ಉದ್ಯೋಗ ಖಾತ್ರಿಯ ಕೂಲಿ ಹಣ ನೀಡದ ಸರಕಾರಕ್ಕೆ ಧಿಕ್ಕಾರ: ದಾವಲಸಾಬ ನದಾಫ

0
116

ಸುರಪುರ: ಕೂಲಿ ಕಾರ್ಮಿಕರು ಅನೇಕ ತಿಂಗಳುಗಳ ಹಿಂದೆಯೇ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ್ದು ಇದುವರೆಗೂ ಕೂಲಿ ಹಣ ನೀಡದೆ ಸರಕಾರ ಕಾಮಿಕರ ಬದುಕಿಗೆ ಬರೆ ಎಳೆದಿದೆ,ಇದರಿಂದ ಕೂಲಿಕಾರರು ಗುಳೆ ಹೋಗುವ ಪರಸ್ಥಿತಿಗೆ ತಂದ ಸರಕಾರಕ್ಕೆ ಧಿಕ್ಕಾರ ಎಂದು ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ದಾವಲಸಾಬ ನದಾಫ ಬೇಸರ ವ್ಯಕ್ತಪಡಿಸಿದರು.

ಕರ್ನಾಟಕ ಪ್ರಾಂತ ಕೃಷಿ ಕೂಲಿ ಕಾರ್ಮಿಕರ ಸಂಘದ ವತಿಯಿಂದ ನಗರದ ತಾಲೂಕು ಪಂಚಾಯತಿ ಕಚೇರಿ ಆವರಣದಲ್ಲಿ ಹಮ್ಮಕೊಂಡಿದ್ದ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿ ಮಾತನಾಡಿ, ತಾಲೂಕಿನ ಆಲ್ದಾಳ, ನಾಗರಾಳ, ಬೋನಾಳ, ಏವೂರು ಗ್ರಾಮ ಪಂಚಾಯತಿಗಳು ಸೇರಿ ತಾಲೂಕಿನ ಅನೇಕ ಪಂಚಾಯತಿಗಳ ವ್ಯಾಪ್ತಿಯಲ್ಲಿ ಕಳೆದ ಆರು ತಿಂಗಳ ಹಿಂದೆ ದುಡಿದ ಕೂಲಿ ಕಾರ್ಮಿಕರಿಗೆ ಇನ್ನು ಕೂಲಿ ಹಣ ನೀಡಿಲ್ಲ,ಬಡ ಕಾರ್ಮಿಕರ ಬದುಕಿನ ಬಗ್ಗೆ ಸರಕಾರಕ್ಕೆ ಕಿಂಚಿತ್ತೂ ಕಾಳಜಿಯಿಲ್ಲ, ಕಳೆದ ಆರು ತಿಂಗಳಿನಿಂದ ಕಾರ್ಮಿಕರು ಜೀವನ ನಡೆಸಲು ಪರದಾಡುವಂತಾಗಿದೆ ತಕ್ಷಣವೆ ಅಧಿಕಾರಿಗಳು ಎಚ್ಚೆತ್ತುಕೊಂಡು ಕಾರ್ಮಿಕರಿಗೆ ನ್ಯಾಯವದಗಿಸಬೇಕು ಮತ್ತು ಆಲ್ದಾಳ ಪಂಚಾಯತಿಯಲ್ಲಿ ಕಾರ್ಮಿಕರಿಗೆ ಅನ್ಯಾಯವಾಗುತ್ತಿದೆ ತಕ್ಷಣವೆ ಅಧಿಕಾರಿಗಳು ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿಗಳೂಂದಿಗೆ ಚರ್ಚಿಸಿ ಸರಿಪಡಿಸಬೇಕು ಎಂದು ಆಗ್ರಹಿಸಿದರು.

Contact Your\'s Advertisement; 9902492681

ಹಲವು ಗ್ರಾಪಂಗಳಲ್ಲಿ ಇನ್ನು ಕೂಲಿಕಾರ್ಮಿಕರಿಗೆ ಜಾಬ ಕಾರ್ಡಗಳೆ ಆಗಿಲ್ಲ ಮತ್ತು ಕೂಲಿ ಕಾರ್ಮಿಕರ ದಿನದ ಭತ್ಯೆಯನ್ನು ಆರುನೂರು ರೂಪಾಯಿಗಳ ವರೆಗೆ ಹೆಚ್ಚಿಸಬೇಕು ಮತ್ತು ಇನ್ನಿತರ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ಮುಖ್ಯ ಮಂತ್ರಿಯವರಿಗೆ ಬರೆದ ಮನವಿಯನ್ನು ತಾಲೂಕು ಪಂಚಾಯತ ಇಒ ಅಂಬ್ರೇಶಗೆ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಇಒ,ಮೂರು ದಿನಗಳಲ್ಲಿ ಎಲ್ಲರಿಗೂ ಜಾಬ್ ಕಾರ್ಡ್ ಕೊಡಿಸುವುದಾಗಿ ಹಾಗು ಕೂಲಿ ಹಣವನ್ನು ಶೀಘ್ರದಲ್ಲಿ ಕಡಲು ಕ್ರಮ ಕೈಗೊಳ್ಳುವುದಾಗು ಭರವಸೆ ನೀಡಿದ ನಂತರ ಧರಣಿ ನಿಲ್ಲಿಸಲಾಯಿತು.
ಸಂಘದ ತಾಲೂಕು ಅಧ್ಯಕ್ಷ ನಬೀರಸೂಲ್ ನದಾಫ, ರಾಜುದೊಡ್ಮನಿ, ಮಲ್ಲಮ್ಮ ಕೂಡ್ಲಿ, ಕರೆಪ್ಪ ಅಜ್ಜಳ್ಳಿ, ಶರಣಪ್ಪ ಅನ್ಸಾರ, ಲಕ್ಷ್ಮೀ ಕೆಂಗೂರಿ, ರಂಗಂಪ್ಪ್ ನಾಯಕ, ಇಮಾಂಬಿ ದೊಡ್ಮನಿ, ದೇವಕೆಮ್ಮ ನಾಗರಾಳ, ಸಿದ್ದಮ್ಮ ಭಜಂತ್ರಿ, ದುರ್ಗಪ್ಪ ಮಾಲಗತ್ತಿ, ನಿಂಗಣ್ಣ ನಾಟೇಕರ ಸೇರಿದಂತೆ ನೂರಕ್ಕೂ ಹೆಚ್ಚುಜನ ಕಾರ್ಯಕರ್ತರು ಭಾಗವಹಿಸಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here