ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 30 ದಿನಗಳ ಸಿನಿಮೋತ್ಸವ

0
164

ಕಲಬುರಗಿ: ಡಾ.ರಾಜಕುಮಾರಂತಹ ಮೇರು ನಟರನ್ನು ನಮ್ಮಕನ್ನಡಚಿತ್ರರಂಗದಲ್ಲಿ ಹೊಂದಿದ್ದಕ್ಕಾಗಿತುಂಬಾ ಹೆಮ್ಮ ಎನಿಸುತ್ತದೆ. ಅವರುತಮ್ಮ ನಟನೆಯಜೊತೆಜೊತೆಗೆತಮ್ಮ ಮಾನವೀಯ ಮೌಲ್ಯಗಳಿಗಾಗಿ ಹೆಸರುಮಾಡಿದ್ದರು. ಡಾ.ರಾಜ್ ನಮ್ಮ ಸಹ ನಟರು ಹಾಗೂ ತಂತ್ರಜ್ಞರೊಂದಿಗೆತುಂಬಾ ಪ್ರೀತಿಯಿಂದ ಬೆರೆಯುತ್ತಿದ್ದರುಎಂದುಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಚ್.ಎಂ ಮಹೇಶ್ವರಯ್ಯ ತಿಳಿಸಿದರು.

ಅವರುಕೇಂದ್ರೀಯ ವಿಶ್ವವಿದ್ಯಾಲಯದಇಂಗ್ಲೀಷ್ ವಿಭಾಗ ಹಾಗೂ ರಂಗಾಯಣಗುಲ್ಬರ್ಗಾಇದರಜಂಟಿಆಶ್ತಯದಲ್ಲಿ ೩೦ದಿನಗಳ ಕಾಲ ನಡೆಯುವ ಸಿನಿಮೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು. ರಾಜಕುಮಾರ್‌ಅವರ ಸಿನಿಮಾಗಳನ್ನು ನೋಡುತ್ತಾ ಬೆಳೆದ ಅನುಭವಗಳನ್ನು ಹಂಚುತ್ತಾ, ನಾವು ಸಣ್ಣವರಿದ್ದಾಗ ೨ ಪೈಸೆಗೆ ಟೆಂಟ್ ಸಿನಿಮಾ ನೋಡುವ ಪರಿಪಾಠವಿತ್ತು. ಅವರ ಸಿನಿಮಾಗಳು ಕನ್ನಡ ಸಂಸ್ಕೃತಿಯನ್ನು ಬಿಂಬಿಸುತ್ತವೆ.

Contact Your\'s Advertisement; 9902492681

ಯಾವುದೇರೀತಿಯ ಪಾತ್ರಗಳಿಗೂ ಜೀವತುಂಬಬಲ್ಲ ವ್ಯಕ್ತಿತ್ವಅವರದ್ದು. ಇಂತಹ ಸಿನಿಮೋತ್ಸವಕ್ಯಾಂಪಸ್‌ನ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕಒತ್ತಡವನ್ನು ನಿವಾರಿಸಲು ಹಾಗು ಕನ್ನಡ ಸಿನಿಮಾಗಳನ್ನು ಆಸ್ವಾದಿಸಲು ಇದೊಂದು ಒಳ್ಳೆಯ ಅವಕಾಶ. ವಿದ್ಯಾರ್ಥಿಗಳು ಎಲ್ಲಾ ಭಾಷೆಗಳನ್ನು ಹಾಗು ಅದರ ಸಂಸ್ಕೃತಿಯನ್ನುಗೌರವಿಸುವ ಮನೋಭಾವ ಹೊಂದಬೇಕು. ಆದ್ದರಿಂದ ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸಂಗೀತ , ಜರ್ಮನ್, ಜಪಾನೀಸ್,ಅರೇಬಿಕ್ ಹಾಗು ಸ್ಪೇನಿಶ್ ಭಾಷೆಗಳ ಸರ್ಟಿಫಿಕೆಟ್ ಕೋರ್ಸ್‌ಗಳನದನು ಪ್ರಾರಂಭಿಸಲಾಗುತ್ತದೆಎಲ್ಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯಬೇಕೆಂದುಕರೆ ನೀಡಿದರು.

