ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನೆ

0
120

ಕಲಬುರಗಿ: ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕ’ಎ’ ಮತ್ತು ’ಬಿ’ ಗಳ೨೦೧೯-೨೦ನೇ ಸಾಲಿನ ವಾರ್ಷಿಕ ವಿಶೇಷ  ಶಿಬಿರವನ್ನು ನಗರದ ಹನುಮಾನತಾಂಡಾದಲ್ಲಿರುವಕೊರಂಟಿ ಹನುಮಾನದೇವಸ್ಥಾನದಲ್ಲಿಉದ್ಘಾಟಿಸಲಾಯಿತು.

ಸ್ಪೂರ್ತಿ, ಕೀರ್ತಿ, ವೈಷ್ಣವಿ ಮತ್ತು ಪವಿತ್ರಾ ಅವರು ರಾಷ್ಟ್ರೀಯ ಸೇವಾ ಯೋಜನೆಯ ಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕ ’ಬಿ’ ಕಾರ್ಯಕ್ರಮಾಧಿಕಾರಿಗಳಾದ ಡಾ. ಮೋಹನರಾಜ್ ಪತ್ತಾರರಾಷ್ಟ್ರೀಯ ಸೇವಾ ಯೋಜನೆ ವಾರ್ಷಿಕ ವಿಶೇಷ ಶಿಬಿರ ದಕುರಿತುಪ್ರಾಸ್ತಾವಿಕವಾಗಿ ಮಾತನಾಡಿ ಮಹಾತ್ಮಗಾಂಧೀಜಿಅವರು ಹೇಳಿರುವ ನಿಮ್ಮನ್ನು ನೀವು ಕಂಡುಕೊಳ್ಳುವ ಬಗೆ ಯಾವುದಾದರೂಇದ್ದರೆಅದು ಮತ್ತೊಬ್ಬರಿಗೆ ಸೇವೆ ಮಾಡುವುದೇಆಗಿದೆ ಮತ್ತು ಜೀವನದ ಸಾರ್ಥಕತೆ ಸೇವೆಯಲ್ಲಡಗಿದೆ ಎಂದು ಹೇಳತ್ತಾ ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು.

