ಸುರಪುರ: ಇಂದು ನಮ್ಮ ರಂಗಂಪೇಟೆ ತಿಮ್ಮಾಪುರದ ಭಕ್ತರು ವಾಕ್‌ಶಿದ್ಧಿ ಪುರುಷರ ಅಬ್ಬೆತುಮಕೂರಿನ ವಿಶ್ವರಾಧ್ಯರ ದರ್ಶನಕ್ಕೆ ಪಾದಯಾತ್ರೆ ಮಾಡುತ್ತಿರುವುದು ಸಂತೋಷದ ಸಂಗತಿಯಾಗಿದೆ ಎಂದು ಸುರಪುರ ನಿಷ್ಠಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮೀಜಿ ಮಾತನಾಡಿದರು.
ವಿಶ್ವರಾಧ್ಯರ ಜಾತ್ರಾ ಮಹೋತ್ಸವದ ಅಂಗವಾಗಿ ತಿಮ್ಮಾಪುರದ ಹನುಮಾನ ವೃತ್ತದಿಂದ ಅಬ್ಬೆತುಮಕುರ ವರೆಗೆ ಹಮ್ಮಿಕೊಂಡ ಎರಡನೇ ವರ್ಷದ ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ,ಭಾರತೀಯ ಸಂಸ್ಕೃತಿಯಲ್ಲಿ ಧಾರ್ಮಿಕತೆ ಮತ್ತು ದೇವಾರಾಧನೆಗೆ ಪೂಜ್ಯಭಾವನೆ ಇದ್ದು,ಪ್ರತಿಯೊಬ್ಬರು ದಿನ ಬೆಳಗಾದರೆ ಹೆತ್ತವರಿಂದ ಹಿಡಿದು ಗುರು ಹಿರಿಯರು ಮತ್ತು ದೇವರುಗಳಿಗೆ ನಮಿಸುತ್ತೇವೆ.ವರ್ಷದಲ್ಲೊಮ್ಮೆಯಾದರು ಪುಣ್ಯಕ್ಷೇತ್ರಗಳ ದರ್ಶನಕ್ಕೆ ಹೋಗುತ್ತೆವೆ.ಅಲ್ಲದೆ ಪ್ರತಿ ಊರುಗಳಲ್ಲಿ ದೇವರ ಜಾತ್ರೆಗಳನ್ನು ಆಚರಿಸುವ ಮೂಲಕ ದೇವರಿಗೆ ಭಕ್ತಿ ಸಮಪಿರ್ಸಸುವ ಜೊತೆಗೆ ಎಲ್ಲರಲ್ಲಿ ಸಾಮರಸ್ಯ ಭಾವನೆಯನ್ನು ಬೆಳೆಸಲಾಗುತ್ತದೆ.
ಇದೇ ಸಂದರ್ಭದಲ್ಲಿ ಪಾದಯಾತ್ರೆಗೆ ಶುಭಾಶಿರ್ವಾದ ಮಾಡಿ ಲಕ್ಷ್ಮೀಪುರ ಶ್ರೀಗಿರಿ ಮಠದ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ,ಅಬ್ಬೆ ತುಮಕೂರಿನ ವಿಶ್ವರಾಧ್ಯರ ಮೇಲೆ ಅಪಾರವಾದ ಭಕ್ತಿಯುಳ್ಳ ರಂಗಂಪೇಟೆ ತಿಮ್ಮಾಪುರದ ಜನತೆ ಶಿವರಾಜ ಕಲಕೇರಿ ನೇತೃತ್ವದಲ್ಲಿ ಸತತ ಎರಡನೇ ವರ್ಷದ ಪಾದಯಾತ್ರೆ ಮೂಲಕ ತೆರಳಿ ಜಾತ್ರೆಯಲ್ಲಿ ಭಾಗವಹಿಸುತ್ತಿರುವುದು ವಿಸ್ವರಾಧ್ಯರ ಮೇಲಿನ ಭಕ್ತಿಯನ್ನು ತೋರಿಸುತ್ತದೆ.ಪಾದಯಾತ್ರೆಗೆ ಶುಭವಾಗಲೆಂದು ಹಾರೈಸುವುದಾಗಿ ತಿಳಿಸಿದರು.
ಬಿಜೆಪಿ ಮುಖಂಡರಾದ ದೊಡ್ಡ ದೇಸಾಯಿ ದೇವರಗೋನಾಲ, ಶರಣು ನಾಯಕ ಬೈರಿಮಡ್ಡಿ,ಶಿವರಾಜ ಕಲಕೇರಿ,ಪ್ರಕಾಶ ಅಂಗಡಿ,ಜಗದೀಶ ಪಾಟೀಲ,ಸಣ್ಣ ದೇಸಾಯಿ,ಮಂಜುನಾಥ ಗುಳಗಿ,ಚಂದ್ರಶೇಖರ ಡೊಣೂರ,ಆಕಾಶ ಕಟ್ಟಿಮನಿ,ವಾಸುದೇವ ನಾಯಕ,ಬಸವರಾಜ ರಸ್ತಾಪುರ,ವಿರೇಶ ಕುಂಬಾರ,ಪ್ರವೀಣ ಸ್ವಾಮಿ ಇತರರಿದ್ದರು.