ಮಾ. 31 ರವರೆಗೆ ಮಾತ್ರ ಬಿಎಸ್-೪ ವಾಹನಗಳ ನೋಂದಣಿಗೆ ಅವಕಾಶ: ಕೆ. ದಾಮೋದರ

0
35

ಕಲಬುರಗಿ: ಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬಿಎಸ್-4 ವಾಹನಗಳನ್ನು ಖರೀದಿಸಿರುವ ಸಾರ್ವಜನಿಕರು ಕಡ್ಡಾಯವಾಗಿ ಇದೇ ಮಾರ್ಚ್ 31 ರೊಳಗೆ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳಬೇಕೆಂದು ಕಲಬುರಗಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಉಪ ಸಾರಿಗೆ ಆಯುಕ್ತರಾದ ಕೆ. ದಾಮೋದರ ಅವರು ಅವರು ಸೂಚಿಸಿದ್ದಾರೆ.

ಹಾಗೆಯೇ ವಾಹನ ಮಾರಾಟಗಾರರು ಕೂಡ ತಮ್ಮಲ್ಲಿರುವ ಎಲ್ಲಾ ತರಹದ ಬಿಎಸ್-೪ ವಾಹನಗಳನ್ನು ಮಾರಾಟ ಮಾಡಬೇಕು. ಮಾರಾಟ ಸಂದರ್ಭದಲ್ಲಿ, ಮಾರ್ಚ್ ೩೧ರೊಳಗೆ ನೋಂದಣಿ ಮಾಡಿಕೊಳ್ಳುವ ಷರತ್ತನ್ನು ಖರೀದಿದಾರರಿಗೆ ವಿಧಿಸುವ ಮೂಲಕ ಕ್ರಮಕೈಗೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

Contact Your\'s Advertisement; 9902492681

೦೧-೦೪-೨೦೨೦ರಿಂದ ಎಲ್ಲಾ ತರಹದ ಬಿಎಸ್-೪ ವಾಹನಗಳನ್ನು ನೋಂದಣಿ ಮಾಡಕೂಡದೆಂದು ಆದೇಶಿಸಿರುವ ನ್ಯಾಯಾಲಯ, ಬಿಸ್-೬ ವಾಹನಗಳನ್ನು ಮಾತ್ರ ನೋಂದಣಿ ಮಾಡುವಂತೆ ಕಟ್ಟುನಿಟ್ಟಿನ ಅದೇಶ ನೀಡಿರುತ್ತದೆ. ಹಾಗಾಗಿ ಸಾರ್ವಜನಿಕರು ಈಗಾಗಲೇ ಖರೀದಿ ಮಾಡಿ ನೋಂದಣಿ ಮಾಡಿಕೊಳ್ಳದ ( ತಾತ್ಕಾಲಿಕ ನೋಂದಣಿ ಪಡೆದಿದ್ದರೂ ಸಹ) ಹೊಸ ಬಿಎಸ್-೪ ವಾಹನಗಳನ್ನು ೩೧-೦೩-೨೦೨೦ ರೊಳಗೆ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕೆಂದು ಅವರು ಕೋರಿದ್ದಾರೆ.

ದೇಶಾದ್ಯಂತ ಏಕಕಾಲದಲ್ಲಿ ತೆರಿಗೆ ಮತ್ತು ಶುಲ್ಕ ಇ-ಪಾವತಿ ಮಾಡಬೇಕಾಗಿರುವುದರಿಂದ ಸರ್ವರ್ ಮತ್ತು ಇನ್ನಿತರೆ ಗಣಕೀಕರಣ(ಕಂಪ್ಯೂಟರ್) ಪರಿಕರಗಳಲ್ಲಿ ತಾಂತ್ರಿಕ ದೋಷಗಳು ಉದ್ಭವಿಸಬಹುದಾದ ಸಂಭವನೀಯತೆ ಇರುವುದರಿಂದ ೦೧-೦೪-೨೦೨೦ರ ನಂತರ ಗಣಕೀಕರಣದಲ್ಲಿ ಬಿಎಸ್-೪ ವಾಹನಗಳ ಡಾಟಾ ತೆಗೆದುಕೊಳ್ಳಲು ಬರುವುದಿಲ್ಲ.

ಈ ಹಿನ್ನೆಲೆಯಲ್ಲಿ ೩೧-೦೩-೨೦೨೦ ರೊಳಗೆ ಎಲ್ಲಾ ತರಹದ ಬಿಎಸ್-೪ ವಾಹನಗಳನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇಂದಿನಿಂದಲೇ ನೋಂದಣಿ ಮಾಡಿಸಿಕೊಳ್ಳಲು ಮುಂದಾಗಬೇಕೆಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here