ಮೂಲಭೂತ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಿ: ಆರ್.ಕೆ.ದತ್ತಾ

0
35

ಕಲಬುರಗಿ: ಪ್ರತಿಯೊಬ್ಬ ಪ್ರಜೆಯು ಸ್ವಾತಂತ್ರ್ಯದ ಹಕ್ಕು, ಸಮಾನತೆಯ ಹಕ್ಕು ಹಾಗೂ ಘನತೆಯಿಂದ ಜೀವಿಸುವ ಹಕ್ಕು ಮುಂತಾದ ಮೂಲಭೂತ ಹಕ್ಕುಗಳ ಸದುಪಯೋಗ ಪಡೆದುಕೊಳ್ಳಬೇಕು. ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ಕರ್ನಾಟಕ ರಾಜ್ಯ ಮಾನವೀಯ ಹಕ್ಕುಗಳು ಆಯೋಗದ ಸದಸ್ಯ ಹಾಗೂ ನಿವೃತ್ತ ಡಿ.ಜಿ. ಮತ್ತು ಐಜಿಪಿಯಾದ ಆರ್.ಕೆ.ದತ್ತಾ ಸಲಹೆ ನೀಡಿದರು.

ನಗರದ ಶರಣಬಸವ ವಿಶ್ವವಿದ್ಯಾಲಯದ ಆವರಣದ ದೊಡ್ಡಪ್ಪ ಅಪ್ಪಾ ಸಭಾ ಮಂಟಪದಲ್ಲಿ ಬುಧವಾರ ಆಯೋಜಿಸಿದ್ದ ’ಮಾನವೀಯ ಹಕ್ಕುಗಳು’ ಎಂಬ ವಿಚಾರ ಸಂಕೀರಣ ಮುಖ್ಯ ಭಾಷಣಕಾರರಾಗಿ ಆಗಮಿಸಿ ಮಾತನಾಡಿದ ಅವರು ಮಾನವೀಯ ಹಕ್ಕುಗಳ ಬಗ್ಗೆ ಹಿಂದಿನ ಕಾಲದಲ್ಲಿಯೂ ಚಿಂತನೆಗಳು ನಡೆದಿದ್ದವು. ಆದರೆ ಇಂದು ನಮ್ಮ ಸಂವಿಧಾನದ ಮುಖಾಂತರ ಪ್ರತಿಯೊಬ್ಬರು ಹಕ್ಕುಗಳ ಉಪಯೋಗಗಳನ್ನು ಪಡೆದುಕೊಳ್ಳುತ್ತಿದ್ದೇವೆ ಎಂದರು. ಸಂವಿಧಾನದಲ್ಲಿ ವಿಶೇಷವಾಗಿ ಮಹಿಳೆ ಮತ್ತು ಮಕ್ಕಳ ಹಕ್ಕುಗಳ ಬಗ್ಗೆ ಉಲ್ಲೇಖಿಸಲಾಗಿದೆ. ದೀನದುರ್ಬಲರು ಸಹಿತ ಸಮಾಜದಲ್ಲಿ ಇತರರಂತೆ ಜೀವಿಸಬಹುದಾಗಿದೆ. ಜಾತಿ, ವರ್ಗ, ಬಣ್ಣ, ಧರ್ಮ, ಲಿಂಗ ಭೇದಗಳಿಂದ ಮುಕ್ತಗೊಳಿಸಿ, ಸಮಾಜದಲ್ಲಿ ಎಲ್ಲರೂ ಸರಿಸಮಾನರು ಎಂದು ನಮ್ಮ ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಅದೇ ರೀತಿ ಪ್ರತಿಯೊಬ್ಬ ಪ್ರಜೆಯೂ ಸಹಿತ ತಮ್ಮ ತಮ್ಮ ಹಕ್ಕುಗಳನ್ನು ಚಲಾಯಿಸಬೇಕು ಹಾಗೂ ಸಂವಿಧಾನದ ಬಗ್ಗೆ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.

Contact Your\'s Advertisement; 9902492681

ದೇಶದ ಪ್ರತಿಯೊಬ್ಬ ಪ್ರಜೆಯೂ ಹೇಗೆ ಹಕ್ಕುಗಳನ್ನು ಪಡೆದುಕೊಳ್ಳುತ್ತಾನೆಯೋ, ಅದೇ ರೀತಿ ಮೂಲಭೂತ ಕರ್ತವ್ಯಗಳನ್ನು, ಜವಬ್ದಾರಿಗಳನ್ನು ನಿಭಾಯಿಸಬೇಕು ಎಂದು ಕರೆನೀಡಿದರು. ಕಲಬುರಗಿಯ ರೋಟರಿ ಕ್ಲಬ್ ಮಿಡ್ ಟೌನ್ ಅಧ್ಯಕ್ಷರಾದ ಕಿರಣ ಕುಮಾರ ಶೆಟಗಾರ ಅವರು ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಯುವಜನತೆ ಉದ್ಯೋಗಕ್ಕಾಗಿ ಯಾವುದೇ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ, ಆದರೆ ಸಂವಿಧಾನದಲ್ಲಿಯ ಮೂಲಭೂತ ಹಕ್ಕುಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಹಾಗೂ ಅವುಗಳ ಉಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ವಿವಿ ಕುಲಪತಿ ಡಾ. ನಿರಂಜನ್ ವಿ.ನಿಷ್ಠಿ ಮಾತನಾಡಿ, ಶಾಲೆ ಕಾಲೇಜುಗಳಲ್ಲಿ ಮಾನವೀಯ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ನಮ್ಮ ಸಂವಿಧಾನ ಬಹು ವಿಶಾಲವಾದ ಹಾಗೂ ವಿಶ್ವದ ಮೆಚ್ಚುಗೆ ಪಡೆದ ಸಂವಿಧಾನವಾಗಿದೆ ಎಂದರು.

ವಿವಿ ಸಮ ಕುಲಪತಿ ಡಾ. ವಿ.ಡಿ.ಮೈತ್ರಿ, ಕುಲಸಚಿವ ಡಾ.ಅನೀಲಕುಮಾರ ಬಿಡವೆ, ಮೌಲ್ಯ ಮಾಪನ ಕುಲಸಚಿವ ಡಾ. ಲಿಂಗರಾಜ ಶಾಸ್ತ್ರಿ , ಶಾಂತಕುಮಾರ ಬಿಲಗುಂದಿ ಇದ್ದರು. ಡಾ. ಸಾರೀಕಾದೇವಿ ಕಾಳಗಿ ನಿರೂಪಿಸಿದರು. ಕು. ಶ್ವೇತಾ ಮೈತ್ರಿ ಪ್ರಾರ್ಥನೆ ಗೀತೆ ಹಾಡಿದರು. ಡಾ. ಸುಮಂಗಲಾ ರೆಡ್ಡಿ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here