ಸುರಪುರ: ಇಂದಿನ ಯುಗದಲ್ಲಿ ಒಳ್ಳೆಯ ಕಾರ್ಯಗಳನ್ನು ಮತ್ತು ಧರ್ಮದಿಂದ ನಡೆಯುವವರ ಸಂಖ್ಯೆ ಕಡಿಮೆಯಾಗಿದೆ ಇಲ್ಲಿ ಒಳ್ಳೆಯ ಕೆಲಸ ಮಾಡುವವರು ಇದ್ದಾರೆ ಹಾಗೆ ಕೆಟ್ಟಕೆಲಸಗಳು ಮಾಡುವ ಜನರು ಇದ್ದಾರೆ ನೀವುಗಳು ನಿಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರಗಳನ್ನು ನೀಡಿ ಉತ್ತಮರಾಗಿ ಸಮಾಜದಲ್ಲಿ ಬಾಳಿ ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಎಂದು ವಡವಡಗಿ ಮಠದ ಶ್ರೀ ವೀರಸಿದ್ದೇಶ್ವರ ಮಹಾಸ್ವಾಮಿಜಿ ಹೇಳಿದರು.
ನಗರದ ಕಡ್ಲೆಪ್ಪನವರ ಮಠದ ಆವರಣದಲ್ಲಿ ಲಿಂ.ಮಲ್ಲಿಕಾರ್ಜುನ ಸ್ವಾಮಿಗಳ ೪೪ ನೇ ಪುಣ್ಯ ಸ್ಮರಣೋತ್ಸವದ ನಿಮಿತ್ಯ ಹಮ್ಮಿಕೊಳ್ಳಲಾಗಿದ್ದ ಶರಣರ ಜೀವನ ದರ್ಶನ ಪ್ರವಚನ ಮಹಾಮಂಗಲಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು.ಮಠಗಳು ಜ್ಞಾನ ಮತ್ತು ಉತ್ತಮ ನಡುವಳಿಕೆ ಹಾಗೂ ಸಂಸ್ಕೃತಿಯನ್ನು ನಮ್ಮ ಮಕ್ಕಳಿಗೆ ಕೊಡುತ್ತವೆ ಎಂದರು.
ಗಜೇಂದ್ರಗಡದ ಶರಣಬಸವ ಶರಣರು ಕಾಲಜ್ಞಾನವನ್ನು ಹೇಳುತ್ತಾ ಮಾತನಾಡಿ ಈ ಬಾರಿ ನಮ್ಮ ಭಾಗದಲ್ಲಿ ಹೇಲಿಕೊಳ್ಳುವಷ್ಟು ಮಳೆಯಾಗಿದಿದ್ದರು ಸಹ ಕೃಷ್ಣೆಯು ಮೈದುಂಬಿ ಹರೆಯುತ್ತಾಳೆ ಇದರಿಂದ ಪ್ರವಾಹ ಭಿತಿಎನು ಉಂಟಾಗುವುದಿಲ್ಲ ಮತ್ತು ಈ ಬಾರಿ ಮುಂಗಾರು ಫಸಲು ಕಡಿಮೆ ಮತ್ತು ಹಿಂಗಾರು ಫಸಲು ಹೆಚ್ಚಿಗೆ ಬರುತ್ತದೆ ಈ ವರ್ಷವು ಆಂದ್ರಪ್ರೆದೇಶ ಮತ್ತು ತೆಲಂಗಾಣ ರಾಜ್ಯಗಳು ಬರದಿಂದ ಬಳಲುತ್ತವೆ ನಮ್ಮ ರಾಜ್ಯದ ರೈತಿಗೆ ಸ್ವಲ್ಪಮಟ್ಟಿಗೆ ಪೆಟ್ಟುಬಿದ್ದರು ಹಿಂಗಾರಿನ ಸಮಯದಲ್ಲಿ ಚೇತರಿಕೆ ಕಾಣುತ್ತಾರೆ ಎಂದು ತಿಳಿಸಿದರು.
ಕಾರ್ಯಕ್ರದಲ್ಲಿ ಕಡ್ಲೆಪ್ಪನವರ ಮಠದ ಶ್ರೀ ಪ್ರಭುಲಿಂಗ ಮಹಾಸ್ವಾಮಿಗಳು ಆರ್ಶೀವಚನ ನೀಡಿದರು, ಕಲಬುರ್ಗಿ ಶರಣಬಸ್ವೇಶ್ವರ ವಿದ್ಯಾವರ್ಧಕ ಸಂಸ್ಥೆ ಪ್ರಭುರಾಜ ಅಪ್ಪ, ಡಾ. ಶಕುಂತಲಾ ಎಸ್. ನಿಷ್ಠಿ ವೇದಿಕೆಯಲ್ಲಿದ್ದರು, ಸುನಿಲ ಸರ್ ಪಟ್ಟಣಶಟ್ಟಿ, ಚಂದ್ರಶೇಖರ ಪಂಚಾಂಗ ಮಠ, ಚಂದ್ರಕಾಂತ ಕಳ್ಳಿಮನಿ, ವಿರೇಶ ದೇಶಮುಖ,ರಾಜಶೇಖರ ದೇಸಾಯಿ ಸೇರಿದಂತೆ ನೂರಕ್ಕು ಹೆಚ್ಚು ಭಕ್ತರು ನೆರದಿದ್ದರು. ಇದ್ದರು ಶರಣಬಸವ ಎಳವಾರ ನಿರೊಪಿಸಿದರು, ದೇವು ಹೆಬ್ಬಾಳ ವಂದಿಸಿದರು.