Contact Your\'s Advertisement; 9902492681

ಕಾರ್ಯಕ್ರಮಕ್ಕೆಉದ್ಘಾಟಕರಾಗಿ ಮತ್ತು ಸಂಪನ್ಮೂಲ ಮುಖ್ಯಅತಿಥಿಗಳಾಗಿ ಆಗಮಿಸಿದ ಹೈದ್ರಾಬಾದಕರ್ನಾಟಕ ಶಿಕ್ಷಣ ಸಂಸ್ಥೆಯಎಮ್.ಎಸ್. ಇರಾಣಿ ಪದವಿ ಪೂರ್ವ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾದ ಶ್ರೀ.ನರೇಂದ್ರ ಬಡಶೇಷಿ ಅವರುಕಾರ್ಯಕ್ರಮವನ್ನುಸಸಿಗೆ ನೀರುಣಿಸುವುದರ ಮುಖಾಂತರಉದ್ಘಾಟಿಸಿ ಎಲ್ಲಾ ಶಿಬಿರಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು.ಇದೇ ಸಂದರ್ಭದಲ್ಲಿಅವರುರಾಷ್ಟ್ರೀಯ ಸೇವಾ ಯೋಜನೆಯಕುರಿತಾಗಿ ಮಾತನಾಡುತ್ತಾ ಭಾರತ ಸರ್ಕಾರದಿಂದ ಪ್ರಾಯೋಜಿತ ವಾದಸಾರ್ವಜನಿಕ ಶಿಕ್ಷಣ ಸಂಸ್ಥೆ.ಇದರ ಮುಖ್ಯಉದ್ದೇಶ ಭಾರತೀಯ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಸಾರ್ವಜನಿಕ ಸೇವೆಯ ಮೂಲಕ ಅಭಿವೃದ್ದಿಗೊಳಿಸುವುದಾಗಿದೆ.ಇದರ ಮೂಲ ತತ್ವ ವಿದ್ಯಾರ್ಥಿಗಳಿಗೆ ಲೋಕಸೇವೆಯ ಮೂಲಕ ರಾಷ್ಟ್ರ ನಿರ್ಮಾಣದ ಕಾರ್ಯಗಳಲ್ಲಿ ಒಳಗೊಂಡಂತಹ ಅನುಭವವನ್ನು ನೀಡುವುದು ಹಾಗೂ ಇದರೊಂದಿಗೆರಾಷ್ಟ್ರ ಪ್ರೇಮ ಮತ್ತು ಸೇವಾಭಾವನೆಗಳನ್ನು ಬೆಳೆಸುವುದಾಗಿದೆ.ರಾಷ್ಟ್ರೀಯ ಸೇವಾ ಯೋಜನೆ (ಎನ್. ಎಸ್. ಎಸ್) ಒಂದುಅನುಭವ, ಇದರಧ್ಯೇಯ ವಾಕ್ಯ ನನಗಲ್ಲ, ನಿನಗೆ ಎಂದುರಾಷ್ಟ್ರೀಯ ಸೇವಾ ಯೋಜನೆಯಕುರಿತಾಗಿ ಮಾತನಾಡುತ್ತಾತಮ್ಮಅನುಭವವನ್ನು ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ.ರಾಜೇಂದ್ರಕೊಂಡಾಅವರು ವಹಿಸಿಕೊಂಡಿದ್ದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಐಕ್ಯೂಎಸಿ ಸಂಯೋಜಕರಾದಡಾ.ಶಿವರಾಜ ಗೌನಳ್ಳಿ, ನ್ಯಾಕ್ ಸಂಯೋಜಕರಾದಡಾ.ಫರಜಾನಾಜಬೀನ್, ಡಾ.ಮೀನಾಕ್ಷಿ ಬಾಳಿ, ಡಾ.ಶಾಂತಾ ಮಠ, ಡಾ.ನಾಗೇಂದ್ರ ಮಸುತಿ, ಶಕಂತಲಾ ಬಿ, ರಾಷ್ಟ್ರೀಯ ಸೇವಾ ಯೋಜನೆಸಲಹಾ ಮಂಡಳಿಯ ಸದಸ್ಯರಾದಡಾ. ಮಲ್ಲಿಕಾರ್ಜುನಚಿಕ್ಕಿಪಾಟೀಲ, ಡಾ. ಶಾರದಾ ಬೆಕನಾಳ,ಡಾ. ನೀಲಕಂಠ ವಾಲಿ, ಡಾ.ಮಹೇಶಕುಮಾರಗಂವ್ಹಾರ, ಡಾ.ಎನ್.ಜಿ. ಪಾಟೀಲ, ರಾಷ್ಟ್ರೀಯ ಸೇವಾ ಯೋಜನೆ ಘಟಕ’ಎ’ ಯ ಕಾರ್ಯಕ್ರಮಾಧಿಕಾರಿಗಳಾದ ಡಾ.ಪರವಿನ ರಾಜೇಸಾಬ ಮತ್ತು ’ಎ’ ಮತ್ತು ’ಬಿ’ ಘಟಕಗಳ ಸ್ವಯಂ ಸೇವಕಿಯರು ಉಪಸ್ಥಿತರಿದ್ದರು. ಮಹಾವಿದ್ಯಾಲಯದರಾಷ್ಟ್ರೀಯ ಸೇವಾ ಯೋಜನೆಘಟಕ’ಎ’ ಮತ್ತು ’ಬಿ’ ಗಳ ೨೦೧೯-೨೦ನೇ ಸಾಲಿನ ವಾರ್ಷಿಕವಿಶೇಷ ಶಿಬಿರದ ಉದ್ಘಾಟನಾಕಾರ್ಯಕ್ರಮವನ್ನು ಪ್ರೊ. ಕಲಾವತಿ ಡಿ ಅಚ್ಚುಕಟ್ಟಾಗಿ ನಿರೂಪಿಸಿ ನಡೆಸಿಕೊಟ್ಟರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here