ಸುರಪುರ: ಸಗರನಾಡು ಸೇವಾ ಪ್ರತಿಷ್ಠಾನವತಿಯಿಂದ ತಾಲೂಕಿನ ಕನ್ನೆಳ್ಳಿ ಗ್ರಾಮದ ಬಸವಪ್ರಭು ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂದು ಆಯೋಜಿಸಿದ್ದ ಡಾ. ಪಂಡಿತ ಪುಟ್ಟರಾಜ ಗವಾಯಿಗಳ ೧೦೬ನೇ ಜನ್ಮದಿನೊತ್ಸವ ಸಮಾರಂಭವನ್ನು ಆಚರಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಗದುಗಿನ ವಿರೇಶ್ವರ ಪುಣ್ಯಾಶ್ರಮದ ಪ್ರವಚನಕಾರ ತೊಟೆಂದ್ರ ಶಾಸ್ತ್ರಿಗಳು ಅಬ್ಬೆ ತುಮಕುರು ಮಾತನಾಡಿ, ದೃಷ್ಟಿಹಿನರಾಗಿದ್ದ ಗದುಗಿನ ಗವಾಯಿಗಳು ಈ ನಾಡಿನೊಳಗಡೆ ಅನೇಕ ಜನ ದೃಷ್ಟಿ ಉಳ್ಳವರ ಬಾಳು ಮತ್ತು ಬದುಕಿಗೆ ಬೆಳಾಕಾಗಿರುವದು ಮಹತ್ವದ ಕಾರ್ಯಾವಾಗಿದೆ. ತ್ರಿಭಾಷಾ ಕವಿಗಳು ಎಲ್ಲಾ ಬಗೆಯ ಸಂಗಿತದ ವಾದ್ಯಗಳನ್ನು ಬಲ್ಲವರಾಗಿದ್ದ ಗದುಗಿನ ಗಾನಯೋಜಿ ಶಿವಯೋಗಿ ಪುಟ್ಟರಾಜ ಗವಾಯಿಗಳು ಸಾಹಿತ್ಯ ಮತ್ತು ಸಂಗೀತ ಲೋಕಕ್ಕೆ ಅಪಾರವಾದ ಕೊಡುಗೆಗಳನ್ನು ನಿಡಿದ್ದಾರೆ ಎಂದರು.
ವಿಶ್ವ ಸಂಗೀತ ಲೋಕಕ್ಕೆ ಗದುಗಿನ ಗಾನಯೋಗಿ ಪಂಡಿತ್ ಪುಟ್ಟರಾಜ ಗವಾಯಿಗಳ ಕೋಡುಗೆ ಅಪಾರವಾಗಿದೆ ಹಿಂದಿಯಲ್ಲಿ ಬಸವ ಪುರಾಣವನ್ನು ಬರೆಯುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ ಹಾಗೂ ವಿರೇಶ್ವರ ಪುಣ್ಯಾಶ್ರಮದ ಮೂಲಕ ಸಾವಿರಾರು ಜನ ಅಂಧ, ಅನಾಥ, ದುರ್ಬಲ, ನಿರ್ಗತಿಕರ ಬಾಳಿಗೆ ಬೆಳಕಾಗಿದ್ದಾರೆ. ಅವರಿಗೆ ಸಂಗೀತ, ಸಾಹಿತ್ಯ, ಪುರಾಣ, ಪ್ರವಚನ ಕಲಿಸುವ ಮೂಲಕ ಹೊಸ ದಾಖಲೆ ಸೃಷ್ಟಿಸಿದ್ದಾರೆ. ಪುಟ್ಟರಾಜ ಕವಿ ಗವಾಯಿಗಳನ್ನು ನಿತ್ಯ ನಿರಂತರವಾಗಿ ಶ್ರಮಿಸಿದರು ಕೂಡ ಅವರ ಸೇವೆ ಅಮೋಘ ಮತ್ತು ಅಪಾರ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನ ಅಧ್ಯಕ್ಷ ಪ್ರಕಾಶ ಅಂಗಡಿ ಕನ್ನೆಳ್ಳಿ ಮಾತನಾಡಿ ಹಾನಗಲ್ಲದ ಗುರುಕುಮಾರ ಶಿವಯೋಗಿಗಳು, ಗಾನಯೋಗಿ ಪಂಚಾಕ್ಷರಿ ಗವಾಯಿಗಳು ಈ ನಾಡಿಗೆ ಪುಟ್ಟರಾಜ ಗವಾಯಿಗಳನ್ನು ಪರಿಚಯಿಸುವ ಮೂಲಕ ಸಂಗೀತದ ಬರವನ್ನು ಹೊಗಲಾಡಿಸಿ ಸಂಗೀತ ಲೋಕದ ಹೊಸಕ್ರಾಂತಿ ಮಾಡಿದ್ದಾರೆ ಎಂದು ಹೇಳಿದರು.
ಸಮಾರಂಭದ ಸಾನಿಧ್ಯವನ್ನು ಕೂಡಲಗಿ ಬಾಬ ಮಹಾರಾಜರ ಶ್ರೀಮಠದ ಗಜಾನನ ಮಹಾರಾಜರು, ಕನ್ನೆಳ್ಳಿ ಹಿರೇಮಠದ ಬೂದಯ್ಯ ಸ್ವಾಮಿಗಳು, ಮಂಗಳೂರಿನ ಬಾಲಯ್ಯ ಶರಣರು ವಹಿಸಿ ಆಶಿರ್ವಚನ ನಿಡಿದರು.
ಮುಖ್ಯ ಅತಿಥಿಗಳಾಗಿ ಗ್ರಾಮಪಂಚಾಯತಿ ಮಾಜಿ ಅಧ್ಯಕ್ಷ ದೇವಣ್ಣ ಚಾಂದಕೋಟಿ, ಅಲೇಮಾರಿ ಅನುಷ್ಠಾನ ಸಮಿತಿಯ ಸದಸ್ಯ ಭೀಮರಾಯ ಮಂಗಳೂರು, ಯುವ ಮುಖಂಡ ಮಲ್ಲಿಕಾರ್ಜುನ ರೆಡ್ಡಿ ಅಮ್ಮಾಪೂರ ವೇದಿಕೆಯಲ್ಲಿದ್ದರು ಬಿರೇಶ ಕುಮಾರ ದೇವತ್ಕಲ್ ನಿರೂಪಿಸಿದರು, ಭಾಗ್ಯಶ್ರೀ ಸಂಗಡಿಗರು ಪ್ರಾರ್ಥಿಸಿದರು, ವಿಜಯಕುಮಾರ ಅಂಗಡಿ ಸ್ವಾಗತಿಸಿದರು, ಮೌನೇಶ ಐನಾಪುರ ವಂದಿಸಿದರು.