ಶಹಾಬಾದ: ಜಂಗಮರು ಬೇಡಜಂಗಮ ಪ್ರಮಾಣ ಪತ್ರ ಪಡೆದು ಮೀಸಲಾತಿಯ ದುರುಪಯೋಗ ಪಡಿಸಿಕೊಳ್ಳಬಾರದೆಂದು ಎಂದು ಸಚಿವ ಗೋವಿಂದ್ ಕಾರಜೋಳ ಹೇಳಿರುವ ಹೇಳಿಕೆಯನ್ನು ಅಖಿಲ ಭಾರತ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಜಿಲ್ಲಾಧ್ಯಕ್ಷ ಮೃತ್ಯುಂಜಯ್ ಹಿರೇಮಠ ಖಂಡಿಸಿದ್ದಾರೆ.
ಬೇಡ ಜಂಗಮ ಪ್ರಮಾಣ ಪತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದೆವೆ ಎಂದು ಯಾರು ಹೇಳಿದರು. ಅದು ಜಂಗಮರ ಹಕ್ಕು. ಸಮಾಜದಲ್ಲಿ ಹಿಂದುಳಿದ, ಆರ್ಥಿಕ ಸ್ಥಿತಿಯಿಂದ ಬಳಲುತ್ತಿರುವ ಜನರಿಗೆ ಇದರ ಉಪಯೋಗವಾದರೆ ಅದರಿಂದ ತಮಗೇನು ಕಷ್ಟ. ಸಂವಿಧಾನದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಮೂಲಭೂತ ಹಕ್ಕನ್ನು ನೀಡಿದೆ.
ಅಲ್ಲದೇ ಇದು ಸರ್ಕಾರದ ಸ್ವತ್ತಾಗಿದೆ. ಆದರೆ ಕಾರಜೋಳ ಅವರು ಸರಿಯಾಗಿ ತಿಳಿದುಕೊಳ್ಳದೇ ಇಲ್ಲಸಲ್ಲದ ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಸಬಕಾ ಸಾಥ್ ಸಬಕಾ ವಿಕಾಸ ಎಂದರೇ ಇದೇನಾ. ಇನ್ನೊಮ್ಮೆ ಇಂತಹ ಉದ್ಧಟತನದ ಹೇಳಿಕೆ ನೀಡುವುದನ್ನು ಬಿಟ್ಟು, ಕೂಡಲೇ ಈ ಬಗ್ಗೆ ರಾಜ್ಯದ ಜನರಲ್ಲಿ ಕ್ಷಮಾಪಣೆ ಕೇಳಬೇಕು.ಇಲ್ಲದಿದ್ದರೇ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
ಚಿತ್ತಾಪೂರ ತಾಲೂಕಾಧ್ಯಕ್ಷ ನೀಲಯ್ಯಸ್ವಾಮಿ ಹಿರೇಮಠ, ಸಿದಯ್ಯಶಾಸ್ತ್ರಿ, ಶರಣಯ್ಯಸ್ವಾಮಿ ಮಠಪತಿ, ಸೋಮಶೇಖರ ನಂದಿಧ್ವಜ, ಶರಣಬಸವ ಗಣಾಚಾರಿ, ಮಹಾದೇವಯ್ಯಸ್ವಾಮಿ ಜೀವಣಗಿ ಇದ್ದರು.