ಸೇಡಂ: ಲೇಖಕ, ಪತ್ರಕರ್ತ ಮಹಿಪಾಲರೆಡ್ಡಿ ಮುನ್ನೂರ್ ದಾಂಪತ್ಯ ನಡಿಗೆಗೆ ಇದೀಗ 25 ವರ್ಷದ ಸಂಭ್ರಮ. ಈ ಸಂಭ್ರಮವನ್ನು ಮಹಿಪಾಲರೆಡ್ಡಿ ಮುನ್ನೂರ್ ಅವರ ಮಕ್ಕಳಾದ ಸಿದ್ದಪ್ರಸಾದರೆಡ್ಡಿ, ವಿಜಯಭಾಸ್ಕರರೆಡ್ಡಿ, ಕಾರ್ತಿಕರೆಡ್ಡಿ, ಮಹಾದೇವರೆಡ್ಡಿ ಹಾಡು,ಹೆಜ್ಜೆ, ಮಾತು ಎನ್ನುವ ವೀಶೇಷ ಕಾರ್ಯಕ್ರಮವನ್ನು ಏರ್ಪಡಿಸುವ ಮುಖಾಂತರ ಅಪ್ಪ ಮಹಿಪಾಲರೆಡ್ಡಿ, ಅಮ್ಮ ರತ್ನಕಲಾ ಅವರ ಒಲವಿನ ಪಯಣಕ್ಕೆ ಒಂದು ಸುಂದರ ಸಮಾರಂಭವನ್ನು ಆಯೋಜಿಸಲಾಗಿದೆ. 27 ಸಂಜೆ 5:30 ಕ್ಕೆ ಸೇಡಂನ ಮಹಿಪಾಲರೆಡ್ಡಿ ಅವರ ಮನೆ ‘ಅಮ್ಮ’ ಮನೆಯಂಗಳದಲ್ಲಿ ಕಾರ್ಯಕ್ರಮ ವಿಭಿನ್ನವಾಗಿ ನಡೆಯಲಿದೆ.