೫೦-೭೦ರ ದಶಕದ ಚಿತ್ರಗಳು ಸಾಂಸ್ಕೃತಿಕವಾಗಿತುಂಬಾ ಪ್ರಭುದ್ಧವಾಗಿದ್ದವು. ಅದು ಪ್ರಾದೇಶಿಕ ಚಿತ್ರಗಳು ಶುರುವಾದಕಾಲಘಟ್ಟವಾಗಿತ್ತು. ದಕ್ಷಿಣ ಭಾರತದಲ್ಲಿತೆಲುಗುಚಿತ್ರರಂಗದಲ್ಲಿಎನ್.ಟಿ.ಆರ್, ತಮಿಳಿನಲ್ಲಿ ಶಿವಾಜಿ ಗಣೇಶನ್ ಮತ್ತುಎಂ.ಜಿ.ಆರ್ ಹಾಗೆಯೇಕನ್ನಡಚಿತ್ರರಂಗದಲ್ಲಿಡಾ. ರಾಜಕುಮಾರ್‌ಅವರು ಈ ಕಾಲಘಟ್ಟದ ಪ್ರಮುಖ ನಟರಾಗಿದ್ದರು. ಅವರ ಸಿನಿಮಾಗಳು ಚಿತ್ರರಂಗವನ್ನು ಆಳುತ್ತಿದ್ದವು ಎಂದು ವಿಶ್ವವಿದ್ಯಾಲಯದಇಂಗ್ಲೀಷ್ ವಿಭಾಗದ ಪ್ರಾಧ್ಯಾಪಕ ಪ್ರೊ.ಎನ್ ನಾಗರಾಜು ಹೇಳಿದರು.

ಡಾ.ರಾಜಕುಮಾರ್‌ಅವರು ಸುಮಾರು ೪೮ ವರ್ಷಗಳ ಕಾಲ ಕನ್ನಡಚಿತ್ರರಂಗದಲ್ಲಿತನ್ನದೇಆದಛಾಪು ಮೂಡಿಸಿದ್ದಾರೆ. ಅವರುತಮ್ಮ ಅಭಿಮಾನಿಗಳನ್ನು ಎಂದಿಗೂ ಕಡೆಗಣಿಸಿರಲಿಲ್ಲ ಬದಲಾಗಿಅವರನ್ನುಅಭಿಮಾನಿ ದೇವರುಗಳು ಎಂದು ಸಂಭೋಧಿಸುತ್ತಿದ್ದರು ಹಾಗೂ ನಿರ್ಮಾಪಕರನ್ನುಅನ್ನದಾತಎನ್ನುತ್ತಿದ್ದರು. ಅಷ್ಟೇ ಅಲ್ಲದೆ ಬೇರೆಚಿತ್ರರಂಗದ ನಟರೊಂದಿಗೆ ಒಳ್ಳೆಯ ಬಾಂಧವ್ಯ ಹೊಂದಿರುವುದುಅವರ ವ್ಯಕ್ತತ್ವಕ್ಕೆ ಹಿಡಿದಕನ್ನಡಿ. ನಾವು ಫೆಬ್ರವರಿ ೨೪ರಿಂದ ಮಾರ್ಚ್ ೨೩ರ ವರೆಗೆ ನಡೆಯುವ ೩೦ ದಿನಗಳ ಸಿನಿಮೋತ್ಸವದಲ್ಲಿ ಡಾ.ರಾಜಕುಮಾರ್‌ಅವರ ಸುಮಾರು ೨೨ ಸಿನಿಮಾಗಳನ್ನು ಪ್ರದರ್ಶಿಸಲಿದ್ದೇವೆ. ಮಾರ್ಚ್ ೨೪ರಂದು ಒಂದು ದಿನಸ ವಿಚಾರಸಂಕಿರಣದೊಂದಿಗೆ ಈ ಉತ್ಸವ ಸಮಾಪ್ತೊಯಾಗಲಿದೆ. ವಿಚಾರ ಸಂಕಿರಣದಲ್ಲಿಟಿ.ಎಸ್ ನಾಗಾಭರಣ, ಬರಗೂರುರಾಮಚಂದ್ರಪ್ಪ ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆಎಂದು ವಿಶ್ವವಿದ್ಯಾಲಯದಇಂಗ್ಲೀಷ್ ವಿಭಾಗದ ಮುಖ್ಯಸ್ಥರಾದ ಪ್ರೊ.ಬಸವರಾಗ್ ಪಿ ಡೋನೂರ್ ತಿಳಿಸಿದರು.

ವಿಶ್ವವಿದ್ಯಾಲಯದ ಕುಲಸಚಿವ ಮುಶ್ತಕ್‌ಅಹ್ಮದ್ ಐ ಪಟೇಲ್, ಡಾ. ಮಹಿಮಾರಾಜ್ ಸಿ, ಡಾ. ಪ್ರಕಾಶ್ ಬಾಳೀಕಾಯಿ, ವಿವಿಧ ವಿಭಾಗದ ಮುಖ್ಯಸ್ಥರು, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here