆಶ್ರಯದಾತರಾಗಿದ್ದಾರೆ ಎಂದು ಹೇಳಿದರು.

ಶರಣಬಸವ ವಿಶ್ವವಿದ್ಯಾಲಯದ ಕುಲಪತಿಯಾದ ಡಾ. ನಿರಂಜನ್ ವಿ .ನಿಷ್ಠಿ ಮಾತನಾಡಿ, ಶರಣರ ಸಂಸ್ಥಾನದಲ್ಲಿ ಬಾಳುತ್ತಿರುವ ನಾವೆಲ್ಲರೂ ಧನ್ಯರು. ಪ್ರತಿ ಪುರುಷರ ಸಾಧನೆಯ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ. ಅದರಂತೆ ದೊಡ್ಡಪ್ಪ ಅಪ್ಪನವರ ಸಾಧನೆ ಹಿಂದೆ ಗೋದುತಾಯಿ ಅವ್ವನವರ ಪಾತ್ರ ಅತಿ ಮಹತ್ವವಾಗಿತ್ತು ಎಂದರು.
ವಿವಿ ಕುಲಸಚಿವ ಡಾ. ಅನೀಲಕುಮಾರ ಬಿಡವೆ ಮಾತನಾಡಿ, ಮಾತೋಶ್ರೀ ಗೋದುತಾಯಿ ಅವ್ವನವರು ತೋರಿದ ದಾರಿಯಲ್ಲಿಯೇ ಇಂದು ನಾವೆಲ್ಲರೂ ನಡೆಯುತ್ತಿದ್ದೇವೆ. ನಮ್ಮ ಸಂಸ್ಥೆಯಲ್ಲಿ ಅರ್ಧಕ್ಕಿಂತ ಹೆಚ್ಚು ಹೆಣ್ಣು ಮಕ್ಕಳೆ ಅಭ್ಯಾಸ ಮಾಡುತ್ತಿದ್ದಾರೆ. ಅದರಂತೆ ಬೋಧಕ ಬೋಧಕೇತರ ಸಿಬ್ಬಂದಿಯಲ್ಲಿ ಮಹಿಳೆಯರೇ ಹೆಚ್ಚಾಗಿದ್ದಾರೆ. ನಮ್ಮ ಸಂಸ್ಥಾನದಲ್ಲಿ ಮಹಿಳೆಯರ ರಕ್ಷಣೆಗೆ ಅತೀ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತದೆ ಎಂದರು.

ಮಹಾಮನೆಯ ಮಾತೆಯಾದ ಮಾತೋಶ್ರೀ ದಾಕ್ಷಾಯಿಣಿ ಅವ್ವನವರು ಮಾತೋಶ್ರೀ ಗೋದುತಾಯಿ ಅವ್ವನವರ ಪ್ರತಿರೂಪವಾಗಿದ್ದಾರೆ ಎಂದು ನುಡಿದರು. ಅಸ್ಸಿಸ್ಟೆಂಟ್ ಸಬ್ ಇನ್ಸ್‌ಪೆಕ್ಟರ್ ಯಶೋಧಾ ಕಟಕೆ ಮಾತನಾಡಿ, ಶರಣಬಸವೇಶ್ವರರು, ಬಸವಣ್ಣನವರು ಹೀಗೆ ಶ್ರೇಷ್ಠ ವ್ಯಕ್ತಿಗಳ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ನಾಡಿನಲ್ಲಿ ಜನ್ಮತಾಳಿದ ನಾವೆಲ್ಲರೂ ಧನ್ಯರು. ಜನ್ಮಗಳ ಪುಣ್ಯದ ಫಲದಿಂದ ನಾವೂ ಇಂದು ಈ ಶರಣರ ಸಂಸ್ಥೆಯಲ್ಲಿ ಬಾಳುತ್ತಿದ್ದೇವೆ ಎಂದರು.

ಹೆಣ್ಣೆಂದರೆ ಶಾಂತಿ, ಪ್ರೀತಿ, ಸಂಸ್ಕೃತೀಯ ಸಂಕೇತವಾಗಿದ್ದಾಳೆ. ನಮ್ಮ ದೇಶದ ಸಂಸ್ಕೃತಿಯಲ್ಲಿ ಹೆಣ್ಣಿಗೆ ಗೌರವಯುತ ಸ್ಥಾನವಿz. ಹೆಣ್ಣು ಸರ್ವಶಕ್ತಳಾಗಿದ್ದಾಳೆ. ಸಾಧನೆಯ ಹಾದಿಯಲ್ಲಿ ಧೈರ್ಯದಿಂದ ಮುನ್ನುಗ್ಗಿ, ಸಾಧನೆ ಮಾಡುವ ಸಾಧಕನಿಗೆ ಬಡತನವೆಂದೂ ಅಡ್ಡಿಯಾಗಲಾರದು ಎಂದು ವಿಧ್ಯಾರ್ಥಿನಿಯರಿಗೆ ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ವಿವಿಧ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದಾರ್ಥಿನಿಯರಿಗೆ ಸನ್ಮಾನಿಸಲಾಯಿತು. ISಇ ವಿಭಾಗ- ಭಾಗ್ಯಶ್ರೀ, ಅSಇ ವಿಭಾಗ -ಗೌರಿ, ಈಶ್ವರಿ, ನಾಜೀಮ್, ವೈಷ್ಣವಿ, ಸಾಬಾ ಫರೀನ್, ಅಮೃತಾ, ಕಾಶೀಶಾ ನಾಯಕ್, ತೃಪ್ತಿ, ಸೈದನಾ ಬೀಲಾ, ಅIಗಿIಐ ವಿಭಾಗ -ಸ್ಫೂರ್ತಿ, ರೀತಿಕಾ, ಇಇಇ ವಿಭಾಗ ಶ್ವೇತಾ, ಪೂಜಾ ಎಸ್. ಇಅಇ ವಿಭಾಗ ನಿಕಿತಾ, ಭಾಗ್ಯಶ್ರೀ ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ಅತೀ ಹೆಚ್ಚು ಅಂಕ ಪಡೆಯಲು ಕಾರಣಿಕರ್ತರಾದ .ಡಾ. ಸ್ವಾತಿ ಕಲಶೆಟ್ಟಿ, ಪ್ರೊ.ಜಯಸುಧಾ, ಪ್ರೋ.ಗೀತಾ, ಪ್ರೊ.ಶ್ವೇತಾ, ಪ್ರೋ.ವಿದ್ಯಾ ದೇಶಮುಖ ಅವರನ್ನು ಸನ್ಮಾನಿಸಲಾಯಿತು.

ಡೀನ್ ಡಾ.ಲಕ್ಷ್ಮಿ ಮಾಕಾ ಸ್ವಾಗತಿಸಿದರು. ಕು. ಅಮೃತಾ ಪ್ರಾರ್ಥನೆ ಗೀತೆ ಹಾಡಿದರು. ಪ್ರೊ. ಸಂಜನಾ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here