ಕಲಬುರಗಿ: ಚಿಂಚೋಳಿ ತಾಲ್ಲೂಕಿನ ಪ್ರಮುಖ ಮತ್ತು ಮಧ್ಯಮ ನೀರಾವರಿ ಯೋಜನೆಗಳ ಕಾಲುವೆಗಳ ಕಾಮಗಾರಿಯನ್ನು ನಿರ್ಲಕ್ಷ್ಯ ತೊರಿ ಕಳಪೆ ಕಾಲುವೆ ನಿರ್ಮಿಸಲಾಗಿದೆ ಎಂದು ಆರೋಪಿಸಿ ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ ಅವರು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.
ಚಂದ್ರಂಪಳ್ಳಿ, ಲೋವರ್ ಮುಲ್ಲಮರಿ, ಬೆನ್ನೆ ಟೋರಾ, ಭೀಮಾ ಲಿಫ್ಟ್ ನೀರಾವರಿ, ಅಮರ್ಜಾ, ಗಂಡೋರಿ ನಲಾ, ಕಾರಂಜ, ಚುಲಕಿ ನಲಾ ಹಾಗೂ ಅಪರ್ ಮುಲ್ಲಮರಿ ಸೇರಿ 9 ಕಾಲುವೆ ನಿರ್ಮಾಣದಲ್ಲಿ ಕೆಎನ್ಎನ್ಎಲ್ ಕಲ್ಬುರ್ಗಿ ಐಪಿ ವಲಯದ ನಮ್ಮ ಸಲಹಾ ಅಧಿಕಾರಿಯ ನಿರ್ಲಕ್ಷ್ಯದಿಂದಾಗಿ, ಬಹುತೇಕ ಕಾಮಗಾರಿಗಳು ಬಾಕಿ ಉಳಿದಿವೆ ಮತ್ತು ಅಪೂರ್ಣವಾಗಿವೆ ಅಥವಾ ನೀರು ಹರಿಸುವ ಸ್ಥಿತಿಯಲ್ಲಿಲ್ಲ ಎಂದು ಆರೋಪಿಸಿ, ಕಾಮಗಾರಿಕೆ ನಿರ್ಮಾಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸಿ ರೈತರಿಗೆ ನೀರು ಸಿಗುವ ರೀತಿಯ ಕಾಲುವೆಗಳು ನಿರ್ಮಿಸಬೇಕೆಂದು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.